ಕಾವೇರಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ರವೀಂದ್ರ ಅವಿರೋಧ ಆಯ್ಕೆ

| Published : Jul 16 2025, 12:45 AM IST

ಕಾವೇರಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ರವೀಂದ್ರ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ವಾರ್ಷಿಕ ವಹಿವಾಟು ಮೂರು ಕೋಟಿಗೂ ಮೀರಿದೆ. ವ್ಯಾಪಾರ ಸಾಲ, ಶ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 50 ಲಕ್ಷ ರು. ಸಾಲ ನೀಡಲಾಗಿದೆ. ಅಲ್ಲದೆ ಪ್ರತಿದಿನ ಪಿಗ್ಮಿ ರೂಪದಲ್ಲಿ 30 ಸಾವಿರ ಸಂಗ್ರಹಿಸಗುತ್ತಿದೆ. ಸುಸ್ತಿ ಸಾಲ ವಸೂಲಾತಿಗೆ ಈಗಾಗಲೇ ಸುಸ್ತಿದಾರರ ವಿರುದ್ಧ ಸಂಘ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಗೆ ಮುಂದಾಗಿದೆ.

ಕನ್ನಡ ಪ್ರಭ ವಾರ್ತೆ ಮದ್ದೂರು

ಪಟ್ಟಣದ ಕಾವೇರಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ರವೀಂದ್ರ ಬೊಮ್ಮನದೊಡ್ಡಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷ ಎಂ.ಸಿ.ರೇಣುಕುಮಾರ್ ಅವರು ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದ ರವೀಂದ್ರ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಸಂತೋಷ್ ಪ್ರಕಟಿಸಿದರು.

ನೂತನ ಅಧ್ಯಕ್ಷರನ್ನು ಸಂಘದ ಉಪಾಧ್ಯಕ್ಷೆ ಬಿ.ಎಸ್.ಶೈಲಾ, ನಿರ್ದೇಶಕರಾದ ರಾಮಚಂದ್ರ, ಶೈಲಜಾ, ದೇಶಹಳ್ಳಿ ಗುರುಲಿಂಗಯ್ಯ, ಸತೀಶ, ನಂಜುಂಡಸ್ವಾಮಿ, ನಾಗೇಂದ್ರ, ಸಿ.ಡಿ.ಸಂತೋಷ, ನಾಗಭೂಷಣ, ಎ.ಸಿ.ಕುಮಾರ್, ಡಿ.ಬಿ.ನಾಗರತ್ನ, ಕಾರ್ಯದರ್ಶಿ ಬಿ.ಗೌರಮ್ಮ, ಸಿಬ್ಬಂದಿಗಳಾದ ಬಿ.ಸಿ. ಸವಿತಾ, ಡಿ.ಆರ್. ಪ್ರಿಯಾಂಕಾ, ಎಂ.ಜಿ.ಶಿವನಂಜು ಮತ್ತಿತರರು ಅಭಿನಂದಿಸಿದರು.

ನಂತರ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ರವೀಂದ್ರ ಮಾತನಾಡಿ, ಸಂಘದ ವಾರ್ಷಿಕ ವಹಿವಾಟು ಮೂರು ಕೋಟಿಗೂ ಮೀರಿದೆ. ವ್ಯಾಪಾರ ಸಾಲ, ಶ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 50 ಲಕ್ಷ ರು. ಸಾಲ ನೀಡಲಾಗಿದೆ. ಅಲ್ಲದೆ ಪ್ರತಿದಿನ ಪಿಗ್ಮಿ ರೂಪದಲ್ಲಿ 30 ಸಾವಿರ ಸಂಗ್ರಹಿಸಗುತ್ತಿದೆ. ಸುಸ್ತಿ ಸಾಲ ವಸೂಲಾತಿಗೆ ಈಗಾಗಲೇ ಸುಸ್ತಿದಾರರ ವಿರುದ್ಧ ಸಂಘ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಗೆ ಮುಂದಾಗಿದೆ ಎಂದು ವಿವರಿಸಿದರು.