ಬಲ್ದೋಟಾದಿಂದ ಜನರ ಪ್ರಾಣಕ್ಕೆ ಕುತ್ತು

| Published : Nov 03 2025, 02:45 AM IST

ಸಾರಾಂಶ

ಮೊದಲು ಜೀವ ಮತ್ತು ಆರೋಗ್ಯ ಆ ನಂತರವಷ್ಟೇ ಉದ್ಯೋಗ, ಬೇಕಾದರೆ ಉದ್ಯೋಗ ಸೃಜನೆಯ ಮಾಲಿನ್ಯಕಾರಕವಲ್ಲದ ಕಾರ್ಖಾನೆ ಸ್ಥಾಪಿಸಲಿ

ಕೊಪ್ಪಳ: ಬಲ್ಡೋಟಾ ಕಂಪನಿ ಸ್ಥಾಪನೆಯಿಂದ ಜನರ ಪ್ರಾಣಕ್ಕೆ ಕುತ್ತಾಗುವುದು ಸತ್ಯ. ಉತ್ತಮ ಆರೋಗ್ಯ, ಜೀವವಿದ್ದರೆ ಮಾತ್ರ ಉದ್ಯೋಗ ಸಾಧ್ಯ. ಅನಾರೋಗ್ಯ ನೀಡುವ ಬಲ್ದೋಟಾ ಬೇಡವೆಂದು ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಹೇಳಿದರು.

ನಗರಸಭೆ ಸಂಕೀರ್ಣದ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಎಲ್ಲ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭ ವಿರೋಧಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಮೊದಲು ಜೀವ ಮತ್ತು ಆರೋಗ್ಯ ಆ ನಂತರವಷ್ಟೇ ಉದ್ಯೋಗ, ಬೇಕಾದರೆ ಉದ್ಯೋಗ ಸೃಜನೆಯ ಮಾಲಿನ್ಯಕಾರಕವಲ್ಲದ ಕಾರ್ಖಾನೆ ಸ್ಥಾಪಿಸಲಿ, ಅಲ್ಲದೆ ಈ ಹೋರಾಟ ನಗರದ ಪ್ರತಿಯೊಬ್ಬರ, ಬಾಧಿತಗೊಂಡ ಹಳ್ಳಿಗಳ ಜನರದ್ದಾಗಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತದೆ ಎಂದರು.

ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಎರಡನೇ ದಿನ ಕಲ್ಯಾಣನಗರ ಆಂಜನೇಯ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ನಡೆಸಲಾಯಿತು. ಈ ವೇಳೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗಮಿಸಿ ಬೆಂಬಲ ಸೂಚಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡುವ ಭರವಸೆ ನೀಡಿದರು.

ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್. ಪೂಜಾರ ಮಾತನಾಡಿ, ಇಲ್ಲಿನ ಕಂಪನಿಗಳ ಪ್ರಭಾವ ಹೋರಾಟ ಮುಂದುವರಿಸದಂತೆ ತಡೆ ಮಾಡುತ್ತಿದೆ. ನಮ್ಮ ಸಂವಿಧಾನದತ್ತ ಹೋರಾಟದ ಹಕ್ಕನ್ನು ಕಿತ್ತುಕೊಳ್ಳುವ ಎಲ್ಲ ಹತಾಶ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಈ ಭಾಗದ ಜನ ಗವಿಶ್ರೀಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬದುಕಿನ ಭರವಸೆ ಸ್ವಾಮೀಜಿಗಳ ಮೇಲಿದೆ. ಅವರು ಕೂಡಲೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದರು.

ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ, ಹೈಕೋರ್ಟ್ ವಕೀಲ ಮಂಜುನಾಥ ಬಾಗೆಪಲ್ಲಿ ಮಾತನಾಡಿದರು. ಗುತ್ತಿಗೆದಾರರಾದ ಕೃಷ್ಣಾ ಎಂ.ಇಟ್ಟಂಗಿ, ಹನುಮೇಶ ಕಡೇಮನಿ, ಸುಕರಾಜ ತಾಳಕೆರಿ, ಬಿ.ವಿರುಪಾಕ್ಷಿ ಕಿನ್ನಾಳ, ದೇವಪ್ಪ ಅರಕೇರಿ, ಜಿ.ವಿ.ಅಂಗಡಿ, ಜಿ. ಶ್ರೀನಿವಾಸುರಾವು, ಶಿವಪುತ್ರಪ್ಪ ಹತ್ತಿ, ಬಿ.ಮಾರುತಿ, ಎಲ್.ಎಂ. ಮಲ್ಲಯ್ಯ, ವಿಶ್ವನಾಥ ತಮ್ಮಣ್ಣರ, ವೀರಣ್ಣ ಹುಣಸಿಮರದ, ಶ್ರೀಧರ ಬನ್ನಿಕೊಪ್ಪ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಾ. ಮಂಜುನಾಥ ಸಜ್ಜನ, ವಕೀಲ ರಾಜು ಬಾಕಳೆ, ಭೀಮಸೇನ ಕಲಕೇರಿ, ಯಲ್ಲಪ್ಪ ಬಂಡಿ, ಬಸವರಾಜ.ಎನ್. ಯರದಿಹಾಳ, ರಮೇಶ ಪಾಟೀಲ್ ಬೇರಗಿ, ವಕೀಲ ಎಸ್.ಎಚ್. ಇಂಗಳದಳ್ಳಿ, ಶಾಂತಯ್ಯ ಅಂಗಡಿ, ಹನುಮಂತಪ್ಪ ಗೊಂದಿ, ಬಸವರಾಜ ಶೀಲವಂತರ, ಫಾಸ್ಟರ್ ಅಸೋಸಿಯೇಶನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಎಸ್.ಎ. ಗಫಾರ್, ಕಾಶಪ್ಪ ಚಲುವಾದಿ, ರಾಘು ಚಾಕ್ರಿ, ಮಾರ್ಕಂಡೇಶ ಬೆಲ್ಲದ, ಶಿವಕುಮಾರ, ಮಕ್ಬೂಲ್ ರಾಯಚೂರು, ಶಿವಪ್ಪ ಹಡಪದ, ಬಸವರಾಜ ನರೇಗಲ್, ದುರುಗೇಶ ಹಿರೇಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಸುಂಕಮ್ಮ ಗಾಂಧಿನಗರ, ಗಂಗಮ್ಮ, ಭೀಮಪ್ಪ ಯಲಬುರ್ಗಿ ಇದ್ದರು.