ಕನ್ನಡಪ್ರಭ ವಾರ್ತೆ ಬೆಳಗಾವಿ ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು, ಹಿಂದೂ ಧರ್ಮವನ್ನ ಗಟ್ಟಿಯಾಗಿಸಬೇಕಿದೆ. ಭಾರತೀಯ ಪರಂಪರೆ ಉಳಿಬೇಕು, ಸನಾತನ ಪರಂಪರೆ ಉಳಿಬೇಕು ಎನ್ನುವ ದೃಷ್ಟಿಯಲ್ಲಿ ಅನೇಕ ವಿಭಾಗಗಳಲ್ಲಿ ವಿರಾಟ್ ಹಿಂದೂ ಸಮ್ಮೇಳನ ನಡೆಯುತ್ತಿದೆ ಆಯೋಜಿಸಲಾಗುತ್ತಿದೆ ಎಂದು ಬೃಹನ್ಮಠ ಹೊನ್ನಿಹಾಳದ ಬಸವರಾಜ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು, ಹಿಂದೂ ಧರ್ಮವನ್ನ ಗಟ್ಟಿಯಾಗಿಸಬೇಕಿದೆ. ಭಾರತೀಯ ಪರಂಪರೆ ಉಳಿಬೇಕು, ಸನಾತನ ಪರಂಪರೆ ಉಳಿಬೇಕು ಎನ್ನುವ ದೃಷ್ಟಿಯಲ್ಲಿ ಅನೇಕ ವಿಭಾಗಗಳಲ್ಲಿ ವಿರಾಟ್ ಹಿಂದೂ ಸಮ್ಮೇಳನ ನಡೆಯುತ್ತಿದೆ ಆಯೋಜಿಸಲಾಗುತ್ತಿದೆ ಎಂದು ಬೃಹನ್ಮಠ ಹೊನ್ನಿಹಾಳದ ಬಸವರಾಜ ಮಹಾರಾಜರು ಹೇಳಿದರು.ಕಪಿಲೇಶ್ವರ ವಿರಾಟ್ ಹಿಂದು ಸಮ್ಮೇಳನ ಸಮಿತಿ ನೇತೃತ್ವದಲ್ಲಿ, ವಿರಾಟ ಹಿಂದು ಸಮ್ಮೇಳನ ಶೋಭಾ ಯಾತ್ರೆಗೆ ಶಿವಾಜಿ ಮಹರಾಜರ ಉದ್ಯಾನವನದಿಂದ ಪ್ರಾರಂಭಿಸಿ, ಕಪಿಲೇಶ್ವರ ಸಂಭಾಜಿ ಮಹರಾಜರ ಉದ್ಯಾನವನದಲ್ಲಿ ಮುಕ್ತಾಯಗೊಳಿಸಲಾಯಿತು. ಬಳಿಕ, ಕಾರ್ಯಕ್ರಮಕ್ಕೆ ಕೊಲ್ಲಪೂರದ ಸವ್ಯಸಾಚಿ ಗುರುಕುಲ ಆಚಾರ್ಯ ಲಖನ ಜಾಧವ ಹಾಗೂ ಬೃಹನ್ಮಠ ಹೊನ್ನಿಹಾಳದ ಬಸವರಾಜ ಮಹಾರಾಜ ಚಾಲನೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಬಸವರಾಜ್ ಮಹಾರಾಜರು, ಭಾರತೀಯರು ಅಂತಂದ್ರೆ ಅದು ಹಿಂದೂ ಅಂತ. ಅಂದ್ರೆ ಭಾರತೀಯರು ಇವತ್ತು ಭಾರತೀಯ ಪರಂಪರೆ ಉಳಿಬೇಕು, ಸನಾತನ ಪರಂಪರೆ ಉಳಿಯಬೇಕು, ನಮ್ಮೆಲ್ಲರನ್ನ ಜಾಗೃತರನ್ನಾಗಿ ಮಾಡಲು ವಿವೇಕಾನಂದರು ಯಾವಾಗಲೂ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಹೇಳುತ್ತಿದ್ದರು. ಭಾರತೀಯ ಪರಂಪರೆ ಇವತ್ತು ಎಲ್ಲರೂ ಕೂಡ ಭಾರತೀಯ ಪರಂಪರೆಯನ್ನು ಸ್ಮರಿಸುತ್ತಾರೆ. ಇಂದು ನಮ್ಮನ್ನು ತುಂಡು ತುಂಡು ತುಂಡಾಗಿ ಕತ್ತರಿಸುತ್ತಿದ್ದಾರೆ. ಇವತ್ತೊಂದು ವೀರಶೈವ ಲಿಂಗಾಯತ ಮತ್ತೊಂದು ಮಗದೊಂದು ನಾವು ಜಾತಿ ಜಾತಿ ಇವತ್ತು ನಾವೆಲ್ಲರೂ ಕೂಡ ಅರಿತು ಕೊಳ್ಳಬೇಕು ಎಂದು ಹೇಳಿದರು.ಡಾ.ಗೀತಾ ಉತ್ತೂರ್ ಮಾತನಾಡಿ, ಸನಾತನ ಧರ್ಮ ಆದಿ ಅಂತ್ಯ ಇಲ್ಲದ ಯಾರು ಸ್ಥಾಪಿಸಿದ್ದು ಯಾರು ಮುಂದುವರಿಸಿದ್ದು ಯಾರಿಗೂ ಗೊತ್ತಿಲ್ಲ. ಆದರೆ ಅದಕ್ಕೆ ಅಂತ್ಯವೂ ಇಲ್ಲ ಆರಂಭವೂ ಇಲ್ಲ. ರಾಷ್ಟ್ರಪತಿಗಳನ್ನು ದೇಶಕ್ಕೆ ನೀಡಿದೆ. ಮಹಿಳೆಯರಿಗೆ ಕೊಟ್ಟ ಸ್ಥಾನಮಾನ ಪ್ರಕೃತಿಯ ಎಲ್ಲ ದೇವತೆಗಳನ್ನ ಕೊನೆಗೆ ದೇಶವನ್ನೇ ತಾಯಿ ಅಂತ ಪೂಜಿಸುವ ಸಂಸ್ಕೃತಿ ನಮ್ಮದು ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರರ ಸಂಭ್ರಮ. ದೇಶದ ರಕ್ಷಣೆಗಾಗಿ ದೇಶದ ಅಭಿವೃದ್ಧಿಗಾಗಿ ರಾಷ್ಟ್ರ ಪ್ರೇಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಲಕ್ಷಾಂತರ ಕಾರ್ಯಕರ್ತರ ಒಂದು ಸಂಘಟನೆಯಿತ್ತು. ಆ ಸಂಘಟನೆ ನೂರು ವರ್ಷಗಳ ಸಂಭ್ರಮ ಆಚರಿಸುತ್ತಿದೆ. ಇಂಥ ಸಂದರ್ಭದಲ್ಲಿ, ಹಿಂದೂ ಸಮ್ಮೇಳನ ಅಂದ್ರೆ ಹಿಂದೂ ಜನರ ಜಾಗೃತಿಯ ಸಲುವಾಗಿ ಈ ಸಮ್ಮೇಳನಗಳನ್ನ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಲಖನ್ ಜಾಧವ ಗುರೂಜಿ ಮಾತನಾಡಿ, ಸನಾತನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇಶಗಳಲ್ಲಿ ಹುಟ್ಟಿದ್ದೇವೆ ಎಂದರೆ ಗರ್ವದಿಂದ ಹಿಂದೂಗಳಿಗೆ ಎದೆ ತಟ್ಟಿಕೊಂಡು ಹೇಳಬೇಕು. ನಾನು ಹಿಂದು, ಭಾರತೀಯ ಎಂದು, ಸಾವಿರಾರು ವರ್ಷಗಳಿಂದ ಭಾರತ ಎಂದು ಹೆಸರು ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ ಇಂಡಿಯಾ ಎಂದು ಕರೆಯಲಾಗುತ್ತದೆ.ಎಲ್ಲ ಹಿಂದೂ ಹೆಣ್ಣು ಮಕ್ಕಳು ಶಸ್ತ್ರಗಳ ತರಬೇತಿ ಪಡೆಬೇಕಾಗಿರುವ ಅವಶ್ಯವಿದೆ ಎಂದು ತಿಳಿಸಿದರು.ಈ ವೇಳೆ ಬೆಳಗಾವಿ ನಗರದ ವಿವಿಧ ಐದು ಪ್ರಮಖ ಸ್ಥಳಗಲ್ಲಿ ಏಕ ಕಾಲದಲ್ಲಿಯೇ ಹಿಂದೂ ಸಮಾವೇಶಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ, ಬಿಜಿಪಿಯ ಪ್ರಮುಖರು, ಮಾಜಿ ಶಾಸಕ ಅನಿಲ್ ಬೆನಕೆ, ಹಾಲಿ ಶಾಸಕ ಅಭಯ ಪಾಟೀಲ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.