ಸಾರಾಂಶ
ಇಲ್ಲಿನ ಕನ್ನಡ ಸಂಘ ಅನ್ಯ ಭಾಷಿಕರ ಮಿಶ್ರಿತವಾಗಿರುವ ಪಟ್ಟಣದಲ್ಲಿ ಪ್ರತಿ ತಿಂಗಳು ೧ರಂದು ನಿರಂತರವಾಗಿ ಕನ್ನಡ ಭಾಷೆಯನ್ನು ಬೆಳೆಸಿ ಅನ್ಯ ಭಾಷಿಗರಿಗೆ ಕನ್ನಡ ವ್ಯಾಮೋಹ ಮೂಡಿಸಲು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಮಾದರಿ ಸಂಘ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬಂಗಾರಪೇಟೆ ಕನ್ನಡ ಸಂಘ ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಘಗಳು ಪ್ರತಿ ತಾಲೂಕಿನಲ್ಲಿಯೂ ಇದ್ದರೆ ರಾಜ್ಯದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಯಾರೂ ಹೋರಾಟ ಮಾಡಬೇಕಿಲ್ಲ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಬೈರೇಗೌಡ ತಾಂತ್ರಿಕ ಕಾಲೇಜಿನ ಸ್ಥಾಪಕ ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ನಡೆದ ೧೧೫ನೇ ತಿಂಗಳ ಕನ್ನಡ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮಾಡಬೇಕೆಂಬ ಛಲವಿದ್ದರೆ ಗುರಿಮುಟ್ಟಲು ಸಾಧ್ಯ ಎಂದರು.
ರಾಜ್ಯದಲ್ಲಿಯೇ ಮಾದರಿ ಸಂಘಇಲ್ಲಿನ ಕನ್ನಡ ಸಂಘ ಅನ್ಯ ಭಾಷಿಕರ ಮಿಶ್ರಿತವಾಗಿರುವ ಪಟ್ಟಣದಲ್ಲಿ ಪ್ರತಿ ತಿಂಗಳು ೧ರಂದು ನಿರಂತರವಾಗಿ ಕನ್ನಡ ಭಾಷೆಯನ್ನು ಬೆಳೆಸಿ ಅನ್ಯ ಭಾಷಿಗರಿಗೆ ಕನ್ನಡ ವ್ಯಾಮೋಹ ಮೂಡಿಸಲು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಮಾದರಿ ಸಂಘವಾಗಿ ಹೊರ ಹೊಮ್ಮಿದೆ ಎಂದರು.
ಪ್ರತಿಭಾ ಪ್ರದರ್ಶನಕ್ಕೆ ಅವಕಾಶಕನ್ನಡ ಸಂಘದ ಅಧ್ಯಕ್ಷ ಡಾ.ಪಲ್ಲವಿಮಣಿ ಮಾತನಾಡಿ, ಸಮಾಜದಲ್ಲಿ ಅನೇಕರು ಪ್ರತಿಭೆ ಇದ್ದರೂ ಅದನ್ನು ಹೊರ ಜಗತ್ತಿಗೆ ಪ್ರದರ್ಶಿಸಲು ಅವಾಶಕಗಳಿಲ್ಲದೆ ಮೂಲೆ ಗುಂಪಾಗಿರುತ್ತಾರೆ. ಅಂತ ಪ್ರತಿಭೆಗಳಿಗೆ ಕನ್ನಡ ಸಂಘ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ, ಇದರೊಟ್ಟಿಗೆ ಭಾಷೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿ ಎಲ್ಲಾ ಭಾಷಿಗರು ಸಹ ಬಾಳ್ವೆ ಮಾಡುವಂತೆ ಮಾಡುವುದೇ ಕನ್ನಡ ಸಂಘದ ಕಾಯಕವಾಗಿದೆ ಎಂದರು.
ಇದೇ ವೇಳೆ ಕನ್ನಡ ಭಾಷೆಯಲ್ಲಿ ಎಂಬಿಎ ಪಾಸಾದ ರಾಜೀವಾಕ್ಷ ಸರಳಾಯರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಹೇಮಂತ್ ಕುಮಾರ್, ವೈ.ವಿ.ರಮೇಶ್, ಮುರಳಿ, ಪ್ರಸಾದ್, ಪರಮೇಶ್, ಮಂಜುನಾಥ್ ಇದ್ದರು.