ಸಮಾಜ ಸೇವಕ ಬಾಚಹಳ್ಳಿ ಪ್ರತಾಪ್‌ಗೌಡ ಉತ್ತರಖಾಂಡ್ ರಾಜ್ಯದ ಜೋಷಿಮಠ ಸಮೀಪ ನಡೆದ ಹೆಲಿಕ್ಯಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ಹೆತ್ತೂರು ಹೋಬಳಿಯ ಬಾಚಹಳ್ಳಿ ಗ್ರಾಮದ ಪ್ರತಾಪ್‌ ಗೌಡ ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿ ಹೆಸರು ಗಳಿಸಿದ್ದು ತಮ್ಮ ದುಡಿಮೆಯ ಸಾಕಷ್ಟು ಹಣವನ್ನು ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಉದ್ಧಾರಕ್ಕಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ, ಶಾಲೆಗಳ ಅಭಿವೃದ್ಧಿಗಾಗಿ ವೆಚ್ಚ ಮಾಡುವ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿದ್ದ ಪ್ರತಾಪ್ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಸುಮಾರು ೨೫ ಲಕ್ಷ ರು. ವೆಚ್ಚದ ಕೆಂಪೆಗೌಡರ ಪ್ರತಿಮೆಯನ್ನು ದಾನವಾಗಿ ನೀಡಿದ್ದರು.

ಸಕಲೇಶಪುರ: ಸಮಾಜ ಸೇವಕ ಬಾಚಹಳ್ಳಿ ಪ್ರತಾಪ್‌ಗೌಡ ಉತ್ತರಖಾಂಡ್ ರಾಜ್ಯದ ಜೋಷಿಮಠ ಸಮೀಪ ನಡೆದ ಹೆಲಿಕ್ಯಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ಹೆತ್ತೂರು ಹೋಬಳಿಯ ಬಾಚಹಳ್ಳಿ ಗ್ರಾಮದ ಪ್ರತಾಪ್‌ ಗೌಡ ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿ ಹೆಸರು ಗಳಿಸಿದ್ದು ತಮ್ಮ ದುಡಿಮೆಯ ಸಾಕಷ್ಟು ಹಣವನ್ನು ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಉದ್ಧಾರಕ್ಕಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ, ಶಾಲೆಗಳ ಅಭಿವೃದ್ಧಿಗಾಗಿ ವೆಚ್ಚ ಮಾಡುವ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿದ್ದ ಪ್ರತಾಪ್ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಸುಮಾರು ೨೫ ಲಕ್ಷ ರು. ವೆಚ್ಚದ ಕೆಂಪೆಗೌಡರ ಪ್ರತಿಮೆಯನ್ನು ದಾನವಾಗಿ ನೀಡುವ ಮೂಲಕ ಸಮುದಾಯದ ನಾಯಕರಾಗಿಯು ಗುರುತಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮ ಬೆಂಬಲಿಗರ ಒತ್ತಾಯಕ್ಕೆ ಮಣಿದು ಹೆತ್ತೂರು ಜಿಪಂ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ನಡೆಸಿದ್ದರು.