ಸಾರಾಂಶ
ಯುವ ಕಾಂಗ್ರೆಸ್ ತಾಲೂಕು ಘಟಕದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಪಾವಗಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚಿನ್ನಮ್ಮನಹಳ್ಳಿಯ ಬಿ.ಸುಜಿತ್ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ಯುವ ಕಾಂಗ್ರೆಸ್ ತಾಲೂಕು ಘಟಕದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಪಾವಗಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚಿನ್ನಮ್ಮನಹಳ್ಳಿಯ ಬಿ.ಸುಜಿತ್ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.ಒಂದು ತಿಂಗಳ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಆನ್‌ಲೈನ್ ಪ್ರಕ್ರಿಯೆ ಮೂಲಕ ಮತದಾನ ನಡೆಸಿದ್ದು, ಈ ಸಂಬಂಧ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹೆಚ್ಚು ಮತ ಪಡೆಯುವ ಮೂಲಕ ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ಬಿ.ಸುಜಿತ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಾಗೆಯೇ ನಗರ ಘಟಕದ ಅಧ್ಯಕ್ಷರಾಗಿ ನವೀನ್‌ಕುಮಾರ್ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಭಾನುವಾರ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಮಾಜಿ ಅಧ್ಯಕ್ಷ ಜಿ ಮಹೇಶ್, ಹೊಸಹಳ್ಳಿ ಮಂಜುನಾಥ್,ಪಳವಳ್ಳಿ ಶಿವಕುಮಾರ್, ಕೃಷ್ಣಮೂರ್ತಿ, ಪ್ರಕಾಶ್ , ಬಾಲು,ಪಿ ಎಲ್ ಮಣಿ, ಓಂಕಾರ್ ನಾಯಕ, ಹನುಮೇಶ್,ಗೋವಿಂದ ಯಾದವ್,ಭಾನು ಸೇರಿ ಇನ್ನೂ ಮುಂತಾದ ಯುವ ಕಾರ್ಯಕರ್ತರು ಇದ್ದರು.