ಕನ್ನಡಪ್ರಭ ವಾರ್ತೆ ಮೈಸೂರುಜನಪದ ಸಂಸ್ಕೃತಿ ಮರೆತರೆ ದುರಂತದೆಡೆಗೆ ಸಾಗಬೇಕಾಗುತ್ತದೆ ಎಂದು ಜನಪರ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್‌ ಚಿಕ್ಕಲ್ಲೂರು ಆತಂಕ ವ್ಯಕ್ತಪಡಿಸಿದರು.ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಡಗಲಹುಂಡಿಯಲ್ಲಿ ಏರ್ಪಡಿಸಿರುವ ಎನ್ಎಸ್ಎಸ್‌ ಶಿಬಿರದಲ್ಲಿ ''''''''ಜನಪದದಲ್ಲಿ ವೈಚಾರಿಕತೆ'''''''' ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲಾ ಸಾಹಿತ್ಯದ ಮೂಲಬೇರು ಜನಪದ. ಆದ್ದರಿಂದ ಯಾರೂ ಕೂಡ ಜನಪದ ಸಂಸ್ಕೃತಿಯನ್ನು ಮರೆಯಬಾರದು ಎಂದರು.ಜನಪದದಲ್ಲಿ ಸಂಸ್ಕಾರ, ಸಂಸ್ಕೃತಿ ಇದೆ. ಅನಕ್ಷರಸ್ಥರಾದ ಜನ ಬಾಯಿಂದ ಬಾಯಿಗೆ ಹರಡುತ್ತಾ ಈ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಜನಪದ ಸಾಹಿತ್ಯವನ್ನು ಗಮನಿಸಿದರೆ ಹಲವಾರು ವೈಚಾರಿಕ ಹಾಗೂ ಸತ್ಯದ ವಿಷಯಗಳು ಅಡಕವಾಗಿರುವುದು ಗೊತ್ತಾಗುತ್ತದೆ ಎಂದರು.''''''''ಪತ್ರಿಕೆಗಳ ಓದಿನ ಮಹತ್ವ'''''''' ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕಾದರೆ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಲೇಬೇಕು. ಇಲ್ಲದಿದ್ದರೆ ಸಾಮಾನ್ಯ ಜ್ಞಾನ ಪತ್ರಿಕೆಯನ್ನು ಪಾಸು ಮಾಡಲಾಗದು ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಆರ್‌. ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿಗಳಾದ ಡಾ.ವಿಷಕಂಠ, ನಾಗೇಂದ್ರಕುಮಾರ್‌. ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರೇಗೌಡ ಇದ್ದರು.ರಾಜಶ್ರೀ ಪ್ರಾರ್ಥಿಸಿದರು. ಪ್ರಜ್ವಲ್‌ ಸ್ವಾಗತಿಸಿದರು. ಮನು ನಿರೂಪಿಸಿದರು. ಸಂಗೀತ ವಂದಿಸಿದರು. ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.