ಸಾರಾಂಶ
ಕೊಳ್ಳೇಗಾಲದಲ್ಲಿ ಹಿಂದೂಪರ ಹಾಗೂ ಬಜರಂಗದಳ ಕಾರ್ಯಕರ್ತರು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಖಂಡಿಸಿ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾತೆ ಕೊಳ್ಳೇಗಾಲ
ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಖಂಡಿಸಿ ಹಾಗೂ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಹಿಂದೂ ಪರಿಷತ್ ಬಜರಂಗದಳ ಕೊಳ್ಳೇಗಾಲ ಘಟಕ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ಜಿಹಾದಿ ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗುತ್ತಾ ಇಂತಹ ಭಯೋತ್ಪಾದಕರಿಗೆ ತಕ್ಕ ಶಿಕ್ಷೆಯಾಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಡಾ.ವಿಷ್ಣು ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿದರು. ಇದಕ್ಕೂ ಮುನ್ನ ನಾಗಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಹಿಂದೂಗಳಿಗೆ ಸೂಕ್ತ ರೀತಿ ರಕ್ಷಣೆಗೆ ಆಗ್ರಹಿಸಿದರು.ಪ್ರತಿಭಟನೆ ಪ್ರಾರಂಭಕ್ಕೂ ಮುನ್ನ ದೇವಲ ಮಹರ್ಷಿ ವೃತ್ತದಲ್ಲಿ ದೇವರ ದಾಸೀಮಯ್ಯ ಪುತ್ಥಳಿಗೆ ನಮಿಸಿ ಮೆರವಣಿಗೆ ತೆರಳಿ ಉಪವಿಭಾಗ ಕಚೇರಿಯಲ್ಲಿ ಶಿರೆಸ್ತೇದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ನಟರಾಜಗೌಡ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ರವೀಂದ್ರ, ಜನನಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಪ್ರವೀಣ್ ಕುಮಾರ್, ನಿರಂಜನ್ ರವಿ, ಬೂದಿತಿಟ್ಟು ಶಿವಕುಮಾರ್, ನವೀನ್, ಕೃಷ್ಣಮೂರ್ತಿ, ಬಾಲು, ಪಾಂಡುರಂಗ, ರವಿ ಕುಣಗಳ್ಳಿ, ಶಿವಕುಮಾರ್, ಟಗರಪುರ ರೇವಣ್ಣ, ಡೈರಿ ಗಿರೀಶ್, ಶೈಲಾರಮೇಶ್, ಮಮತಾ ಬದ್ರಿನಾಥ್, ಹಣ್ಣು ಅಂಗಡಿ ಅಧ್ಯಕ್ಷ ದ್ವಾರಕೀ , ಕೆಎಸ್‌ಡಿಸಿ ಡಾ.ಅರುಣಾಚಲಯ್ಯ, ಬೃಂಗೇಶ್ ಕಟ್ಟೆ, ಮಹೇಶ್, ಸೋಮಣ್ಣ, ಮಧುಚಂದ್ರ ಇನ್ನಿತರರಿದ್ದರು.