ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಲಕ್ಷಾಂತರ ರು. ವಂಚನೆ
KannadaprabhaNewsNetwork | Published : Oct 07 2023, 02:14 AM IST
ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಲಕ್ಷಾಂತರ ರು. ವಂಚನೆ
ಸಾರಾಂಶ
ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಬಹುಜನರು. ವಂಚನೆ
ಫಾಸ್ಟ್‌ಟ್ಯಾಗ್ ರೀ ಚಾರ್ಜ್ ಕ್ಯಾನ್ಸಲ್ ಮಾಡಿಸುವಾಗ ನಡೆದ ವಂಚನೆ ಪ್ರಕರಣ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ 16ನೇ ವಾರ್ಡ್ ನ ಬಸವನಗುಡಿ ರಸ್ತೆಯ ನಿವಾಸಿ ಗಿರವಿ ಅಂಗಡಿ ವ್ಯಾಪಾರಿ ಎಂ. ಶ್ರೇಣಿಕ್ ಕುಮಾರ್ ಜೈನ್ ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ವಂಚನೆಗೆ ಒಳಗಾದವರು. ರೀ ಚಾರ್ಜ್ ಕ್ಯಾನ್ಸಲ್‌ಗೆ ಕೋರಿಕೆ ಶ್ರೇಣಿಕ್ ಕುಮಾರ್ ಜೈನ್ ತನ್ನ ಕಾರಿನ ಫಾಸ್ಟ್ ಟ್ಯಾಗ್ ಗೆ ರೀಚಾರ್ಜ್ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ತನ್ನ ಹಳೆಯ ಕಾರಿನ ಫಾಸ್ಟ್ ಟ್ಯಾಗೆ ರೀ ಚಾರ್ಜ್ ಮಾಡಿದ್ದು, ಆ ಸಮಯದಲ್ಲಿ ಪಾಸ್ಟ್ ಟ್ಯಾಗ್ ನ ರೀಚಾರ್ಜ್ಅನ್ನು ಕ್ಯಾನ್ಸಲ್ ಮಾಡಿಸುವ ಸಲುವಾಗಿ ಗೂಗಲ್ ನಲ್ಲಿ ಪಾಸ್ಟ್ ಟ್ಯಾಗ್ ನ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ ನಲ್ಲಿ ಹುಡುಕುದಾಗ 8981759661 ನಂಬರ್ ಬಂದಿದೆ. ಸದರಿ ನಂಬರ್ ಗೆ ತನ್ನ ಮೊಬೈಲ್ ನಂಬರ್ ನಿಂದ ಕಾಲ್ ಮಾಡಿದ್ದು ಆಗ ಸದರಿ ವ್ಯಕ್ತಿಯು ಪಾಸ್ಟ್ ಟ್ಯಾಗ್ ರೀಚಾರ್ಜ್ ಅನ್ನು ಕ್ಯಾನ್ಸಲ್ ಮಾಡುವುದಾಗಿ ಹೇಳಿರುತ್ತಾರೆ. ನಂತರ ತನ್ನ ನಂಬರ್ ಗೆ ಮೇಲ್ಕಂಡ ನಂಬರ್ ನಿಂದ ಕಾಲ್ ಮಾಡಿ ನಿಮ್ಮ ಪಾಸ್ಟ್‌ಟ್ಯಾಗ್ ಹಣ ವಾಪಸ್ಸು ಬಂದಿದೆಯಾ ಎಂದು ಕೇಳಿದ್ದಾರೆ. ಇನ್ನೂ ಬಂದಿಲ್ಲ ಎಂದು ಶ್ರೇಣಿಕ್ ಕುಮಾರ್ ಜೈನ್ ಹೇಳಿದ್ದು, ಆ ಸಮಯದಲ್ಲಿ ಒಂದು ಮೆಸೇಜ್ ಕಳುಹಿಸುತ್ತೇನೆ ಅದರಲ್ಲಿನ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದರೆ ನಿಮಗೆ ಹಣ ಬರುತ್ತದೆ ಎಂದು ಹೇಳಿದ್ದಾರೆ. ಅದನ್ನುನಂಬಿ ಸದರಿ ಲಿಂಕ್ ಅನ್ನು ಒತ್ತಿದ 5 ನಿಮಿಷದಲ್ಲಿ ವಿವಿಧ ಬ್ಯಾಕುಗಳ ಖಾತೆಗಳಲ್ಲಿದ್ದ ಒಟ್ಟು 1,96,000 ರು.ಗಳನ್ನು ವಂಚಕರು ಮೊಬೈಲ್ ಹ್ಯಾಕ್ ಮಾಡಿ ಮಾಡಿದ್ದಾರೆ. ಈ ಬಗ್ಗೆ ಶ್ರೇಣಿಕ್ ಕುಮಾರ್ ಜೈನ್ ಚಿಕ್ಕಬಳ್ಳಾಪುರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.