ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಾಬಾ ಸಾಹೇಬರು ಮೊದಲು ಬಾರಿಗೆ ನವಯಾನ ಸ್ಥಾಪನೆ ಮಾಡಿದ್ದು ಬುದ್ಧನಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಿ ಎಂದು ನಟ ಅಹಿಂಸಾ ಚೇತನ್ ಹೇಳಿದರು.ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ರಾಜ್ಯ ಭಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ-ಸಂಸ್ಥೆಗಳು ಮತ್ತು ವಿಶ್ವ ಮೈತ್ರಿ ಬುದ್ಧವಿಹಾರದ ಸಂಯುಕ್ತಾಶ್ರಯದಲ್ಲಿ ಬುಧವಾರ ನಳಂದ ವೇದಿಕೆಯಲ್ಲಿ ‘ಬೌದ್ಧ ಧರ್ಮದ ಮೌಲ್ಯ ಹಾಗೂ ಆಧುನಿಕ ವಿಜ್ಞಾನ’ ವಿಷಯದ ಕುರಿತು ಅಯೋಜಿಸಿದ್ದ ಕವಿಗೋಷ್ಠಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ನನಗೆ ಮಾದರಿ ಬುದ್ಧ- ಬಸವ, ಅಂಬೇಡ್ಕರ್ ಆಗಿದ್ದಾರೆ.
ರಾಗ, ದ್ವೇಷ, ಮೋಹದಿಂದ ಹೊರಗೆ ಬಂದು ಸಾತ್ವಿಕ ಜೀವನ ನಡೆಸುವ ಪದ್ಧತಿಯನ್ನು ಕಲಿಸುವ ಬೌದ್ಧಧರ್ಮ ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಬಾಬಾ ಸಾಹೇಬರು ಸಂವಿಧಾನ ಶಿಲ್ಪಿಯಾಗಿದ್ದಾಗ ಸಾಕಷ್ಟು ವಿರೋಧಿಗಳಿದ್ದರು ಅದನ್ನು ಲೆಕ್ಕಿಸದೇ ಅದನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದರು.ಮನುಕುಲದಲ್ಲಿ ಅತ್ಯಂತ ಮುಖ್ಯವಾದ ವಿಚಾರ ಬೌದ್ಧಧರ್ಮದಲ್ಲಿ ಮಾತ್ರ ಇದ್ದು ಬೌದ್ಧ ಧರ್ಮ ಬಹಳವಿಶಾಲವಾಗಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರು ನವಯಾನ ಜಾರಿಗೆ ತಂದಿದ್ದು ನಾವೆಲ್ಲಾ ಸಮಾನಮನಸ್ಕರು. ಬುದ್ದ ಒಂದು ಸಮಾನತೆ, ಬ್ರಾಹ್ಮಣ ಒಂದು ಅಸಮಾನತೆಯಾಗಿದೆ. ಬುದ್ದ ಆಧ್ಯಾತ್ಮಿಕ ಚಿಂತನೆ ಜಾರಿಗೆ ತಂದಿದ್ದಾರೆ. ಕ್ರಾಂತಿ ತರುವ ಧರ್ಮ ಬುದ್ದ ಧರ್ಮ, ಬಸವಣ್ಣ ಧರ್ಮ, ಅಂಬೇಡ್ಕರ್ ಧರ್ಮ ಮಾತ್ರ ಎಂದು ಹೇಳಬಹುದು
ಸಮ ಸಮಾಜಕ್ಕೆ ನಾವೆಲ್ಲರೂ ಸಾಗಬೇಕು. ಬುದ್ಧವಾದ ಪರಿವರ್ತನಾವಾದ ಅಹಿಂಸಾವಾದ ಸತ್ಯವಾದ ಅಗತ್ಯ ಎಂದರು.ಬುದ್ಧನ ಜೀನವ ಸಾಧನೆ ಅನುಕರಣೀಯ: ಥೈಲ್ಯಾಂಡ್, ಜಪಾನ್, ಚೈನಾದಂತಹ ದೇಶಗಳಲ್ಲಿ ಅಲ್ಲಿಯ ಜನರ ಭಕ್ತಿ, ಸೇವೆ ಮೆಚ್ಚುವಂಥದ್ದು. ಬುದ್ಧರ ಕುರಿತ ಕಾರ್ಯಕ್ರಮಗಳಿಗೆ ಜನ ಹರಿದು ಬರುತ್ತಾರೆ. ಅಲ್ಲಿಯ ಜನರು ಉತ್ತಮ ಶೀಲವಂತರು, ಸದಾಚಾರಿಗಳು ಹಾಗೂ ಭೌದ್ಧ ಸಂಸ್ಕೃತಿ ಉಳ್ಳವರಾಗಿದ್ದಾರೆ , ಏಷ್ಯಾದ ಬೆಳಕು ಎಂದು ಪ್ರಸಿದ್ಧಿ ಪಡೆದ ಗೌತಮ ಬುದ್ಧನ ಜೀವನ ಮತ್ತು ಸಾಧನೆ ಅನುಕರಣೀಯ ಎಂದರು.
ಬೌದ್ಧ ಮತ್ತು ವಿಜ್ಞಾನ ವಿಷಯದ ಕುರಿತು ಚಿಂತಕ ಪ್ರೊ.ಹರಿರಾಮ್ ಮಾತನಾಡಿ, ಬಾಬಾ ಸಾಹೇಬ್ ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿದ್ದು ಅದು ವೈಜ್ಞಾನಿಕ ಧರ್ಮವನ್ನು ಹೊಂದಿದ್ದು ಅದು ಮೌಡ್ಯವನ್ನು ತಳ್ಳಿ ಹಾಕುವ ಧರ್ಮವಾಗಿದ್ದು ಮತಾಂತರಆಗಿದ್ದರುಎಂದು ಹೇಳಿದರು.ಯಾವ ನಿಮ್ಮ ಅನುಭಕ್ಕೆ ಬರುತ್ತದೆ ಹಾಗೂ ನಿಮಗೂ ಮತ್ತೊಬ್ಬರಿಗೂ ಒಳ್ಳೆಯದಾಗುತ್ತದೋ ಅದನ್ನು ಸ್ವೀಕರಿಸು ಎಂದು ಭೌದ್ಧ ಧರ್ಮಹೇಳಿದ್ದು ನಿವೆಲ್ಲರೂ ಅದನ್ನು ನಂಬಬೇಕು. ಬುದ್ಧರು ಪ್ರಕೃತಿ ಜೊತೆ ಹೋಗಿದ್ದು ಮೌಡ್ಯವನ್ನು ನಂಬಿರಲಿಲ್ಲ. ಬುದ್ಧನ ಧರ್ಮದಲ್ಲಿ ಧ್ಯಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು ಧ್ಯಾನ ಎಂಬುದು ವೈಜ್ಞಾನಿಕವಾಗಿದೆ ಎಂದರು.
ನಾವು ಬೇರೆ ಧರ್ಮ ನೋಡಿದಾಗ ನಂಬಿಕೆ ಮೇಲೆ ನಿಂತಿದೆ ಆದರೆ ನಂಬಿಕೆ ಯಿಂದ ಹೊರಬಂದು ಸತ್ಯವನ್ನು ಶೋಧಿಸುವ ವೈಜ್ಞಾನಿಕ ಮನೋಭಾವನೆ ಒಳಗೊಂಡಿದೆ. ಆಧ್ಯಾತ್ಮಿಕತೆ ಎಂದರೆ ನಂಬಿಕೆ ಆಚಾರದ ವಿಷಯವಲ್ಲಬೌದ್ಧ ಧರ್ಮ ಎಂದರೆ ಪ್ರಕೃತಿದತ್ತವಾದ ಧರ್ಮ ಎಂದು ಅವರು ತಿಳಿಸಿದರು.