ರಂಗಭೂಮಿಯನ್ನು ಕಾಪಾಡಲು ಪ್ರೇಕ್ಷಕರಿಂದ ಮಾತ್ರವೇ ಸಾಧ್ಯ

| Published : Jul 29 2024, 12:57 AM IST

ಸಾರಾಂಶ

Mysore, Rajarajeshwari Vastra Alankara Head

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿಯನ್ನು ಕಾಪಾಡಲು ಪ್ರೇಕ್ಷಕರಿಂದ ಮಾತ್ರವೇ ಸಾಧ್ಯ ಎಂದು ರಾಜರಾಜೇಶ್ವರಿ ವಸ್ತ್ರಾಲಂಕಾರ ಮುಖ್ಯಸ್ಥ ಬಿ.ಎಂ. ರಾಮಚಂದ್ರ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ನಾಲ್ವಡಿ ಸೋಶಿಯಲ್‌, ಕಲ್ಚರಲ್‌ ಅಂಡ್‌ ಎಜುಕೇಷನಲ್‌ ಟ್ರಸ್ಟ್‌ ಹಳೆಮನೆ ಅಂಗಳದಲ್ಲಿ ರಂಗ ತಾರೆಗಳ ನೆನಪು 6ನೇ ವರ್ಷದ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಚೀನಿ ಮಾಮನಿಗಗಿ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸನ್ನಿವೇಶದಲ್ಲಿ ರಂಗಭೂಮಿಯ ಹಿರಿಯರ ಸಾಧನೆ ಹಾಗೂ ಅವರ ಪಯಣದ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನಿಯ ಎಂದರು.

ಚೀನಿ ಮಾಮ ಸಂಗೀತವನ್ನು ಬಹಳಷ್ಟು ಪ್ರೀತಿಸುತ್ತಿದ್ದರು. ಅಪಶೃತಿ ಹಾಡಿದರೆ ರಾಕ್ಷಸರಾಗಿ ಬಿಡುತ್ತಿದ್ದರು. ಸಂಗೀತದ ಮೇಲಿನ ಪ್ರೀತಿ ಅವರನ್ನು ನಾವೆಲ್ಲಾ ನೆನಪಿಸಿಕೊಳ್ಳುವಂತೆ ಮಾಡಿದೆ. ನಾಟಕದ ಎಲ್ಲಾ ಮಜಲುಗಳನ್ನು ಅರಿತ ಅವರು ರಂಗಭೂಮಿಯಲ್ಲಿ ಇರುವವರಿಗೆ ಮಾದರಿ ವ್ಯಕ್ತಿ ಎಂದು ಅವರು ಹೇಳಿದರು.

ಹಿರಿಯ ನಟ ಶಿವಾಜಿರಾವ್‌ ಜಾಧವ್‌ ಮತ್ತು ತಂಡ ಚೀನಿ ಮಾಮ ನಿರ್ದೇಶಿಸಿದ ಹಾಡುಗಳನ್ನು ಹಾಡಿದರು. ಸಭಾ ಕಾರ್ಯಕ್ರಮದ ನಂತರ ಮಂಜುನಾಥ ಬೆಳಕೆರೆ ರಚಿಸಿರುವ ದಿನೇಶ್‌ ಚಮ್ಮಾಳಿಗೆ ನಿರ್ದೇಶಿಸಿದ ಶರೀಫ ನಾಟಕ ಪ್ರದರ್ಶನವಾಯಿತು.

ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್, ಹಿರಿಯ ರಂಗಕರ್ಮಿ ನಂದಾ ಹಳೆಮನೆ, ನಾಲ್ವಡಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಚಮ್ಮಾಳಿಗೆ ಮೊದಲಾದವರು ಇದ್ದರು.