ಬ್ಯಾಡಗಿ-ತಿಳವಳ್ಳಿ ರಸ್ತೆ ಬಂದ್, ದಿಢೀರ್‌ ಪ್ರತಿಭಟನೆ

| Published : Jan 25 2025, 01:00 AM IST

ಬ್ಯಾಡಗಿ-ತಿಳವಳ್ಳಿ ರಸ್ತೆ ಬಂದ್, ದಿಢೀರ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಸಣಗಿ ಗ್ರಾಮದ ಸಂತೆ ಹಳ್ಳಕ್ಕೆ ಸಿಡಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬ್ಯಾಡಗಿ ತಿಳವಳ್ಳಿ ರಸ್ತೆ ಬಂದ್ ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

ಬ್ಯಾಡಗಿ: ಮಾಸಣಗಿ ಗ್ರಾಮದ ಸಂತೆ ಹಳ್ಳಕ್ಕೆ ಸಿಡಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬ್ಯಾಡಗಿ ತಿಳವಳ್ಳಿ ರಸ್ತೆ ಬಂದ್ ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿ ಗುತ್ತಿಗೆದಾರರು ರಸ್ತೆಯಲ್ಲಿ ಡಾಂಬರೀಕರಣ ಮಾಡಲು ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಏಕಾಏಕಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ರಸ್ತೆಗೆ ಹಾಕಲು ತಂದಿದ್ದ ಡಾಂಬರ್ ಹಾಗೂ ಟಿಪ್ಪರ್‌ ನಿಲ್ಲಿಸಿ ಡಾಂಬರೀಕರಣ ಮಾಡದಂತೆ ತಡೆದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಗುರುಪಾದಯ್ಯ ಹಿರೇಮಠ, ಮಾಸಣಗಿ ಸಂತೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಇಲ್ಲಿ ಸಂಚಾರ ಸಂಪೂರ್ಣ ಬಂದ ಆಗಲಿದ್ದು ಹಲವು ಅಪಘಾತ ಸಹ ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಇಷ್ಟಾದರೂ ಸಹ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿದರು.ಸ್ಥಳಕ್ಕೆ ಸಿಪಿಐ ಭೇಟಿ: ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ, ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಪ್ರತಿಭಟನೆಯಿಂದ ಸಂಚಾರಕ್ಕೆ ತೊಂದರೆ ಆಗುತ್ತಿದ್ದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ನಂತರ ಸ್ಥಳೀಯ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಪ್ರತಿಭಟನಕಾರರು ಪ್ರತಿಭಟನೆ ಕೈಬಿಟ್ಟರು. ರಾಘವೇಂದ್ರ ಕುಮ್ಮೂರ, ವಿಜಯಕುಮಾರ ಕಡೂರ, ಮಹದೇವ ಮಾಗೋಡ, ಸಿದ್ಧಲಿಂಗಪ್ಪ ಕುಮ್ಮೂರ, ಶಿವರಾಜ ಬನ್ನಿಹಟ್ಟಿ, ಮುನ್ನಾ ಮೇಗಳಮನಿ, ನಾಗರಾಜ ಮಾಸಣಗಿ ಬಸವರಾಜ ದೇಸಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.