ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ಬಿ.ಜೆ ಮಂಜುನಾಥ್ ಅಧ್ಯಕ್ಷ

| Published : Jul 10 2025, 12:45 AM IST

ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ಬಿ.ಜೆ ಮಂಜುನಾಥ್ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ ಮಂಜುನಾಥ್ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರವಾಸಿ ಮಂದಿರದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ ಆಯ್ಕೆ

ಕನ್ನಡಪ್ರಭ ವಾರ್ತೆ , ಬೀರೂರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ ಮಂಜುನಾಥ್ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.ನಂತರ ಮಾತನಾಡಿದ ಅಧ್ಯಕ್ಷ ಬಿ.ಜೆ.ಮಂಜುನಾಥ್, ಸಂಘದ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಮತಹಾಕಿ ಗೆಲ್ಲಿಸಿದ್ದಕ್ಕೆ ನಾನು ಕೃತಜ್ಞರಾಗಿದ್ದೇನೆ. ಹಿಂದಿನ ಅಧ್ಯಕ್ಷ ಸದಾಶಿವ ಅವರು ಸಂಘಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಸರ್ವ ಸದಸ್ಯರ ಸಲಹೆ ಸಹಕಾರ ಪಡೆದು ಸಂಘದ ಉನ್ನತಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಜೀವನ ನಿರ್ವಹಣೆಗೆ ವೃತ್ತಿ ಅವಲಂಬಿಸಿರುವ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ ಎಂದರು.

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋಧ್ಯಮಕ್ಕೆ ಹೆಸರುವಾಸಿ. ವಿವಿಧ ಸ್ಥಳಗಳ ಪ್ರವಾಸಿಗರೂ ಇಲ್ಲಿ ಬಂದು ಟ್ಯಾಕ್ಸಿ ಸೇವೆ ಪಡೆಯುತ್ತಿರುತ್ತಾರೆ. ಪ್ರವಾಸಿಗರ ಸುರಕ್ಷತೆ ಮತ್ತು ಅವರ ಮನಸ್ಸಿಗೆ ತೃಪ್ತಿ ಆಗುವಂತೆ ಸೇವೆ ಒದಗಿಸಲು ಮುಂದಾಗಬೇಕು, ಜೊತೆಗೆ ಅವರು ಯಾರು, ನಾವು ಎಲ್ಲಿ ಹೋಗುತ್ತಿದ್ದೇವೆ ಎನ್ನುವ ವಿಷಯ ಸಂಘಕ್ಕಾಗಲಿ ಅಥವಾ ಪಕ್ಕದ ಚಾಲಕ ,ಮಾಲೀಕರಿ ಗಾಗಲಿ ಮಾಹಿತಿ ನೀಡಿ ಹೋಗುವುದು ಒಳಿತು. ನಮ್ಮ ಸುರಕ್ಷತೆ ದೃಷ್ಟಿಯಿಂದ ಇದು ಅಗತ್ಯ. ಶಾಸಕ ಆನಂದ್ ಅವರು ಸಹ ಸಂಘಕ್ಕೆ ಸಹಕರಿಸಿದ್ದು, ಅವರ ಮಾರ್ಗದರ್ಶನದಲ್ಲಿ ನಡೆದು ಸಂಘಕ್ಕೆ ಸ್ವಂತ ನಿವೇಶನ ಪಡೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಸರ್ಕಾರಗಳು ಟ್ಯಾಕ್ಷಿ ಚಾಲಕರಿಗೆ ವಿವಿಧ ಇಲಾಖೆಗಳಿಂದ ಹಲವು ಸೌಲಭ್ಯ ಒದಗಿಸುತ್ತಿದ್ದು, ಸಂಘದ ಸದಸ್ಯರ ಅನುಕೂಲಕ್ಕೆ ಸಿಗಬಹುದಾದ ಸೇವೆ ನೀಡುವಲ್ಲಿ ಶ್ರಮಿಸುವುದಾಗಿ ತಿಳಿಸಿದ ಅವರು ಟ್ಯಾಕ್ಷಿ ಚಾಲಕರು ಪ್ರವಾಸ ಸಂಧರ್ಭದಲ್ಲಿ ಬ್ಯಾಡ್ಜ್ , ಚಾಲನ ಪರವಾನಗಿ, ವಾಹನದ ವಿಮೆ ಮತ್ತು ಇತರೆ ದಾಖಲಾತಿ ಪರಿಶೀಲಿಸಿ ನಂತರ ಕೆಲಸಕ್ಕೆ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ಸಂಘಟನೆ ಇಲ್ಲದೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ನಮ್ಮ ಜೀವ ಪಣಕಿಟ್ಟು ಕುಟುಂಬ ನಿರ್ವಹಣೆಗಾಗಿ ವೃತ್ತಿ ಅವಲಂಭಿಸಬೇಕಾಗಿದೆ. ನಮ್ಮನ್ನು ನಂಬಿ ಬರುವ ಪ್ರಯಾಣಿಕರು ಅಥವಾ ಪ್ರವಾಸಿಗರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲ ಚಾಲಕರು ಜಾಗರೂಕತೆ ಯಿಂದ ಇರುವುದು ಒಳಿತು. ವಾಹನಗಳ ಮಾಲೀಕರು ಸಹ ಚಾಲಕರನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಅವರ ಬದುಕಿಗೆ ಭದ್ರತೆ ಒದಗಿಸಲು ಮುಂದಾಗಬೇಕು. ಸಂಘದ ಅಭಿವೃದ್ಧಿ ಮತ್ತು ಶ್ರೇಯಸ್ಸಿಗೆ ದುಡಿಯಲು ಸದಾ ಸಿದ್ದ ಎಂದರು.ಉಪಾಧ್ಯಕ್ಷ ಕೋಡಿಹಳ್ಳಿ ಮೂರ್ತಿ, ಕಾರ್ಯದರ್ಶಿಯಾಗಿ ರಂಗಸ್ವಾಮಿ, ಗೋವಿಂದರಾಜ್, ಖಜಾಂಚಿ ಸೀಪ್ಯಾಡ್ ಮಂಜು ,ಕ್ರೀಡಾ ಕಾರ್ಯದರ್ಶಿ ಅಜೆಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸುನಿಲ್ , ನಿರ್ದೇಶಕರಾಗಿ ಸತೀಶ್, ಮಲಿಯಪ್ಪ, ಗಣಪತಿ,ಉದಯ್,ಅರುಣ್, ಸಾಗರ್, ಸಚಿನ್ ಪೂಜಾ ಹೋಟೆಲ್ ರಾಮು, ಮಧು ಆಯ್ಕೆಯಾದರು. ಮಾಲೀಕರಾದ, ಬೇಳೆ ರಾಜು, ಚಿಂಗಿ ಅಶೋಕ್, ಹನುಮಂತ್, ಅಪ್ಪಿ, ಗುರಪಾದಿ, ಅದ್ದೂರಿ ಪ್ರಭು, ಚಾಲಕರಾದ ಶ್ರೀಕಾಂತ್, ಸಂತೋಷ್, ಸಂದೀಪ್, ಸೇರಿದಂತೆ ಮತ್ತಿತರಿದ್ದರು ಇದ್ದರು.8 ಬೀರೂರು 1ಬೀರೂರಿನ ಡಾ.ಬಿ.ಆರ್. ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘಕ್ಕೆ ಅಧ್ಯಕ್ಷರಾಗಿ ಬಿ.ಜೆ.ಮಂಜುನಾಥ್ ಆಯ್ಕೆಯಾದರು. ಸಂಘದ ಸದಸ್ಯರು ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಅಭಿನಂದಿಸಿದರು.