ಬಿರುಗಾಳಿ, ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ

| Published : May 25 2024, 12:52 AM IST

ಸಾರಾಂಶ

ಸೀತನೂರಿನ ರೈತರಾದ ಬಾಬುರಾವ್ ಪೊಲೀಸ್ ಪಾಟೀಲರಿಗೆ ಸೇರಿದ್ದ ಸರ್ವೆ ನಂಬರನಲ್ಲಿ 140ರಲ್ಲಿದ್ದ 4 ಎಕರೆ ಜಮೀನಲ್ಲಿ ನಳನಲಿಸುತ್ತಿದ್ದ 4ಸಾವಿರ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕೆ ಬಿದ್ದಿವೆ. ಇದೇ ಊರಿನ ರೈತ ನಾಗಣ್ಣಗೌಡ್ಡ ಪೊಲೀಸ್ ಪಾಟೀಲ (ಸರ್ವೆ ನಂಬರ್ 142) ರ 3 ಎಕರೆ ಜಮೀನಿನಲ್ಲಿ 2, 800 ಬಾಳೆ ಗಿಡಗಳು ಗಾಳಿಯ ಹೊಡೆತಕ್ಕೆ ನೆಲಕ್ಕೊರಗಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಗುರುವಾರ ಸಂಜೆ 1 ಗಂಟೆ ಬೀಸಿದ ಬಿರಗಾಳಿ, ಮಳೆ, ಸಿಡಿಲಿನ ಅಬ್ಬರ ಕಲಬುರಗಿ ತಾಲೂಕಿನ ಸೀತನೂರ್‌ ರೈತರ ಬಾಳೆಲ್ಲ ಗೋಳಾಗಿಸಿದೆ.

ಈ ಊರಿನ ಸುತ್ತಮುತ್ತ ತೋಟಗಾರಿಕೆ ಬೆಳೆಗಳೇ ಹೆಚ್ಚು ರೈತರು ಬೇಸಾಯ ಮಾಡಿಕೊಂಡಿದ್ದಾರೆ. ರಭಸದ ಬಿರುಗಾಳಿಗೆ ಡಜನ್‌ಗಟ್ಟಲೇ ಕಾಯಿ ಕಟ್ಟಿದ್ದ ಬಾಳೆ ಗಿಡಗಲು ನೆಲಕ್ಕುರುಳಿವೆ. ಇದರಿಂದಾಗಿ ರೈತರು ಕಮಣೀರು ಹಕುವಂತಾಗಿದೆ.

ಸೀತನೂರಿನ ರೈತರಾದ ಬಾಬುರಾವ್ ಪೊಲೀಸ್ ಪಾಟೀಲರಿಗೆ ಸೇರಿದ್ದ ಸರ್ವೆ ನಂಬರನಲ್ಲಿ 140ರಲ್ಲಿದ್ದ 4 ಎಕರೆ ಜಮೀನಲ್ಲಿ ನಳನಲಿಸುತ್ತಿದ್ದ 4ಸಾವಿರ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕೆ ಬಿದ್ದಿವೆ. ಇದೇ ಊರಿನ ರೈತ ನಾಗಣ್ಣಗೌಡ್ಡ ಪೊಲೀಸ್ ಪಾಟೀಲ (ಸರ್ವೆ ನಂಬರ್ 142) ರ 3 ಎಕರೆ ಜಮೀನಿನಲ್ಲಿ 2, 800 ಬಾಳೆ ಗಿಡಗಳು ಗಾಳಿಯ ಹೊಡೆತಕ್ಕೆ ನೆಲಕ್ಕೊರಗಿವೆ.

ಬೆಳೆದು ನಿಂತು ಇನ್ನೇನು ಹಣ್ಣು ಬಿಡುವ ಹಂತದಲ್ಲಿದ್ದ ಬಾಳೆ ಹೀಗೆ ಮಳೆ, ಗಾಳಿಗೆ ತುತ್ತಾಗಿ ನೆಲಕ್ಕೆ ಬಿದ್ದು ಹಾಳಾಗಿರೋದು ಕಂಡು ರೈತರು ಮರಗುತ್ತಿದ್ದಾರೆ.

ಇನ್ನು ರೈತರಾದ ಬಸವರಾಜ ಭೀಮರಾಯ ಅಲಾಪುರ (ಸರ್ವೆ ನಂಬರ್ 141) ಇವರ 3ಎಕರೆ ಜಮೀನಿನಲ್ಲಿದ್ದ 2, 800 ಬಾಳೆ ಸಹ ಧರೆಗೊರಗಿದೆ. ಇದರಿಂದಾಗಿ ಬಾಳೆ ಬೆಳೆದು ತುಸು ಆದಾಯ ಮಾಡಿಕೊಂಡು ಸಂಸಾರ ನಡೆಸುವ ಈ ರೈತರ ಕನಸು ನುಚ್ಚುನೂರಾಗಿದೆ.

ಕಲಬುರ್ಗಿ ತಾಲೂಕಿನ ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರು, ಹೊಲಗಳಿಗೆ ಬಂದು ನೋಡಿಕೊಂಡು ಹೋಗಿದ್ದು ಹಾಳಾದ ಬೆಳೆಗಳ ಪಂಚಾನಾಮೆ ಮಾಡಿದ್ದಾರೆ. ಶಾಸಕರಾದ ಅಲ್ಲಮಪ್ರಭು ಪಾಟೀಲ ಕೂಡಾ ಭೇಟಿ ನೀಡಿ ಹೋಗಿದ್ದಾರೆ.

ಊರಿನ ಮುಖಂಡರಾದ ಬಾಬುಗೌಡ ಪೊಲೀಸ್ ಪಾಟೀಲ, ಪವನಕುಮಾರ ವಳಕೇರಿ, ನಾಗಣ್ಣಗೌಡ, ಸಾಹೇಬ ಪಟೇಲ, ಸೈದು ಕಣ್ಣೂರ್, ಸಿದಣ್ಣ ಗೌಡ, ಶಂಕರ ಗೌಡ ಇ‍ರೆಲ್ಲರೂ ಹಾಳಾದ ಬೆಳೆಗೆ ಬೇಗ ಪರಿಹಾರ ಬಿಡುಗಡೆಯಾಗಿ ಅದು ನೊಂದ ರೈತರಿಗೆ ಸೇರಬೇಕು ಎಂದು ಜಿಲ್ಲಾಡಳಿತಕ್ಕೆ, ತೋಟಗಾರಿಕೆ ಇಲಾಖೆಯವರಿಗೆ ಆಗ್ರಹಿಸಿದ್ದಾರೆ.

ಎತ್ತು ಸತ್ತ ಮನೆಯಲ್ಲಿ ಸೂತಕದ ಛಾಯೆ: ರಭಸದಿಂದ ಬೀಸಿದ ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ ಎತ್ತು ಸಾವನ್ನಪ್ಪಿರುವ ಧಾರುಣ ಘಟನೆ ಕಂಡಿರುವ ರೈತನ ಮನೆಲ್ಲಿ ಸೂತಕದ ಛಾಯೆ ಕಂಡಿದೆ. ಗ್ರಾಮದ ರೈತ ಅಂಬಾರಾಯ್‍ ಗುರುಣ್ಣ ಕಣ್ಣಿ (ಸ.ನಂ 10) ಅವರಿಗೆ ಸೇರಿದ್ದ ಎತ್ತು ಇದಾಗಿತ್ತು. ಒಂದು ಹೊಲ ನೀನೇ ಉಳುಮೆ ಮಾಡುತ್ತಿದ್ದೆ ಎಂದು ಸಾವನ್ನಪ್ಪಿದ ಎತ್ತನ್ನು ನೆನೆದು ರೈತರು, ರೈತ ಮಹಿಳೆಯರು, ಮನೆ ಮಂದಿ ಎಲ್ಲರು ಕಣ್ಣೀರು ಹಾಕುತ್ತಿದ್ದಾರೆ.