ಸಾರಾಂಶ
ಬನಹಟ್ಟಿಯ ಶ್ರೀ ಹನುಮಾನ ದೇವರ ಓಕುಳಿ ಅಂಗವಾಗಿ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿ ನಗರದ ನಾಮದೇವ ಗಲ್ಲಿಯಲ್ಲಿ ಶನಿವಾರ ಕಾರ ಹುಣ್ಣಿಮೆ ನಿಮಿತ್ತ ಹನುಮಾನ ದೇವರ ಓಕುಳಿ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ನಗರದಾದ್ಯಂತ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ನಡೆಯಿತು. ನಂತರ ಹೊಂಡದ ಪೂಜೆಯೊಂದಿಗೆ ನೀರೋಕುಳಿ ಕಾರ್ಯಕ್ರಮ ನಡೆಯಿತು. ಈರಣ್ಣ ಹೊನವಾಡ, ಕುಮಾರ ಬಕರೆ, ನಾಗಪ್ಪ ಬಕರೆ, ಗಿರೀಶ ಹಾಸೀಲಕರ, ವಾಸು ಕೋಪರ್ಡೆ, ಶ್ರೀಶೈಲ ಗಣೇಶನವರ, ರಾಮು ಕೋಪರ್ಡೆ, ವಸಂತ ಕೋಪರ್ಡೆ, ಮುಕುಂದ ಕೋಪರ್ಡೆ, ಗಂಗಪ್ಪ ಗೋಂದಕರ, ಬಾಳು ಗಣೇಶನವರ, ಮಾದೇವ ಬಸ್ಮೆ, ರಾಜು ಬಂಡಿಗಣಿ, ರಮೇಶ ಬೆಳ್ಳಗಿ, ಕಿರಣ ಭಸ್ಮೆ, ಆತ್ಮಾರಾಮ ಬಕರೆ, ಚಂದು ಗೋಂದಕರ, ಶ್ರೀಶೈಲ ಬಂಡಿಗಣಿ, ಮಹಾಂತೇಶ ಜಾಲಿಕಟ್ಟಿ, ಮಾನಿಂಗ ಕೋಪರ್ಡೆ, ಬಾಳಕೃಷ್ಣ ಹಾಸೀಕರ, ಜ್ಯೋತಿಭಾ ಕೋಪರ್ಡೆ ಹನುಮಾನ ದೇವರ ಟ್ರಸ್ಟ್ ಕಮಿಟಿಯ ನೂರಾರು ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.