ಶುಕ್ರವಾರ ರಾತ್ರಿ ಬಿದ್ದ ಭಾರೀ ಮಳೆಯಿಂದಾಗಿ ಗ್ರಾಮದ ಪುಷ್ಪ ಕೊಂ. ಬಸವರಾಜ್ ಎಂಬುವವರು ವಾಸವಿದ್ದ ಮನೆ ಮೇಲ್ಛಾವಣಿ ಮುರಿದು ಬಿದ್ದಿದ್ದು, ವಾಟರ್ ಟ್ಯಾಂಕ್ ಮನೆ ಒಳಗೆ ಬಿದ್ದ ಪರಿಣಾಮ ಗೃಹೋಪಯೋಗಿ ವಸ್ತುಗಳಾದ ಟಿವಿ, ಇತರೆ ಉಪಕರಣಗಳು, ಮಲಗುವ ಮಂಚ, ಮನೆ ಗೋಡೆಯೂ ಸಹ ಹಾಳಾಗಿ ₹2 ರಿಂದ ₹3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಳವಳ್ಳಿ: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಸುಮಾರು 4 ಎಕರೆ ಬಾಳೆ ತೋಟ ನೆಲಕಚ್ಚಿರುವ ಘಟನೆ ತಾಲೂಕಿನ ಮಾಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವಮೂರ್ತಿ, ಚಂದ್ರು ಹಾಗೂ ಸೋಮೇಶ್ ಎಂಬುವವರಿಗೆ ಸೇರಿದ ಫಲಬಿಟ್ಟಿದ್ದ 4 ಎಕರೆ ಬಾಳೆ ನೆಲಕ್ಕುರುಳಿ ಸುಮಾರು ₹4 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದರು.ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಾಂತರಾಜು ಮಾತನಾಡಿ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾರ್ಗಸೂಚಿಯನ್ವಯ ರೈತರಿಗೆ ಪರಿಹಾರ ನೀಡಲು ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಬಿರುಗಾಳಿ ಮಳೆಗೆ ಮುರಿದು ಬಿದ್ದ ಮನೆ ಮೇಲ್ಛಾವಣಿ:ಮಂಡ್ಯ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಮುರಿದು ಬಿದ್ದು ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಬಿದ್ದ ಭಾರೀ ಮಳೆಯಿಂದಾಗಿ ಗ್ರಾಮದ ಪುಷ್ಪ ಕೊಂ. ಬಸವರಾಜ್ ಎಂಬುವವರು ವಾಸವಿದ್ದ ಮನೆ ಮೇಲ್ಛಾವಣಿ ಮುರಿದು ಬಿದ್ದಿದ್ದು, ವಾಟರ್ ಟ್ಯಾಂಕ್ ಮನೆ ಒಳಗೆ ಬಿದ್ದ ಪರಿಣಾಮ ಗೃಹೋಪಯೋಗಿ ವಸ್ತುಗಳಾದ ಟಿವಿ, ಇತರೆ ಉಪಕರಣಗಳು, ಮಲಗುವ ಮಂಚ, ಮನೆ ಗೋಡೆಯೂ ಸಹ ಹಾಳಾಗಿ ₹2 ರಿಂದ ₹3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿದ ಗ್ರಾಮ ಆಡಳಿತಾಧಿಕಾರಿ ಸಿ.ಗುಣಶೇಖರ್ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ನೀಡುವ ಬಗ್ಗೆ ತಿಳಿಸಿದರು. ಸರ್ಕಾರದಿಂದ ಬರುವ ಸವಲತ್ತುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ನಾರಾಯಣ ಭೇಟಿ ನೀಡಿ ಮನೆ ನಿರ್ಮಿಸಲು ಸರ್ಕಾರದಿಂದ ಬರುವ ವಿಶೇಷ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.