ಬಲಿಜ ಸಮಾಜದವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಿ: ಎಂ.ಎಸ್‌. ಶಂಕರನಾರಾಯಣ

| Published : Mar 26 2024, 01:19 AM IST

ಬಲಿಜ ಸಮಾಜದವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಿ: ಎಂ.ಎಸ್‌. ಶಂಕರನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ಬೆಳಸುವ ಹೊಣೆಗಾರಿಕೆ ಬಲಿಜ ಸಮಾಜದ ಪ್ರತಿಯೊಬ್ಬರು ಪೋಷಕರ ಕರ್ತವ್ಯವಾಗಿದೆ ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್‌. ಶಂಕರನಾರಾಯಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ಬೆಳಸುವ ಹೊಣೆಗಾರಿಕೆ ಬಲಿಜ ಸಮಾಜದ ಪ್ರತಿಯೊಬ್ಬರು ಪೋಷಕರ ಕರ್ತವ್ಯವಾಗಿದೆ ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್‌. ಶಂಕರನಾರಾಯಣ ತಿಳಿಸಿದರು.

ತಾಲೂಕು ಬಲಿಜ ಸಂಘದಿಂದ ಸೋಮವಾರ ಮಧುಗಿರಿಯ ಎಂ.ಎಸ್‌.ರಾಮಯ್ಯ ಸಮುದಾಯ ಭವನದಲ್ಲಿ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವ ಮತ್ತು 2023-24ನೇ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏಪರ್ಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಜನಾಂಗದವರ ಹಿತ ಕಾಪಾಡುವ ದೃಷ್ಟಿಯಿಂದ ಮಧುಗಿರಿಯಲ್ಲಿ ಅಮರನಾರಾಯಣ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಆರ್ಥಿಕ ನೆರವು ಕಲ್ಪಿಸುವ ಮೂಲಕ ಬಲಿಷ್ಠರನ್ನಾಗಿಸುವ ಉದ್ದೇಶದಿಂದ ಷೇರು ಸಂಗ್ರಹಿಸಿ ಸಹಕಾರಿ ಬ್ಯಾಂಕ್‌ ತೆರೆಯಬೇಕಿದೆ. ಆದ್ದರಿಂದ ಸಮಾಜದ ಏಳಿಗೆ ಮತ್ತು ಬಂಧುಗಳ ಕಷ್ಟಕ್ಕೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ ತೆರೆಯಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್‌ ಮಾತನಾಡಿ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು. ಆಗ ಮಾತ್ರ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯಲು ಸಾಧ್ಯ. ನಮ್ಮ ಜನಾಂಗದ ಮಕ್ಕಳು ಕಷ್ಟಪಟ್ಟು ಓದಿ ವಿದ್ಯಾವಂತರಾಗಿ ಹೆತ್ತವರ -ಗುರು ಹಿರಿಯರೆ ಮಾರ್ಗದರ್ಶನದಲ್ಲಿ ಯತೀದ್ರರ ಜೀವನದ ಸಂದೇಶ ಮೈಗೂಡಿಸಿಕೊಂಡು ಮುಂದೆ ಬರಬೇಕು ಎಂದರು. ಸಮುದಾಯದ ಮುಖಂಡ ಎಸ್‌ಬಿಟಿ ರಾಮು ಮಾತನಾಡಿ,ಯೋಗಿನಾರೇಯಣರ ಆಧ್ಯಾತ್ಮಿಕ ಚಂತನೆ ಮತ್ತು ಸಾಮಾಜಿಕ ವಿಚಾರ -ಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ,ಯತೀಂದ್ರರ ಚಿಂತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಪರಿರ್ವತನೆಗಾಗಿ ಶ್ರಮಿಸಿದ ಮಹನೀಯರಲ್ಲಿ ಕೈವಾರ ತಾತಯ್ಯರವರ ಪಾತ್ರ ಬಹಳ ದೊಡ್ಡದು.ಕೈವಾರ ತಾತಯ್ಯ,ಶ್ರೀಸಾಮಾನ್ಯರ ಅವದೂತರು,ಅಲೌಕಿಕ ವಾದವನ್ನು ಅಳವಡಿಸಿಕೊಂಡು ಜನರಿಗೆ ಸನ್ಮಾರ್ಗ ತೋರಿಸಿದ ಮಹಾಪುರುಷ ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಜನಾಂಗದ ಮಕ್ಕಳನ್ನು ಸನ್ಮಾನಸಿ ಗೌರವಿಸಲಾಯಿತು.ಸಮಾರಂಭದಲ್ಲಿ ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ಪುರಸಭೆ ಸದಸ್ಯ ಎಂ.ಆರ್‌. ಜಗನ್ನಾಥ್‌, ಸುಜಾತಾ, ಶೋಭಾ, ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟರಾಮು ಹಾಗೂ ಪದಾಧಿಕಾರಿಗಳಾದ ಆರ್‌.ಎಲ್‌.ಎಸ್‌.ರಮೇಶ್‌, ಶ್ರೀನಿವಾಮೂರ್ತಿ, ಎ.ನಾರಾಯಣ್‌, ಟಿ.ಪ್ರಸನ್ನಕುಮಾರ್‌, ಜಯರಾಮ್‌, ರಂಗನಾಥ್‌, ದೋಲಿಬಾಬು, ಎಸ್‌.ವಿ.ಗೋವಿಂದಪ್ಪ, ಪತ್ರಕರ್ತ ಬಾಬು, ನರಸಿಂಹಮೂರ್ತಿ, ಲಕ್ಷ್ಮಣ್‌, ವೇಣು, ಸತ್ಯನಾರಾಯಣ ಸೇರಿ ಅನೇಕರಿದ್ದರು.