ಸಾರಾಂಶ
1 ತಂಡಕ್ಕೆ 40 ನಿಮಿಷಗಳ ಕಾಲ ಅವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಅಣ್ಣೂರು ಸಂತೋಷ್ ಮತ್ತು ತಂಡ 2386 ಕೆ.ಜಿ ಕಬ್ಬು ಕಡಿದು ಪ್ರಥಮ ಸ್ಥಾನ ಪಡೆದರೆ, ಕಾರ್ಕಹಳ್ಳಿ ಬಸವೇಶ್ವರ ಯುವಕರ ಬಳಗ 2380 ಕೆ.ಜಿ. ಕಬ್ಬು ಕಡಿದು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಾರ್ಕಹಳ್ಳಿಯಲ್ಲಿ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ‘ಬಾ ಗುರು ಕಬ್ಬು ಕಡಿ’ ಸ್ಪರ್ಧೆಯಲ್ಲಿ ಅಣ್ಣೂರು ಸಂತೋಷ್ ಮತ್ತು ತಂಡ 2386 ಕೆ.ಜಿ ಕಬ್ಬು ಕಡಿದು ಪ್ರಥಮ ಬಹುಮಾನ ಪಡೆದರು. ಗ್ರಾಮದ ಮಹದೇವು ಅವರ ಜಮೀನಿನಲ್ಲಿ ನಡೆದ ಕಬ್ಬು ಕಟಾವು ಮಾಡುವ ಸ್ಪರ್ಧೆಗೆ ಗದ್ದೆ ಮಾಲೀಕ ಮಹದೇವು ಚಾಲನೆ ನೀಡಿದರು. ಈ ಸ್ಪರ್ಧೆಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು.1 ತಂಡಕ್ಕೆ 40 ನಿಮಿಷಗಳ ಕಾಲ ಅವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಅಣ್ಣೂರು ಸಂತೋಷ್ ಮತ್ತು ತಂಡ 2386 ಕೆ.ಜಿ ಕಬ್ಬು ಕಡಿದು ಪ್ರಥಮ ಸ್ಥಾನ ಪಡೆದರೆ, ಕಾರ್ಕಹಳ್ಳಿ ಬಸವೇಶ್ವರ ಯುವಕರ ಬಳಗ 2380 ಕೆ.ಜಿ. ಕಬ್ಬು ಕಡಿದು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ದೇವೇಗೌಡನದೊಡ್ಡಿ ಗ್ರಾಮದ ಸುನಿಲ್ ಮತ್ತು ತಂಡ 1955 ಕೆ.ಜಿ ಕಬ್ಬು ಕಡಿದು 3ನೇ ಬಹುಮಾನ, ಕಾರ್ಕಹಳ್ಳಿ ಶ್ರೀಕಾಲಭೈರವೇಶ್ವರ ಯುವಕರ ಬಳಗ 1871 ಕೆ.ಜಿ ಕಡಿದು 4ನೇ ಬಹುಮಾನ, ರಮೇಶ್ (ಬಿಲ್ಲಾ) ತಂಡ 1680 ಕೆಜಿ ಕಬ್ಬು ಕಡಿದು 5 ನೇ ಬಹುಮಾನ, ಬೊಪ್ಪಸಮುದ್ರದ ಗೌರಿಶಂಕರ್ ಮತ್ತು ತಂಡ 1608 ಕೆ.ಜಿ ಕಬ್ಬು ಕಡಿದು 6 ನೇ ಬಹುಮಾನ, ತೊರೆಬೊಮ್ಮನಹಳ್ಳಿ ಪ್ರಜಾಪ್ರಿಯ ಸೇವಾಟ್ರಸ್ಟ್ ತಂಡ 1345 ಕೆ.ಜಿ ಕಬ್ಬು ಕಡಿದು 7 ನೇ ಬಹುಮಾನ ಪಡೆದುಕೊಂಡಿದ್ದಾರೆ.