ಡೆಂಘೀ ಜ್ವರಕ್ಕೆ ಬ್ಯಾಡಗಿ ಬಾಲಕ ಬಲಿ

| Published : Apr 23 2024, 12:50 AM IST

ಸಾರಾಂಶ

ಡೆಂಘೀಯಿಂದ ಬಳಲುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ತಾಲೂಕಿನ ತಡಸ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬ್ಯಾಡಗಿ: ಡೆಂಘೀಯಿಂದ ಬಳಲುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ತಾಲೂಕಿನ ತಡಸ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ನಿವಾಸಿ ಸವಿನ್ ಶ್ರೀಕಾಂತ ಕಣ್ಣನವರ (12) ಡೆಂಘೀಗೆ ಬಲಿಯಾಗಿದ್ದು, ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಡಾವಣೆ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ವಿದ್ಯಾರ್ಥಿಗೆ ಚಿಕಿತ್ಸೆಯನ್ನೂ ಸಹ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮರಣ ಹೊಂದಿದ್ದಾನೆ.

ವಿದ್ಯಾರ್ಥಿ ನಿಧನಕ್ಕೆ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಶಾಲೆಯ ಮುಖ್ಯ ಶಿಕ್ಷಕಿ ರಾಜಶ್ರೀ ಸಜ್ಜೇಶ್ವರ ಹಾಗೂ ಶಿಕ್ಷಕ ವೃಂದ ಸಂತಾಪ ಸೂಚಿಸಿದೆ.ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಸಾವು: ಹೊಲದಲ್ಲಿ ಬೆಳೆದ ಹುಲ್ಲಿಗೆ ಬೆಂಕಿ ಹಚ್ಚಲು ಹೋದಾಗ, ಬೆಂಕಿ ಬೇರೆ ಹೊಲಕ್ಕೆ ಹೋಗುತ್ತದೆ ಎಂದು ಅದನ್ನು ತಡೆಯಲು ಮುಂದಾದ ಹಾನಗಲ್ಲಿನ ಮರದಾನಸಾಬ ಮೋದಿನಸಾಬ ಡೊಳ್ಳೇಶ್ವರ (೭೫) ಎಂಬುವವರು ಬೆಂಕಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಸೋಮವಾರ ಮಧ್ಯಾಹ್ನ ೪ ಗಂಟೆಯ ಹೊತ್ತಿಗೆ ಹಾನಗಲ್ಲ ಹತ್ತಿರದ ಮಲ್ಲಿಗಾರ ಬಳಿ ಇರುವ ತನ್ನ ಹೊಲದಲ್ಲಿರುವ ಕಸದ ರೂಪದ ಹುಲ್ಲನ್ನು ಸುಡಲು ಮುಂದಾದಾಗ, ಬೆಂಕಿ ಪಕ್ಕದ ಹೊಲಕ್ಕೆ ಚಾಚಿದೆ. ಆ ಬೆಂಕಿಯನ್ನು ಆರಿಸಲು ಮುಂದಾದಾಗ ಕಾಲು ಜಾರಿ ಬೆಂಕಿಯಲ್ಲೇ ಬಿದ್ದು, ಸುಟ್ಟುಕೊಂಡಿದ್ದಾನೆ. ಇದನ್ನು ನೋಡಿದವರು ಕೂಡಲೇ ಸ್ಥಳಕ್ಕೆ ಬಂದು ಮರದಾನಸಾಬನನ್ನು ಬೆಂಕಿಯಿಂದ ಹೊರತೆಗೆದು ಆಸ್ಪತ್ರೆಗೆ ತರುವ ಸಂದರ್ಭದಲ್ಲಿಯೇ ಮೃತನಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹಾನಗಲ್ಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.