ಬಾಳೆಹೊನ್ನೂರು: ಮಳೆಗೆ 20 ವಿದ್ಯುತ್ ಕಂಬ ಧರೆಗೆ

| Published : Apr 21 2024, 02:22 AM IST

ಸಾರಾಂಶ

ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ತಡರಾತ್ರಿ ಸುರಿದ ಮಳೆಗೆ ಮೆಸ್ಕಾಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 20 ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ತಡರಾತ್ರಿ ಸುರಿದ ಮಳೆಗೆ ಮೆಸ್ಕಾಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 20 ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿದೆ.ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಬಾಳೆಹೊನ್ನೂರು ಪಟ್ಟಣ, ಇಡಕಣಿ, ಆಡುವಳ್ಳಿ ಮುಂತಾದ ಕಡೆಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ತುಂಡಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿಗಳು ಶನಿವಾರ ಇಡೀ ದಿನ ಕಾರ್ಯನಿರ್ವಹಿಸಿ ವಿದ್ಯುತ್ ಲೈನ್ ತುಂಡಾದಲ್ಲಿ ಸರಿಪಡಿಸುವ ಕಾರ್ಯ ಮಾಡಿದ್ದಾರೆ ಎಂದು ಮೆಸ್ಕಾಂ ಜೆಇ ತಾಜ್ ಸಾಹೇಬ್ ತಿಳಿಸಿದ್ದಾರೆ.ಬಾಳೆಹೊನ್ನೂರು ಹೋಬಳಿ ವಿವಿಧೆಡೆ ಶನಿವಾರ ಬೆಳಗ್ಗೆ ಒಂದು ಗಂಟೆ ವೇಳೆಗೆ ಆರಂಭಗೊಂಡ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಮುಂಜಾನೆ ಆರು ಗಂಟೆಯವರೆಗೂ ಉತ್ತಮ ಪ್ರಮಾಣದಲ್ಲಿ ಬಂದಿದೆ. ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧೆಡೆ 2.45 ಇಂಚಿಗೂ ಅಧಿಕ ಮಳೆಯಾದ ಬಗ್ಗೆ ವರದಿಯಾಗಿದೆ. ಪಟ್ಟಣದ ಮುಖ್ಯರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಹಲವೆಡೆ ಕಸ, ಕಡ್ಡಿ, ಜಲ್ಲಿ ಕಲ್ಲು, ಮಣ್ಣು ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.೨೦ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಆಡುವಳ್ಳಿ ಗ್ರಾಮದಲ್ಲಿ ಬಾರೀ ಗಾಳಿ ಮಳೆಗೆ ವಿದ್ಯುತ್ ಕಂಬ ತುಂಡಾಗಿರುವುದು.೨೦ಬಿಹೆಚ್‌ಆರ್ ೨: ಬಾಳೆಹೊನ್ನೂರು ಪಟ್ಟಣದ ಜೇಸಿ ವೃತ್ತದ ಬಳಿ ಧಾರಾಕಾರ ಮಳೆಗೆ ಕಲ್ಲು ಮಣ್ಣು ಮುಖ್ಯರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.