ಸಾರಾಂಶ
ಯಾವುದೇ ಕಲೆಯಾಗಲಿ ಹಾಗೂ ಕಸುಬಾಗಲಿ ನಶಿಸದಂತೆ ಅವುಗಳನ್ನು ಸಂರಕ್ಷಿಸಬೇಕು ಹಾಗೂ ಅದನ್ನು ಸಾರ್ವಜನಿಕರು ಸಹ ಪ್ರೋತ್ಸಾಹಿಸಬೇಕು
ಚನ್ನಮ್ಮನ ಕಿತ್ತೂರು: ಯಾವುದೇ ಕಲೆಯಾಗಲಿ ಹಾಗೂ ಕಸುಬಾಗಲಿ ನಶಿಸದಂತೆ ಅವುಗಳನ್ನು ಸಂರಕ್ಷಿಸಬೇಕು ಹಾಗೂ ಅದನ್ನು ಸಾರ್ವಜನಿಕರು ಸಹ ಪ್ರೋತ್ಸಾಹಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಮಂಗಳವಾರ ಬಿದಿರು ಸಂಸ್ಕರಣಾ ಘಟಕದ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿದಿರಿನಲ್ಲಿ ವಿವಿಧ ವಸ್ತುಗಳನ್ನು ತಯಾರಿಸುವ ಕಲೆ ಮೇದಾರ ಸಮಾಜದಲ್ಲಿ ಇದೆ. ಜನರು ಪ್ಲಾಸ್ಟಿಕ್ ವಸ್ತುಗಳಿಗೆ ಮಾರುಹೋಗಿ ಪುರಾತನ ಕಾಲದಿಂದಲೂ ಬಳಕೆಯಾಗುತ್ತಿದ್ದ ನೈಸರ್ಗಿಕ ಬಿದರಿನ ವಸ್ತುಗಳನ್ನು ಮರೆತು ಹೋಗಿದ್ದಾರೆ. ಆದರೆ ಈಗ ಕಾಲ ಮತ್ತೇ ಬದಲಾಗುತ್ತಿದೆ ಆರ್ಗನಿಕ್ ಆಹಾರಕ್ಕೆ, ವಸ್ತುಗಳಿಗೆ ಹೆಚ್ಚು ಬೇಡಿಕೆ ಸಿಗುತ್ತಿದೆ ಎಂದು ಹೇಳಿದರು. ಉಪವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್, ಬಿದರಿನ ಮಹತ್ವ ಹಾಗೂ ಅದರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಉಗರಖೋಡ ಗ್ರಾಪಂ ಅಧ್ಯಕ್ಷ ಶಫೀಕ್ ಹವಾಲ್ದಾರ, ಪಪಂ ಸದಸ್ಯ ಕೃಷ್ಣಾ ಬಾಳೆಕುಂದ್ರಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಅರಣ್ಯ ಅಧಿಕಾರಿ ಸಂತೋಷ್ ಸುಂಬ್ಳಿ, ಸಿದ್ದು ಕೋತ್, ನಾಸಿರ್ ಮೊಕಾಶಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮುಖಂಡರಾದ ಅಷ್ಪಕ್ ಹವಾಲ್ದಾರ್, ಸುನಿಲ್ ಘಿವಾರಿ ಇತರರಿದ್ದರು.