ಬಾಣಾವರ ಠಾಣೆಗೆ ಬ್ಯಾರಿಕೇಡ್‌ಗಳ ಕೊಡುಗೆ

| Published : Jul 29 2024, 12:49 AM IST

ಸಾರಾಂಶ

ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್‌ ಕಂಪನಿಯವರಿಂದ ಐದು ಬ್ಯಾರಿಕೇಡ್‌ಗಳನ್ನು ಅರಸೀಕೆರೆ ತಾಲೂಕಿನ ಬಾಣಾವರದ ಪೊಲೀಸ್‌ ಠಾಣೆಗೆ ಕೊಡುಗೆಯಾಗಿ ಕೊಡಲಾಯಿತು. ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕಾರು ಸ್ಟೀಲ್ ಚೇರ್‌ಗಳನ್ನು ಕೊಡುವ ಭರವಸೆಯನ್ನು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದ ಪೊಲೀಸ್‌ ಠಾಣೆಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್‌ ಕಂಪನಿಯವರಿಂದ ಐದು ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ಕೊಡಲಾಯಿತು.

ಮೈಕ್ರೋ ಫೈನಾನ್ಸ್ ಕಡೆಯಿಂದ ಕೊಡುಗೆಯನ್ನು ಸ್ವೀಕರಿಸಿದ ಪಿಎಸ್‌ಐ ಸುರೇಶ್ ಸಿಎಸ್ ಮಾತನಾಡಿ, ಮೈಕ್ರೋ ಫೈನಾನ್ಸ್ ನವರು ಕೇವಲ ಸಾರ್ವಜನಿಕರಗೆ ಹಣದ ಸಹಕಾರ ನೀಡುವುದಲ್ಲದೆ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಬ್ಯಾರಿಕೇಡ್‌ಗಳನ್ನು ನೀಡಿರುವುದು ತುಂಬಾ ಸಂತೋಷಕರವಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕಾರು ಸ್ಟೀಲ್ ಚೇರ್‌ಗಳನ್ನು ಕೊಡುವ ಭರವಸೆಯನ್ನು ನೀಡಿರುವುದು ತುಂಬಾ ಸಂತೋಷವಾಗಿದೆ ಎಂದರು.

ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್ ದೇವರಾಜ್ ಮಾತನಾಡಿ, ನೇರ್ಲಿಗೆ ಗ್ರಾಮದ ಅಂಗನವಾಡಿಯ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್‌ಗಳು ಮತ್ತು ಜಮೆಖಾನಗಳನ್ನು ನೀಡಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ನಮಗೆ ಬರುವ ಆದಾಯದ ಸ್ವಲ್ಪ ಭಾಗವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿಎಸ್ಐ ಸುರೇಶ್ ಸಿ ಎಸ್. ಎಎಸ್‌ಐ ನಾಗರಾಜು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವಲಯ ಅಧಿಕಾರಿಗಳಾದ ಸುರೇಶ್‌ ಬಿ ಎಂ, ಬ್ರಾಂಚ್ ಮ್ಯಾನೇಜರ್ ವಸಂತ್ ಕುಮಾರ್, ಕೇಂದ್ರ ಮ್ಯಾನೇಜರ್ ಅಶೋಕ್ ಮತ್ತು ಕೀರ್ತಿ ಕುಮಾರ್‌ ಉಪಸ್ಥಿತರಿದ್ದರು.