ಸಾರಾಂಶ
ಬಸವನಬಾಗೇವಾಡಿ: ರೈತರು ರಸಗೊಬ್ಬರ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ರಸಗೊಬ್ಬರ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಉಂಟಾಗಿದೆ. ಹೀಗೆ ತಮ್ಮ ಅಂಗಡಿ ಮುಂದೆ ಯೂರಿಯಾ ಗೊಬ್ಬರ ಪಡೆಯಲು ನಿಂತಿದ್ದ ರೈತರಿಗೆ ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಬಾಳೆಹಣ್ಣು ವಿತರಿಸಿದ್ದಾರೆ. ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ರೈತರಿಗೆ ಬಾಳೆಹಣ್ಣು ವಿತರಿಸಿದ್ದಾರೆ. ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಮಾತನಾಡಿ, ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ಇದೇ ವಾರದಲ್ಲಿ ೫೦೦ ಟನ್ ಬಂದಿದೆ. ರೈತರ ಬೇಡಿಕೆಯಂತೆ ಯೂರಿಯಾ ಪೂರೈಕೆಯಾಗುತ್ತಿದೆ. ಒಂದೆರಡು ದಿನಗಳಲ್ಲಿ ಸ್ಥಳೀಯ ಪಿಕೆಪಿಎಸ್‌ಗೆ ೫೦ ಟನ್, ಮಹಾಲಕ್ಷ್ಮೀ ಅಗ್ರೋ ಕೇಂದ್ರಕ್ಕೆ ೧೫ ಟನ್ ಸೇರಿ ಪಟ್ಟಣದಲ್ಲಿರುವ ವಿವಿಧ ಅಂಗಡಿಗಳಿಗೆ ಯೂರಿಯಾ ಬಂದಿದೆ. ತಾಲೂಕಿನಲ್ಲಿ ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ, ಪಿಕೆಪಿಎಸ್ ಸಿಬ್ಬಂದಿ ಇತರರು ಇದ್ದರು.