ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನ

| Published : Jan 08 2025, 12:17 AM IST

ಸಾರಾಂಶ

ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ತಪಸ್ಸು ಘನವಾದುದು, ಅವರ ಚರಿತ್ರೆಯಿಂದ ನಮ್ಮಲ್ಲಿ ದೈವ ಪ್ರೇರಣೆಯಾಗುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀಚನ್ನವೀರ ಸ್ವಾಮೀಜಿ ಹೇಳಿದರು.

ಸವಣೂರು; ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ತಪಸ್ಸು ಘನವಾದುದು, ಅವರ ಚರಿತ್ರೆಯಿಂದ ನಮ್ಮಲ್ಲಿ ದೈವ ಪ್ರೇರಣೆಯಾಗುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀಚನ್ನವೀರ ಸ್ವಾಮೀಜಿ ಹೇಳಿದರು.ಹೂವಿನಶಿಗ್ಲಿ ಶ್ರೀ ವಿರಕ್ತಮಠದ 46ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಏರ್ಪಡಿಸಿರುವ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನದ ಸೋಮವಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನುಷ್ಯ ಹುಟ್ಟಿನಿಂದ ಸಾಯುವವರಿಗೆ ಅನೇಕ ಕಷ್ಟ ಕೋಟಲೆಗಳಿಗೆ ಸಿಲುಕುತ್ತಾನೆ. ಧರ್ಮ ಮಾರ್ಗದಲ್ಲಿ ನಡೆದರೆ ಕಷ್ಟಗಳಿಂದ ಪಾರಾಗಬಹುದು. ಇಂತಹ, ಮಾರ್ಗಗಳಿಗೆ ಮಠಮಾನ್ಯಗಳು ಪುರಾಣ-ಪ್ರವಚನ ಏರ್ಪಡಿಸುವ ಮೂಲಕ ಧರ್ಮಜಾಗೃತಿಗೆ ಕೈಗೊಳ್ಳಲಾಗುತ್ತಿದೆ. ಶ್ರೀಮಠದ ಲಿಂ.ನಿರಂಜನ ಶ್ರೀಗಳು ಅಪಾರ ಭಕ್ತರನ್ನು ಹೊಂದಿದ್ದರು. ಭಕ್ತರ ಇಚ್ಛೆಯಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರವಚನಕಾರ ಪಂಚಾಕ್ಷರಿಶಾಸ್ತ್ರಿ ಅವರು ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನ ಪ್ರಸ್ತುತ ಪಡಿಸಿದರು.ಸಂಗೀತಗಾರರಾದ ಅನಿಲಕುಮಾರ ಹಾಗೂ ಬಾಲಾಜಿ ಸಂಗೀತ ಸೇವೆ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಗವಿಸಿದ್ದೇಶಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.