ಹಬ್ಬದ ಹಿನ್ನೆಲೆ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಲಾಯಿತು. ನಂತರ ಸಿಹಿ ತಿಂಡಿ ಪಾನೀಯ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಹತ್ ಮಸೀದಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ, ನಮಾಜ್ ಅನ್ನು ಮುಸ್ಲಿಂ ಸಮುದಾಯ ಬಾಂಧವರು ಸೋಮವಾರ ನೆರವೇರಿಸಿದರು.

ಜಮಾಹತ್ ಕತೀಬರಾದ ಜುರೈಜ್ ಸಹದಿ ಕಾಸರಗೋಡು ವಿಶೇಷ ಪ್ರಾರ್ಥನೆ ನೆರವೇರಿಸಿ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಜಮಾಹತ್ ಅಧ್ಯಕ್ಷರಾದ ಬಿ.ಎ. ನಾಸಿರ್ ಮತ್ತು ಕಾರ್ಯದರ್ಶಿ ರಫೀಕ್ ಎಂ. ಎಚ್. ಹಫೀಲ್ ಸಹದಿ ಎಮ್.

ಎಮ್. ಇಸ್ಮಾಯಿಲ್ ಜಮಾಹತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಜನಾಂಗ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನಮಾಜ್ ನಂತರ ಸಿಹಿ ತಿಂಡಿ ಮತ್ತು ಪಾನೀಯ ವಿತರಿಸಲಾಯಿತು. ಬಳಿಕ ತಮ್ಮ ತಮ್ಮ ಕುಟುಂಬ

ದಿಂದ ನಿಧನ ಹೊಂದಿದವರ ಸಮಾಧಿಗೆ (ಖಬರ್ ಸ್ಥಾನ) ಹೋಗಿ ಪ್ರಾರ್ಥನೆ ನೆರವೇರಿಸಿದ ಬಳಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.