ಸಾರಾಂಶ
ಪಾವಗಡ: ಬಾಲ್ಯದಲ್ಲಿಯೇ ಸದೃಢ ಆರೋಗ್ಯಕ್ಕೆ ಪೌಷ್ಟಿಕತೆಯ ಆಹಾರ ನೀಡುವ ಅಗತ್ಯವಿದ್ದು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾದ್ದುದೆಂದು ಶಾಸಕ ಎಚ್.ವಿ.ವೆಂಕಟೇಶ್ ಮೆಚ್ಚಿಗೆ ವ್ಯಕ್ತಪಡಿಸಿದರು.
ವಿಪ್ರೊ ಮಾಲೀಕ ಅಜಿಂ ಪ್ರೇಮ್ ಜೀ ಅವರ ಫೌಂಡೇಶನ್ ವತಿಯಿಂದ ಶುಕ್ರವಾರ ಮರಿದಾಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೊಟ್ಟೆ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಆರೋಗ್ಯದತ್ತ ಶಿಕ್ಷಕರು ಆಸಕ್ತಿವಹಿಸಬೇಕು. ಅಲ್ಲದೇ ಕಲಿಕೆಗೆ ಪೂರಕವಾದ ವಾತವಾರಣ ಸೇರಿದಂತೆ ಆರೋಗ್ಯಕರ ಪೌಷ್ಟಿಕ ಆಹಾರ ಪದಾರ್ಥ ಸೇವನೆ ಮುಖ್ಯವಾಗಿದೆ. ಸಮಾಜ ಸೇವಕರಾದ ಅಜೀಂ ಪ್ರೇಮ್ ಜೀ ಅವರು ನೇತೃತ್ವದ ಫೌಂಡೇಷನ್ ಇಂತಹ ಕಾರ್ಯಕ್ರಮಕ್ಕೆ ಮುಂದಾಗಿ ರಾಜ್ಯಾದ್ಯಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳ ಕಾಲ ಮೊಟ್ಟೆ ವಿತರಣೆಗೆ ಸಜ್ಜಾಗಿರುವುದು ಅತ್ಯಂತ ಶ್ಲಾಘನೀಯ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ವಿ.ಚಿಂತಲರೆಡ್ಡಿ, ಟಿಪಿಎಸ್ ಹನುಮಂತರಾಯಪ್ಪ, ಪ್ರಭಾಕರ್ ರೆಡ್ಡಿ, ಯಂಜಾರಪ್ಪ, ಶಂಕರ್ ನಾಯ್ಕ್, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.