ಕನ್ನಡಪ್ರಭ ವಾರ್ತೆ ಕೋಲಾರತಾಲೂಕು ಬೆಟ್ಟ ಬೆಣಜೇನಹಳ್ಳಿ ಬಳಿ ಮಹಿಳೆ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ರಮ ಸಂಬಂಧದ ಹಿನ್ನೆಲೆ ೨ ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಹಾಗೂ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ತಾಲೂಕಿನ ಹೊನ್ನೇನಹಳ್ಳಿ ೨ ಮಕ್ಕಳ ತಾಯಿ ಸುಮಿತ್ರಾ ಹಾಗೂ ಪಕ್ಕದ ಮನೆಯ ಯುವಕ ಆನಂದ್ ಆತ್ಮಹತ್ಯೆಗೆ ಶರಣಾದವರು. ಸುಮಿತ್ರಾ ೧೧ ವರ್ಷಗಳ ಹಿಂದೆ ಹೋಟೆಲ್ ನಲ್ಲಿ ಕೆಲಸ ಮಾಡುವ ಹೊನ್ನೇನಹಳ್ಳಿಯ ರಾಮು ಎಂಬಾತನನ್ನ ಮದುವೆಯಾಗಿದ್ದಳು. ೨ ಹೆಣ್ಣು ಮಕ್ಕಳು ಇದ್ದಾರೆ. ಟಮಕ ಬಳಿಯ ಜಾಲಪ್ಪ ಆಸ್ಪತ್ರೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ಸುಮಿತ್ರಾ ಹಾಗೂ ಪಕ್ಕದ ಮನೆಯ ಆನಂದ್ ಮಧ್ಯೆ ಅಕ್ರಮ ಸಂಬಂಧ ಪತಿ ರಾಮುಗೆ ಗೊತ್ತಾಗಿದೆ. ಕಳೆದ ಭಾನುವಾರ ಫೋನ್‌ನಲ್ಲಿ ಮಾತನಾಡುವುದನ್ನು ಕಂಡ ಪತಿ ರಾಮು ಪತ್ನಿಗೆ ಬುದ್ಧಿವಾದ ಹೇಳಿದ್ದಾನೆ. ಕಳೆದ ೨ ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ತಂದೆಗೆ ಪ್ಯಾರಾಸೀಸ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ, ಈ ವೇಳೆ ಸುಮಿತ್ರಾ ಆನಂದ ಅವರ ತಂದೆಗೆ ಚಿಕಿತ್ಸೆ ಕೊಡಿಸಿ, ಒಂದಷ್ಟು ಕಾಳಜಿಯಿಂದ ನೋಡಿಕೊಂಡಿದ್ದಾಳೆ. ಜಾಲಪ್ಪ ಆಸ್ಪತ್ರೆಗೆ ಕೆಲಸಕ್ಕೆ ತೆರಳುವ ಸುಮಿತ್ರಾಳನ್ನು ಗ್ರಾಮದಿಂದ ಬೆಳಗ್ಗೆ ಸಂಜೆ ಆನಂದ್ ಪಿಕಪ್ ಡ್ರಾಪ್ ಮಾಡುತ್ತಿದ್ದ. ಜೊತೆಗೆ ಸಲುಗೆ ಸಹ ಬೆಳೆದು ಇಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ, ಜೊತೆಗೆ ಫೋನ್‌ನಲ್ಲಿ ಮಾತನಾಡುವುದು ಎಲ್ಲವೂ ಶುರುವಾಗಿದೆ. ಇದನ್ನರಿತ ಪತಿ ರಾಮು ಪತ್ನಿಗೆ ಬುದ್ಧಿವಾದ ಸಹ ಹೇಳಿದ್ದಾನೆ, ಆದರೆ ಆನಂದ್ ಮಾತ್ರ ಟಾರ್ಚರ್ ನೀಡಿದ್ದಾನೆ ಎನ್ನಲಾಗಿದೆ. ೨ ದಿನಗಳಿಂದ ಇಬ್ಬರು ಮನೆ ಬಿಟ್ಟು ನಾಪತ್ತೆಯಾಗಿದ್ದರು, ಸಂಬಂಧಿಕರು ಸಹ ನಾಪತ್ತೆ ಕುರಿತು ಕೋಲಾರ ಗ್ರಾಮಾಂತರ ಪೊಲೀಸರಿಗೆ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ಆದರೆ ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬೆಟ್ಟಬೆಣಜೇನಹಳ್ಳಿ ಬಳಿ ಪತ್ತೆಯಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.