ಬಿ ಖಾತಾ ಅಭಿಯಾನ ಬಡವರ ಪಾಲಿಗೆ ಆಶಾಕಿರಣ: ಶಾಸಕ ಬಿ.ಪಿ.ಹರೀಶ್

| Published : Feb 21 2025, 11:48 PM IST

ಬಿ ಖಾತಾ ಅಭಿಯಾನ ಬಡವರ ಪಾಲಿಗೆ ಆಶಾಕಿರಣ: ಶಾಸಕ ಬಿ.ಪಿ.ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಬಿ ಖಾತಾ ಅಭಿಯಾನವು ಬಡವರ ಆಶಾಕಿರಣವಾಗಿದೆ. ನೊಂದ ಜೀವಿಗಳಿಗೆ ವರದಾನವಾಗಿ ಪರಿಣಮಿಸಿದೆ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.

ನಗರಸಭೆಯಲ್ಲಿ ಅಭಿಯಾನಕ್ಕೆ ಚಾಲನೆ । ನಿಯಮ ಪ್ರಕಾರ ಕಂಡಾಯ ಕಟ್ಟಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಹರಿಹರ

ಬಿ ಖಾತಾ ಅಭಿಯಾನವು ಬಡವರ ಆಶಾಕಿರಣವಾಗಿದೆ. ನೊಂದ ಜೀವಿಗಳಿಗೆ ವರದಾನವಾಗಿ ಪರಿಣಮಿಸಿದೆ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.

ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ಬಿ ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್ದಾರಿ ನಗರಸಭಾ ಆಡಳಿತ ಮತ್ತು ಅಧಿಕಾರಿಗಳ ಮೇಲಿದೆ ಎಂದರು.

ಬಿ ಖಾತ ಉತಾರ ಮಾಡಿಕೊಡಲು ಮೂರು ತಿಂಗಳು ಮಾತ್ರ ಸಮಯವಿದ್ದು, ಜನರಿಂದ ಸರಿಯಾದ ದಾಖಲೆ ಪಡೆದು ನಿಯಮಾವಳಿ ಪ್ರಕಾರ ಎಷ್ಟು ಕಂದಾಯ ಕಟ್ಟಬೇಕೋ ಅಷ್ಟನ್ನು ಮಾತ್ರ ಕಟ್ಟಿಸಿಕೊಂಡು ಅವರಿಗೆ ಉತಾರ ನೀಡಬೇಕು. ಸಾರ್ವಜನಿಕರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಸಭೆ ಕರೆಸಲು ನಗರಸಭಾ ಅಧ್ಯಕ್ಷರಿಗೆ ತಿಳಿಸಿದರು.

ಸದಸ್ಯರಾದ ಶಂಕರ ಖಟಾವ್ಕಾರ್ ಮಾತನಾಡಿ, ಬಿ ಖಾತಾ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಕೌನ್ಸಿಲ್ ಸಭಾಂಗಣದಲ್ಲಿ ನಡೆಸದೆ, ಬಹಿರಂಗ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಈ ಬಗ್ಗೆ ಇರುವ ನಿಯಮಾವಳಿ ಹಾಗೂ ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಬೇಕು. ಸಾರ್ವಜನಿಕರು ನಗರಸಭೆಗೆ ಬಂದಾಗ ಇನ್ನು ಗೈಡ್ ಲೈನ್ಸ್ ಬಂದಿಲ್ಲ ಎಂದು ಸಬೂಬು ಹೇಳಿ ಕಳಸಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಕಸದ ವಾಹನ ಮತ್ತು ಪತ್ರಿಕೆಗಳಲ್ಲಿ ಪಾಂಪ್ಲೆಂಟ್ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ತಮ್ಮ ಖಾತೆಗಳನ್ನು ಮಾಡಿಸಲು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯ ದಾದಾ ಖಲಂದರ್ ಮಾತನಾಡಿ, ವಾರ್ಡ್‍ಗಳಿಗೆ ತೆರಳಿ ಸ್ಥಳದಲ್ಲಿಯೇ ಖಾತಾ ನೋಂದಾವಣೆ ಕಾರ್ಯ ಆಗಬೇಕು. ಅಂದಾಗ ಮಾತ್ರ ಈ ಯೋಜನೆಯ ಯಶಸ್ವಿಯಾಗುತ್ತದೆ ಇಲ್ಲವಾದರೆ ಅಧಿಕಾರಿಗಳು ಜನರನ್ನು ದಿಕ್ಕು ತಪ್ಪಿಸುವುದರ ಜತೆಗೆ ಬ್ರೋಕರ್‌ಗಳ ಹಾವಳಿ ಹೆಚ್ಚುತ್ತದೆ. ಇದರಿಂದ ಸಾರ್ವಜನಿಕರು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂದರು.

ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಇಲ್ಲಿನ ಕಂದಾಯ ಶಾಖೆ ಹದಗೆಟ್ಟಿದೆ. ಒಂದು ಖಾತ ಉತಾರ ನೀಡಲು ಆರು ತಿಂಗಳು ವರ್ಷಗಳ ಕಾಲ ಅಲೆಯಬೇಕಾಗಿದೆ. ಯಾರೂ ಸದಸ್ಯರ ಮಾತನ್ನೆ ಕೇಳುತ್ತಿಲ್ಲ. ಪಕ್ಕದ ದಾವಣಗೆರೆ ನಗರ ಪಾಲಿಕೆಯಲ್ಲಿ ಸರಿಯಾದ ದಾಖಲಾತಿ ನೀಡಿದರೆ ಸಾಕು. ಜನರಿಗೆ ಸರಾಗವಾಗಿ ಸೌಲಭ್ಯಗಳು ದೊರೆಯುತ್ತವೆ. ಆದರೆ ಇಲ್ಲಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳು ನೀಡುತ್ತಿರುವ ತೊಂದರೆಯನ್ನು ಶಾಸಕರ ಮುಂದೆ ಹೇಳುವ ಗಲಾಟೆಯಲ್ಲಿ ನಗರ ಸಭಾಧ್ಯಕ್ಷರಿಗೆ ಮಾತನಾಡಲು ಅವಕಾಶ ನೀಡದೆ ಕಾರ್ಯಕ್ರಮ ಮುಗಿದು ಹೋಯಿತು.

ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ.ಜಂಬಣ್ಣ. ಸದಸ್ಯರಾದ ಆರ್.ಸಿ ಜಾವೀದ್, ಪಿ.ಎನ್ ವಿರೂಪಾಕ್ಷಿ, ಆಟೋ ಹನುಮಂತಪ್ಪ, ಬಾಬುಲಾಲ್, ಸುಮಿತ್ರಾ ಮರಿದೇವ್, ಸೈಯದ್ ಅಲೀಮ್, ಕೆ.ಬಿ. ರಾಜಶೇಖರ್ ಸಂತೋμï ದೊಡ್ಮನಿ ಇತರರು ಇದ್ದರು.