ಸಾರಾಂಶ
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಉದ್ಯಮಿ ಹರಪ್ಪಳ್ಳಿ ರವೀಂದ್ರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಉದ್ಯಮಿ ಹರಪ್ಪಳ್ಳಿ ರವೀಂದ್ರ ಅವರು ಶನಿವಾರ ಯಡೂರು ಗ್ರಾಮದ ದೇವರಕೆರೆ ಮತ್ತು ಪಟ್ಟಣದ ಆನೆಕೆರೆಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭ ಹರಪನಹಳ್ಳಿ ರವೀಂದ್ರ ಅವರ ಅಭಿಮಾನಿ ಸಂಘದ ಅದ್ಯಕ್ಷ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ರಾಜಪ್ಪ, ದೀಪು, ಬಸಪ್ಪ, ತಿಮ್ಮಯ್ಯ, ಖಾಸಿಂ, ದಾಮೋಧರ್, ಮೋಹನ್, ಯಡೂರು ಗ್ರಾಮದ ಮಲ್ಲಪ್ಪ, ಕಿರಣ ಹಾಗೂ ಸಾರ್ವಜನಿಕರು ಭಾಗವಹಿದ್ದರು.