ಸಾರಾಂಶ
 ಬಾಲಗಂಗಾಧರ ತಿಲಕರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತೀಯ ಸ್ವಾಯತ್ತತೆಗಾಗಿ ಚಳವಳಿ ನಡೆಸುವ ಮೂಲಕ ತಮ್ಮ ದೀರ್ಘ ರಾಜಕೀಯ ಜೀವನವನ್ನು ನಡೆಸಿದಂತಹ ವ್ಯಕ್ತಿ .
ಕನ್ನಡಪ್ರಭ ವಾರ್ತೆ ತುಮಕೂರು
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಚಂದ್ರಶೇಖರ್ ಆಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರ ಜನ್ಮದಿನವನ್ನು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಣೆ ಮಾಡುವುದರ ಮೂಲಕ ಆಚರಿಸಲಾಯಿತು.ಈ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ, ನಮ್ಮ ಸಂಘಟನೆಗಳಿಂದ ದೇಶದ ಪ್ರತಿಯೊಬ್ಬ ಮಹನೀಯರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ, ಇದರಿಂದ ಜನರಿಗೆ ಅವರು ಮಾಡಿದಂತಹ ಸಾಧನೆಗಳು, ಅವರ ಆದರ್ಶಗಳನ್ನು ಪರಿಚಯಿಸಿದಂತಾಗುತ್ತದೆ ಎಂದರು.
ನಂತರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ಆ್ಯಂಡ್ ಅಕಾಡೆಮಿ ಸಂಸ್ಥಾಪಕ ನಿಸಾರ್ ಅಹ್ಮದ್ ಮಾತನಾಡಿ, ಬಾಲಗಂಗಾಧರ ತಿಲಕರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತೀಯ ಸ್ವಾಯತ್ತತೆಗಾಗಿ ಚಳವಳಿ ನಡೆಸುವ ಮೂಲಕ ತಮ್ಮ ದೀರ್ಘ ರಾಜಕೀಯ ಜೀವನವನ್ನು ನಡೆಸಿದಂತಹ ವ್ಯಕ್ತಿ ಎಂದರು.ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರುಕುಮಾರ್‌ರವರು ಚಂದ್ರಶೇಖರ್ ಆಜಾದ್‌ರವರ ಕುರಿತು ಮಾತನಾಡಿದರು.
ಈ ವೇಳೆ ತುಮಕೂರು ನಗರ ಅಧ್ಯಕ್ಷರಾದ ಮನು ಟಿ.ಎಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಮೊಯಿನ್ ಅಹ್ಮದ್, ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷರಾದ ತನ್ವೀರ್ ಅಹ್ಮದ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ಆ್ಯಂಡ್ ಅಕಾಡೆಮಿ ಸಂಸ್ಥಾಪಕರಾದ ನಿಸಾರ್ ಅಹ್ಮದ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಮಾನಂಗಿ ಚಂದ್ರಯ್ಯ ಎಸ್., ಮುಖಂಡರುಗಳಾದ ಜೆ.ಪಿ ನೇಶನ್, ಮಂಜು ಕುಮಾರ್, ನರಸಯ್ಯ ಉಪ್ಪಾರಹಳ್ಳಿ, ಕಿರಣ್ ಕುಮಾರ್ ವೈ.ಎಸ್, ರಂಗಸ್ವಾಮಯ್ಯ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))