9 ವರ್ಷದಿಂದ ಬಂಜಾರ ಟ್ರೈಬಲ್‌ ಪಾರ್ಕ್‌ ನೆನೆಗುದಿಗೆ

| Published : Jul 19 2024, 12:49 AM IST

9 ವರ್ಷದಿಂದ ಬಂಜಾರ ಟ್ರೈಬಲ್‌ ಪಾರ್ಕ್‌ ನೆನೆಗುದಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಮನಾಬಾದ್‌ನ ಬೋರಂಪಳ್ಳಿ ಗ್ರಾಮದ ಹೊರವಲಯದಲ್ಲಿ ರು.ನೂರ ಆರು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಅಪೂರ್ಣ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಟ್ರೈಬಲ್ ಪಾರ್ಕ್‌ ಸ್ಥಳದಲ್ಲಿ ಎರಡು ಬದಿಯ ಒಳ ಪ್ರವೇಶ ದ್ವಾರ, ಕಟ್ಟಡದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಕಟ್ಟದ ಹಾಗೂ ಮಹಾದ್ವಾರದ ಪ್ರವೇಶ ದ್ವಾರದ ಬಳಿ ಗಿಡಗಂಟಿಗಳು ಬೆಳೆದು ನಿಂತಿವೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕಲ್ಯಾಣ ಕರ್ನಾಟಕ ಭಾಗದ ಬಂಜಾರಾ ಸಮಾಜ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು 34 ಎಕರೆ 06 ಗುಂಟೆ ಜಮೀನಿನಲ್ಲಿ ಸುಮಾರು 177.23 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎರಡು ಬಂಜಾರಾ ಟ್ರೈಬಲ್ ಪಾರ್ಕ ಸ್ಥಾಪಿಸಲು ಬಂಜಾರ ಆರ್ಥಿಕ ಮತ್ತು ಸಂಸ್ಕೃತಿಕ ಉತ್ತೇಜನ ವನ (ಟ್ರೈಬಲ್ ಪಾರ್ಕ್‌) ಕಟ್ಟಡಗಳ ಭೂಮಿ ಪೂಜೆ ಕಾರ್ಯಕ್ರಮ ನೇರವೆರಿಸಿ 9 ವರ್ಷಗಳು ಗತಿಸಿದರು ಇಲ್ಲಿವರೆಗೆ ಅಪೂರ್ಣವಾಗಿ ಉಳಿದಿದೆ.

ರಾಜ್ಯ ಸರ್ಕಾರ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಹುಮನಾಬಾದ್‌ ತಾಲೂಕಿನ ಬೋರಂಪಳ್ಳಿ ಗ್ರಾಮದ ಹೊರವಲಯದಲ್ಲಿ 2016ನೇ ಆ.17ರಂದು ಅಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಧ್ಯಕ್ಷರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ನೆರವೇರಿಸಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಂಬಾಣಿ ಪರಂಪರಿಕ ಕಸೂತಿ ಕಲೆ, ಹೊಲಿಗೆ ಕೌಶಲ್ಯ, ಬಂಜಾರಾ ವಾಜಾ, ಸಾಹಿತ್ಯ, ಕಲೆ, ಕಟ್ಟಡ ನಿರ್ಮಾಣ, ತೋಟಗಾರಿಕೆ ಭಾಷೆ ಮತ್ತು ಮೌಖಿಕ ಸಾಹಿತ್ಯ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ನಶಿಸುತ್ತಿದ್ದು, ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಉಳಿಸಿ ಬೆಳೆಸುವ ಸಲುವಾಗಿ ಹಾಗೂ ಬಂಜಾರ ಸಮಾಜದ ಸಂಪ್ರದಾಯ ಉಡುಪು ತಯಾರಿಸುವ ಹಾಗೂ ಅವುಗಳನ್ನು ರಪ್ತು ಮಾಡುವ ನಿಟ್ಟಿನಲ್ಲಿ ಘಟಕ ಅಭಿವೃದ್ಧಿಪಡಿಸಲು ಅಂತಾರಾಷ್ಟ್ರೀಯ ಮಟ್ಟದ ಎರಡು ಬಂಜಾರಾ ಟ್ರೈಬಲ್ ಪಾರ್ಕ್‌ ಸ್ಥಾಪಿಸಲಾಗಿದೆ. ಇದೀಗ 9 ವರ್ಷ ಗತಿಸಿದರು ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಳ್ಳದೆ ಕೇವಲ ಕಚೇರಿ ಉಪಯೋಗ ಕಟ್ಟಡ ಮಾತ್ರ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇದರಿಂದ ಬಂಜಾರಾ ಸಮಾಜ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಟ್ರೈಬಲ್ ಪಾರ್ಕ್‌ ಸ್ಥಳದಲ್ಲಿ ಎರಡು ಬದಿಯ ಒಳ ಪ್ರವೇಶ ದ್ವಾರ, ಕಟ್ಟಡದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಕಟ್ಟದ ಹಾಗೂ ಮಹಾದ್ವಾರದ ಪ್ರವೇಶ ದ್ವಾರದ ಬಳಿ ಗಿಡಗಂಟಿಗಳು ಬೆಳೆದು ನಿಂತಿವೆ.ಅನುದಾನ ಬಿಡುಗಡೆ ಮಾಡಿದರೆ 10 ತಿಂಗಲ್ಲಿ ಪೂರ್ಣ: ಆಕಾಶರೆಡ್ಡಿ

ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ 2016ರಲ್ಲಿ ಕರ್ನಾಟಕ ಭೂಸೇನಾ ನಿಗಮ ನಿಯಮಿತ ಹೆಸರಿನಲ್ಲಿ ಅಂಧಿನ ಅಧಿಕಾರಿ 177.23 ಕೋಟಿ ವೆಚ್ಚದಲ್ಲಿ ಯಾವುದೇ ಜಿಎಸ್‌ಟಿ ಅಳವಡಿಸದೇ ಹಾಗೂ ಕಾಂಪೌಂಡ್ ಗೋಡೆಯ ಸೇರಿದಂತೆ ಅನೇಕ ಕಟ್ಟಡ ಕಾಮಗಾರಿಯ ಖರ್ಚು ಕೈಬಿಟ್ಟಿದ ಕಾರಣ ಕೇವಲ ಅರ್ಧಮಟ್ಟದ ಕಟ್ಟಡ ಕಾಮಗಾರಿ ಮಡಲಾಗಿತ್ತು. ಎಂದು ಹುಮನಾಬಾದ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆಕಾಶರೆಡ್ಡಿ ಹೇಳಿದರು.

ಇದೀಗ ಪುನಃ ಕಾಮಗಾರಿಗೆ ಇನ್ನೂ 318.77 ಕೋಟಿ ಅನುದಾನ ಅವಶ್ಯವಿದೆ. ಸದ್ಯ 1.60 ಕೋಟಿ ಅಂದಾಜು ವೆಚ್ಚದಲ್ಲಿ ಕಚೇರಿ ಉಪಯೋಗಕ್ಕೆ ಜಿ+2, 10, 10, 10 ಕೋಣೆಗಳು ಹಾಗೂ ಮೂಲ ಸೌಕರ್ಯಗಳು ಈಗಾಗಲೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 496 ಕೋಟಿ ಖರ್ಚು ಇದೀಗ ಬರುತ್ತಿದೆ.

ಇನ್ನೂ ಉಳಿದ ಬಾಕಿ ಅನುದಾನ 318.77 ಕೋಟಿ ಕುರಿತು ಕರ್ನಾಟಕ ತಾಂಡಾ ಅಭಿವೃದ್ಧಿ ನಿರ್ದೇಶಕ ಇವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡಿದಲ್ಲಿ 10 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲು ಸಾಧ್ಯ ಎಂದು ತಿಳಿಸಿದರು.