ಹಾವು ಕಚ್ಚಿ ಕಾರ್ಮಿಕ ಸಾವು
KannadaprabhaNewsNetwork | Published : Nov 04 2023, 12:31 AM IST
ಸಾರಾಂಶ
ಹಾವು ಕಚ್ಚಿ ಕಾರ್ಮಿಕ ಸಾವು
ಬಾಳೆಹೊನ್ನೂರು: ಹಾವು ಕಚ್ಚಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಸಮೀಪದ ಮಾಗುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಹನೀಶ್ (37) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಹನೀಶ್ ಗುರುವಾರ ಮನೆಯಲ್ಲಿ ಬಟ್ಟೆಯನ್ನು ಬಿಸಿಲಿಗೆ ಒಣ ಹಾಕುವ ಸಂದರ್ಭದಲ್ಲಿ ಬಲಗಾಲಿಗೆ ಹಾವು ಕಚ್ಚಿದ್ದು, ತಕ್ಷಣವೇ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಮೃತ ಹನೀಶ್ ಪತ್ನಿ ರೀತಾ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಹನೀಶ್ ಮಾಗುಂಡಿ ಗ್ರಾಪಂನ ಕಸ ವಿಲೇವಾರಿ ವಾಹನದ ತಾತ್ಕಾಲಿಕ ಚಾಲಕನಾಗಿದ್ದರು.