ಬಿ ಆರ್ ನಾಗೇಂದ್ರ ಪ್ರಸಾದ್‌ಗೆ ಆತಿಥ್ಯ ರತ್ನ ರಾಜ್ಯಮಟ್ಟದ ಪ್ರಶಸ್ತಿ

| Published : Jun 01 2025, 04:36 AM IST

ಬಿ ಆರ್ ನಾಗೇಂದ್ರ ಪ್ರಸಾದ್‌ಗೆ ಆತಿಥ್ಯ ರತ್ನ ರಾಜ್ಯಮಟ್ಟದ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಛೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಬಿ. ಆರ್‌. ನಾಗೇಂದ್ರ ಪ್ರಸಾದ್‌ ಅವರು ಆತಿಥ್ಯ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕರು ಹಾಗೂ ಕೊಡಗು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ಅವರು ಕರ್ನಾಟಕ ರಾಜ್ಯ ಹೋಟೆಲ್ ಸಂಘದ ವತಿಯಿಂದ ನೀಡಲಾದ ಆತಿಥ್ಯ ರತ್ನ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರಿನ ಎಫ್ ಕೆ ಸಿ ಸಿ ಐ ಭವನದಲ್ಲಿ ನಡೆದ ರಾಜ್ಯ ಹೋಟೆಲ್ ಸಂಘದ 70ನೇ ವಾರ್ಷಿಕ ಸಮಾರಂಭದಲ್ಲಿ

ರಾಜ್ಯಪಾಲ ಥಾವರ್ ಚೆಂದ್ ಗೆಹಲೋಟ್, ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಈ ಸಂದರ್ಭ ಸಂಘದ ರಾಜ್ಯ ಅಧ್ಯಕ್ಷರಾದ ಜಿ ಕೆ ಶೆಟ್ಟಿ ಗೌರವಾಧ್ಯಕ್ಷರಾದ ಚಂದ್ರಶೇಖರ್ ಹೆಬ್ಬಾರ್ ಮತ್ತಿತರ ಗಣ್ಯರು ಇದ್ದರು.