ಕಳೆದ ಏ.೩೦ರಂದು ಬೆಳಗ್ಗೆ ೯ರ ಸುಮಾರಿಗೆ ೪೫ ಅಪ್ರಾಪ್ತ ಬಾಲಕರು ಮುಜಾಫರ್ ರೈಲಿನಿಂದ ಬಂದು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಗುಂಪಾಗಿ ಇಳಿದು ಸಂಶಯಾಸ್ಪದವಾಗಿ ನಿಂತಿದ್ದು, ಅವರೊಂದಿಗೆ ಇದ್ದ ಐವರು ಮೌಲ್ವಿಗಳನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಕೊಟ್ಟಿಲ್ಲ.
ಕನ್ನಡಪ್ರಭ ವಾರ್ತೆ ಕೋಲಾರಅಪ್ರಾಪ್ತ ಬಾಲಕರನ್ನು ಸಂಶಯಾಸ್ಪದವಾಗಿ ಕಾನೂನು ಬಾಹಿರವಾಗಿ ಸಾಗಾಟ ಮಾಡಿರುವ ಅಪರಾಧಕ್ಕೆ ಸಂಬಂಧಿಸಿದಂತೆ ತಕ್ಷಣ ಮಾನವ ಕಳ್ಳಸಾಗಾಣಿಕೆ ಶಂಕೆಯಡಿ ಎಫ್‌ಐಆರ್ ದಾಖಲಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶುಕ್ರವಾರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.ಕಳೆದ ಏ.೩೦ರಂದು ಬೆಳಗ್ಗೆ ೯ರ ಸುಮಾರಿಗೆ ೪೫ ಅಪ್ರಾಪ್ತ ಬಾಲಕರು ಮುಜಾಫರ್ ರೈಲಿನಿಂದ ಬಂದು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಗುಂಪಾಗಿ ಇಳಿದು ಸಂಶಯಾಸ್ಪದವಾಗಿ ನಿಂತಿದ್ದು, ಅವರೊಂದಿಗೆ ಇದ್ದ ಐವರು ಮೌಲ್ವಿಗಳನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಕೊಟ್ಟಿಲ್ಲ. ಈ ಬಗ್ಗೆ ಕೆಲವು ಪತ್ರಕರ್ತರು ಬಂಗಾರಪೇಟೆ ಠಾಣೆಗೆ ಸುದ್ದಿ ರವಾನಿಸಿದ್ದರು. ಆಗ ಪೊಲೀಸರು ಆಗಮಿಸಿ ವಿಚಾರಿಸಿದಾಗ ಧಾರ್ಮಿಕ ಶಿಕ್ಷಣಕ್ಕೆ ಹಾವೇರಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದು, ಇವರು ಹಾವೇರಿಗೆ ಹೋಗುವವರಿದ್ದರೆ ಬಂಗಾರಪೇಟೆಯಲ್ಲಿ ಇಳಿಯಲು ಕಾರಣವೇನು ಎಂಬುದಕ್ಕೆ ಸಮರ್ಥ ಉತ್ತರ ನೀಡಲು ವಿಫಲರಾಗಿದ್ದಾರೆ.ಅಪ್ರಾಪ್ತ ಬಾಲಕರು ಮತ್ತು ಮೌಲ್ವಿಗಳ ಹೇಳಿಕೆಗೂ ಒಂದಕ್ಕೊಂದು ತಾಳೆಯಾಗಲಿಲ್ಲ, ಮಕ್ಕಳ ಪಾಲಕರ ಯಾವುದೇ ಪರವಾನಗಿ ಪತ್ರವೂ ಇರಲಿಲ್ಲ. ಆದ್ದರಿಂದ ಇದು ಮಕ್ಕಳ ಕಳ್ಳಸಾಗಾಣಿಕೆಯ ಅನುಮಾನಗಳಿದ್ದು, ಕೂಡಲೇ ದೂರು ದಾಖಲಿಸಲು ಆಗ್ರಹಿಸಿದರು.ಮಾನವ ಕಳ್ಳಸಾಗಾಣೆ ಪ್ರಕರಣ ದಾಖಲಿಸಿ, ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಸ್ಟೋಡಿಯಲ್ ವಿಚಾರಣೆ ನಡೆಸಬೇಕು, ಪ್ರಕರಣದ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ನೀಟ್ ಲೋಪ ದೊಡ್ಡ ಮೋಸ: ನೀಟ್ ಪರೀಕ್ಷೆ ಲೋಪ ದೊಡ್ಡ ಮೋಸ. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿದವರನ್ನು ಜೈಲಿಗೆ ಹಾಕುವ ಬದಲು ಅವರನ್ನು ಶೂಟೌಟ್ ಮಾಡಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ, ವಿಭಾಗೀಯ ಅಧ್ಯಕ್ಷ ರಮೇಶ್‌ರಾಜ್, ಜಿಲ್ಲಾಧ್ಯಕ್ಷ ಚಿನ್ನಪ್ಪಿ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ನಾಗೇಂದ್ರ, ಅರುಣ್, ಅಪ್ಪು, ಸುಪ್ರಿತ್, ಮಹೇಶ್, ಚಿತ್ರನಟ ಶಬರೀಶ್ ಇದ್ದರು.ಬಾಕ್ಸ್:ಕೋಲಾರಕ್ಕೆ ಅಕ್ರಮ ಬಾಂಗ್ಲಾ ವಲಸಿಗರು? ಅಕ್ರಮ ಬಾಂಗ್ಲಾ ವಲಸಿಗರು ಕೋಲಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಅಕ್ರಮ ಬಾಂಗ್ಲಾ ವಲಸಿಗರ ಗುರುತಿಸಿ ಹೊರಹಾಕುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.