ವಿವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್; ಆಳ್ವಾಸ್‌ ಪುರುಷರ ತಂಡ ಸತತ ೧೯ನೇ ಬಾರಿ ಚಾಂಪಿಯನ್

| Published : May 18 2024, 12:33 AM IST

ವಿವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್; ಆಳ್ವಾಸ್‌ ಪುರುಷರ ತಂಡ ಸತತ ೧೯ನೇ ಬಾರಿ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಸೆಮಿಫೈನಲ್ ಹಣಾಹಣಿಯಲ್ಲಿ ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ ತಂಡ ೩೫-೧೬, ೩೫-೧೩ ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಸತತ ೧೯ನೇ ಬಾರಿ ದಿವಂಗತ ಎಂಕೆ ಅನಂತ ರಾಜ್ ಮೆಮೋರಿಯಲ್ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು.

ಸೆಮಿಫೈನಲ್ ಹಣಾಹಣಿಯಲ್ಲಿ ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ ತಂಡ ೩೫-೧೬, ೩೫-೧೩ ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.ಅಂತಿಮ ಪಂದ್ಯದಲ್ಲಿ ಕುಶಾಲನರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ೩೫-೦೯, ೩೫-೦೪ ನೇರ ಸೆಟ್‌ಗಳಿಂದ ಸೋಲಿಸಿ ಸತತ ೧೯ನೇ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ ಗೆದ್ದುಕೊಂಡಿತು. ಆಳ್ವಾಸ್‌ನ ಚೇತನ್ ಉತ್ತಮ ದಾಳಿಗಾರ ಹಾಗೂ ನಂದಕುಮಾರ್ ಉತ್ತಮ ರಕ್ಷಣಕಾರ ಪ್ರಶಸ್ತಿಗೆ ಭಾಜನರಾದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.