ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರಟ್ಟೀಹಳ್ಳಿ ಮಂಡಲ ಬಿಜೆಪಿ ಕಾರ್ಯಕರ್ತರು ತಾಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.

ರಟ್ಟೀಹಳ್ಳಿ: ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರಟ್ಟೀಹಳ್ಳಿ ಮಂಡಲ ಬಿಜೆಪಿ ಕಾರ್ಯಕರ್ತರು ತಾಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.

ಈ ವೇಳೆ ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಪ್ರಸ್ತುತ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಇರುವ ಕಾರಣ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿರುವ ಕಾರಣ ನನ್ನ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡಿ ಆಚರಿಸುವುದು ಬೇಡ, ಹಾರ ತುರಾಯಿಗಳು ಬೇಡ ಎಂಬ ಸಂದೇಶ ನೀಡಿದ್ದರಿಂದ ಅವಳಿ ತಾಲೂಕಿನಲ್ಲಿ ಸರಳವಾಗಿ ಆಚರಿಸಲಾಗುತ್ತಿದ್ದು, ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು ಎಂದರು.

ಪೌರ ಕಾರ್ಮಿಕರು ದಿನನಿತ್ಯ ಪಟ್ಟಣದಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಪಟ್ಟಣದ ಅಂದ ಹೆಚ್ಚಿಸಲು ಅವರ ಪಾತ್ರ ಅನನ್ಯ ಆದ್ದರಿಂದ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತೀ ದೊಡ್ಡದು, ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಿದ್ದಿ ಸಮಾಜಕ್ಕೆ ಪ್ರಸ್ತುತ ಪಡಿಸುವ ಅವರ ಕಾರ್ಯ ಬಹುಮುಖ್ಯ ಕಾರಣ ತಾಲೂಕು ಪತ್ರಿಕಾ ಮಾಧ್ಯಮದವರನ್ನು ಗೌರವಿಸಿ ಸನ್ಮಾನಿಸುವ ಮೂಲಕ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು ಎಂದರು.

ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಇಂದು ಅವಳಿ ತಾಲೂಕುಗಳು ಸಮಗ್ರ ಅಭಿವೃದ್ಧಿಗಾಗಿ ಅನೇಕ ಶಾಶ್ವತ ನೀರಾವರಿ ಯೋಜನೆಗಳು, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ವಿಶೇಷವಾಗಿ ರಟ್ಟೀಹಳ್ಳಿ ತಾಲೂಕಿನ ಇತಿಹಾಸದಲ್ಲೇ ಬಿ.ಸಿ. ಪಾಟೀಲ್ ಅವರು 1200 ಕೋಟಿ ವಿಶೇಷ ಅನುದಾನದಲ್ಲಿ ಅಭಿವೃದ್ಧಿಗೊಳಿಸಿದ್ದು, ಎಲ್ಲ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದೇ ರೀತಿ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವಲ್ಲಿ ಎರಡು ಮಾತಿಲ್ಲ. ಬಿ.ಸಿ. ಪಾಟೀಲ್ ಮತ್ತೆ ಸಚಿವರಾಗಿ ಅವಳಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಿದ್ದಾರೆ. ಕಾರಣ ಅವರ ಇಂದಿನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದು ಅವರಿಗೆ ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ, ರವಿ ಹದಡೇರ, ಬಸವರಾಜ ಕಟ್ಟಿಮನಿ, ಮುಖಂಡರಾದ ಆರ್.ಎನ್. ಗಂಗೋಳ, ಶಂಭಣ್ಣ ಗೂಳಪ್ಪನವರ, ರವಿ ಹರವಿಶೆಟ್ಟರ್, ಮಾಲತೇಶಗೌಡ ಗಂಗೋಳ, ಸುಶೀಲ್ ನಾಡಿಗೇರ, ಹನಮಂತಪ್ಪ ಗಾಜೇರ, ರವಿ ಮುದ್ದಣ್ಣನವರ, ನಾಗರಾಜ ದ್ಯಾವಕ್ಕಳವರ, ಮಾಲತೇಶ ಬೆಳಕೆರಿ, ಪ್ರಕಾಶ ಕೊರವರ, ಸಂತೋಷ ಕಾಪ್ಸೀಕರ್, ರಾಜು ಬಟ್ಲಕಟ್ಟಿ, ಲೋಹಿತ್ ಮುದಿಯಪ್ಪನವರ, ಸರೋಜಾ ಹುರಕಡ್ಲಿ, ಕೋಕಿಲ, ಲತಾ ತಡಕನಹಳ್ಳಿ, ರತ್ಮಮ್ಮ ಕಟ್ಟಿಮನಿ, ಬೇಬಿ ಜಾದವ್, ಮಾನಸ ಮಳಗೊಂಡರ್, ಪದ್ಮ, ಮಾಲಕ್ಕ ಬೆಣ್ಣಿ, ನಾಗರಾಜ ಹಿರೇಮಠ, ಸಿದ್ದು ಹಲಗೇರಿ ಮುಂತಾದವರು ಇದ್ದರು.