ಸಾರಾಂಶ
ಬಾಗೇಪಲ್ಲಿಯಲ್ಲಿ ರಸ್ತೆ ಅಗಲೀಕರಣ ವಿಚಾರವಾಗಿ ಮಾಲೀಕರಿಗೆ ನೀಡಬೇಕಿದ್ದ ಪರಿಹಾರ ನೀಡಿಲ್ಲ ಎಂದು ಆರೋಪ ಇತ್ತು.
ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಾದ ಡಿವಿಜಿ ರಸ್ತೆ ಅಗಲೀಕರಣ ವೇಳೆ ಜಮೀನು ಕಳೆದುಕೊಂಡ ಮಾಲೀಕರಿಗೆ ನ್ಯಾಯಾಲಯ ನಿಗದಿಪಡಿಸಿದ ಪರಿಹಾರ ನೀಡಿಲ್ಲವೆಂದು ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಕಚೇರಿಯನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ.
ಬಾಗೇಪಲ್ಲಿಯಲ್ಲಿ ರಸ್ತೆ ಅಗಲೀಕರಣ ವಿಚಾರವಾಗಿ ಮಾಲೀಕರಿಗೆ ನೀಡಬೇಕಿದ್ದ ಪರಿಹಾರ ನೀಡಿಲ್ಲ ಚದರಡಿಗೆ 280 ರುಪಾಯಿ ಮಾತ್ರ ನೀಡಿ ಕೈತೊಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಅಲ್ಲಿನ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಒಂದು ಚದರ ಅಡಿಗೆ 850 ರುಪಾಯಿ ಪರಿಹಾರ ನೀಡಿವಂತೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು.ಸಿಕೆಬಿ-3.................... ಬಾಗೇಪಲ್ಲಿ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಮಾಡಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.