ವೈಭವದಿಂದ ಬಲಿಪಾಡ್ಯಮಿ ಉತ್ಸವ, ಶೇಷ ವಾಹನೋತ್ಸವ

| Published : Oct 26 2025, 02:00 AM IST

ಸಾರಾಂಶ

ಪರಿಚಾರಕರಾದ ಎಂ.ಎನ್ ಪಾರ್ಥಸಾರಥಿ ಅನೂಚಾನ ಸಂಪ್ರದಾಯದಂತೆ ಶೇಷವಾಹನಕ್ಕೂ ಮೊದಲು ನಡೆದ ಪುಷ್ಪಕೈಂಕರ್ಯ ಹಾಗೂ ದೀಪಾವಳಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿದರು. ಬೆಳಗ್ಗೆ ಬಲಿಪಾಡ್ಯಮಿಯ ಅಂಗವಾಗಿ ಸ್ವಾಮಿಗೆ ಅಭಿಷೇಕ ನಡೆಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬಲಿಪಾಡ್ಯಮಿ ಉತ್ಸವ ವೈಭವದಿಂದ ನೆರವೇರಿತು.

ರಾತ್ರಿ ಗಡಚಿಕ್ಕುವ ಪಟಾಕಿ, ಆಕಾಶದಲ್ಲಿ ಮೂಡಿದ ಪಟಾಕಿ ಚಿತ್ತಾರದ ನಡುವೆ ಚೆಲುವನಾರಾಯಣಸ್ವಾಮಿ ಶೇಷವಾಹನೋತ್ಸವ ಸಂಭ್ರಮದಿಂದ ನೆರವೇರಿತು.

ಪರಿಚಾರಕರಾದ ಎಂ.ಎನ್ ಪಾರ್ಥಸಾರಥಿ ಅನೂಚಾನ ಸಂಪ್ರದಾಯದಂತೆ ಶೇಷವಾಹನಕ್ಕೂ ಮೊದಲು ನಡೆದ ಪುಷ್ಪಕೈಂಕರ್ಯ ಹಾಗೂ ದೀಪಾವಳಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿದರು. ಬೆಳಗ್ಗೆ ಬಲಿಪಾಡ್ಯಮಿಯ ಅಂಗವಾಗಿ ಸ್ವಾಮಿಗೆ ಅಭಿಷೇಕ ನಡೆಯಿತು. ವಾಹನೋತ್ಸವ ಮಂಟಪದಲ್ಲಿ ರಾಮಾನುಜಾಚಾರ್ಯರೊಂದಿಗೆ ಬಲಿಪಾಡ್ಯಮಿಯ ತಿರುವಾರಾಧನ ಘೋಷ್ಠಿಗಳು ನಡೆದ ನಂತರ ಭಕ್ತರಿಗೆ ಪ್ರಸಾದವಿನಿಯೋಗ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಯಿಂದ ಬಿಟ್ಟೂಬಿಡದೆ ಸುರಿಯುತ್ತಿದ್ದ ಮಳೆ ಅಚ್ಚರಿಯೆಂಬಂತೆ ಪುಪ್ಪ ಕೈಂಕರ್ಯಸೇವೆಯ ತಿರುವೀದಿ ಉತ್ಸವ ನಂತರ ಶೇಷವಾಹನೋತ್ಸವದ ನಡೆಯುವ ವೇಳೆ ಬಿಡುವುದು ನೀಡಿತ್ತು. ವಾಹನೋತ್ಸವ ಮುಗಿದು ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಮರಳುತ್ತಿದ್ದಂತೆ ಮತ್ತೆ ಜೋರು ಮಳೆ ಸುರಿಯಲಾರಂಭಿಸಿದ್ದು ವಿಶೇಷವೆನಿಸಿತ್ತು.

ಸರ್ಕಾರದ ಆದೇಶದಂತೆ ಸಂಜೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗೋಪೂಜೆ ನೆರವೇರಿಸಲಾಯಿತು. ಹೊರಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ರಾಜಗೋಪುರದ ಕೆಳಭಾಗದ ಚಪ್ಪರದ ಕೆಳಗೆ ಬಲಿಪೀಠದ ಬಳಿ ಜಿಲ್ಲಾಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಧನಲಕ್ಷ್ಮಿದಂಪತಿಗಳು ಯತಿರಾಜದಾಸರ್ ಗುರುಪೀಠಕ್ಕೆ ಸಮರ್ಪಿಸಿದ್ದ ಮುದ್ದಾದ ಪುಂಗನೂರು ಹಸುಕರುಗಳಿಗೆ ಹಾರಹಾಕಿ ಮಂಗಳಾರತಿ ಮಾಡಿ ಸಿಹಿತಿನಿಸುವ ಮೂಲಕ ಗೋಪೂಜೆ ನೆರವೇರಿಸಲಾಯಿತು.

ಶ್ರದ್ಧಾಭಕ್ತಿಂದ ಗೋಪೂಜೆ ಮಾಡಿದ ಸ್ವಾಮಿಸನ್ನಿಧಿ ಅರ್ಚಕ ವರದರಾಜಭಟ್ಟರ್ ಗೋವುಗಳಿಗೆ ಗೋಗ್ರಾಸ ಸಿಹಿ ತಿಣಿಸಿದರು. ಪಾರುಪತ್ತೇಗಾರ್ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ನೇತೃತ್ವದಲ್ಲಿ ನಡೆದ ಗೋಪೂಜೆಯಲ್ಲಿ ಹವಾಲ್ದಾರ್ ಬಸವರಾಜು, ಸೀಪಾಯಿ ಮತ್ತು ಕಚೇರಿ ಸಿಬ್ಬಂದಿಗಳಾದ ಹರೀಶ್, ವಿಜಯಕುಮಾರ್ ಮತ್ತಿತತರು ಭಾಗವಹಿಸಿದ್ದರು.