ಸಾರಾಂಶ
ಗದಗ: ಎಬಿವಿಪಿ ಮುಖಂಡನ ಮೇಲೆ ರವಿ ನರೇಗಲ್ಲ ಅವರ ಮೇಲೆ ಬಾದಾಮಿ ಪಿಎಸ್ ಐ ಲಾಠಿ ಪ್ರಹಾರ ನಡೆಸಿದ್ದಲ್ಲದೇ ಅವರನ್ನು ಕೂಡಿ ಹಾಕಿ ಕೇಸರಿ ಶಾಲು ಹಾಕಿದರೆ ನೀನು ದೊಡ್ಡ ಹೋರಾಟಗಾರನ ಅಂತ ಅವಮಾನವೀಯವಾಗಿ ನಡೆದುಕೊಂಡಿದ್ದನ್ನು ಖಂಡಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಗೃಹಮಂತ್ರಿಗೆ ಮನವಿ ಸಲ್ಲಿಸಿದರು.
ಬಾದಾಮಿ ತಾಲೂಕಿನ ರಾಮದುರ್ಗ ಕ್ರಾಸ್‌ನಲ್ಲಿ ಬಾದಾಮಿ ಪಿಎಸ್‌ಐ ವಿಜಯಕುಮಾರ್ ರಾಠೋಡ ಅವರು ಮತ್ತು ಪೊಲೀಸ್ ಸಿಬ್ಬಂದಿ ಮೇ 4ರಂದು ಕೂಡಿ ಹಾಕಿ ಮನಸ್ಸಿಗೆ ಬಂದಂತೆ ಲಾಠಿ ಪ್ರಹಾರ ನಡೆಸಿರುವರಲ್ಲದೇ ಕೇಸ್ ಮಾಡಿ ಅವಾಚ್ಯವಾಗಿ ಬೈದಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಸಿದ್ದಣ್ಣ ಪಲ್ಲೇದ, ಬಸವಣ್ಣೆಪ್ಪ ಚಿಂಚಲಿ, ಈರಣ್ಣ ಕರಿಬಿಷ್ಠಿ, ನಾಗರಾಜ ಗುರಿಕಾರ, ಶಶಿಧರ ದಿಂಡೂರ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ಶಿವರಾಜಗೌಡ ಹಿರೇಮನಿಪಾಟೀಲ, ವಸಂತ ಪಡಗದ, ರಾಜು ಕಾನಪೂರ, ಆನಂದ ಅಂಗಡಿ, ರಾಜು ಜಕ್ಕನಗೌಡ್ರ, ಮಲ್ಲು ಕಿರೇಸೂರ, ಚೇತನ ಅಬ್ಬಿಗೇರಿ, ಮರಿಗೌಡರ ಬಸವರಾಜ ಅನಗವಾಡಿ, ಮಲ್ಲು ಕುರ್ತಕೋಟಿ, ಶರಣಪ್ಪ ಗೊಳಗೊಳಕಿ, ಶರಣು ಚಿಂಚಲಿ, ಕುಮಾರ್ ತಡಕೋಡ, ರಾಜು ರೊಟ್ಟಿ, ಅನಿಲ ಮುಳ್ಳಾಳ, ಗಿರೀಶ ಯಲಬುರ್ಗಿ, ಪ್ರಶಾಂತ ನರೇಗಲ್ಲ, ಸೋಮಶೇಖರ್ ಪಾಟೀಲ್, ತೇಜಸ್ವಿ ಕನವಳ್ಳಿ, ರವಿ ಲಕ್ಕಣ್ಣವರ, ಪ್ರಕಾಶ್ ಗುರುಮೂರ್ತಿ, ಶಿಲ್ಪಿ ವಿಶಾಲ ಅಕ್ಕಿ, ಪ್ರಸನ್ನ ಶರಣಾರ್ಥಿ ಆದಿತ್ಯ ಕೋಟಿ ಇನ್ನೂ ಅನೇಕ ಇನ್ನಿತರರು ಉಪಸ್ಥಿತರಿದ್ದರು.