ಬೆಳ್ತಂಗಡಿ: ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಡಾ.ಸೋನಾ ರಾಮ್ ಮತ್ತು ಶಕ್ತಿ ರಾಮ್ ಅವರು ತಮ್ಮ ಭಕ್ತಾದಿಗಳ ತಂಡದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಭಜನಾ ಸತ್ಸಂಗವನ್ನು ನೆರವೇರಿಸಿದರು. ಡಾ ಸೋನಾ ರಾಮ್ ಮತ್ತು ಶಕ್ತಿ ರಾಮ್ ಅವರು ದುಬೈಯಲ್ಲಿ ಸಾವಿರಾರು ಭಾರತೀಯರಿಗೆ ಉದ್ಯೋಗದಾತರಾಗಿದ್ದು, ದುಬೈನಂತಹ ದೇಶದಲ್ಲಿ ತಮಿಳ್ ರೇಡಿಯೋವನ್ನು ಕಳೆದ ಒಂದು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ತಮಿಳುನಾಡಿನ ಶಿವಕಾಶಿ, ಮಧುರೈ ಮೀನಾಕ್ಷಿ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಪೋಷಕರಾಗಿದ್ದಾರೆ. ಬಳಂಜ ದೇವಳದಲ್ಲಿ ಸುಮಾರು 50 ಜನರ ತಂಡ ಆಗಮಿಸಿ ಸತ್ಸಂಗ ನೆರವೇರಿಸಿದರು.ಕ್ಷೇತ್ರದ ವತಿಯಿಂದ ಅವರನ್ನು ಆಡಳಿತ ಮೊಕ್ತೆಸರ ಶೀತಲ್ ಪಡಿವಾಳ್, ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸತೀಶ್ ರೈ ಬಾರ್ದಡ್ಕ, ಗುರು ಹೆಗ್ಡೆ, ಪ್ರಭಾಕರ ಹೆಗ್ಡೆ ಕೋಡಿ, ಚಂದ್ರಶೇಖರ ಪಿ.ಕೆ, ದಿನೇಶ್ ಪಿ.ಕೆ, ಜಗದೀಶ್ ರೈ, ವಿನು ಬಳಂಜ, ಸಂತೋಷ್ ಸಾಲಿಯಾನ್ ಕಾಪಿನಡ್ಕ, ಚಿತ್ತರಂಜನ್ ಹೆಗ್ಡೆ, ರತ್ನರಾಜ್ ಜೈನ್ ಪೇರಂದಬೈಲ್, ಗಣೇಶ್ ಬೊಂಟ್ರೊಟ್ಟು, ಸದಾನಂದ ಬೊಂಟ್ರೊಟ್ಟು, ಮನೋಹರ್ ಬಳಂಜ, ಸುನಂದ ಕುಳೆಂಜಿರೋಡಿ ಗುತ್ತು, ಸತೀಶ್ ಶೆಟ್ಟಿ ಕುರೇಲ್ಯ, ಅರ್ಚಕರಾದ ಸುರೇಶ್ ಭಟ್, ಮಂಜುನಾಥ್ ಭಟ್, ವಿಕ್ರಮ್ ಭಟ್, ಮತ್ತು ಊರವರು ಸ್ವಾಗತಿಸಿದರು. ಕ್ಷೇತ್ರದ ವತಿಯಿಂದ ಭಜನಾ ತಂಡವನ್ನು ಗೌರವಿಸಲಾಯಿತು. ಉದ್ಯಮಿ ಅಶ್ವಥ್ ಹೆಗ್ಡೆ ನೇತೃತ್ವ ವಹಿಸಿದ್ದರು.
ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರಿ ದುರ್ಗಾಪರಮೇಶ್ವರಿ ಕ್ಷೇತ್ರ: ಭಜನಾ ಸತ್ಸಂಗ
ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಡಾ.ಸೋನಾ ರಾಮ್ ಮತ್ತು ಶಕ್ತಿ ರಾಮ್ ಅವರು ತಮ್ಮ ಭಕ್ತಾದಿಗಳ ತಂಡದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಭಜನಾ ಸತ್ಸಂಗ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
