ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರ್ಥಿಕ ವಲಯದಲ್ಲಿ ನಂಬಿಕೆಗೆ ಮತ್ತೊಂದು ಹೆಸರೇ ಬ್ಯಾಂಕ್ ಆಫ್ ಬರೋಡ ಎಂದು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ರೀಜನಲ್ ಮ್ಯಾನೇಜರ್ ಸುಹಾಸ ತಿಳಿಸಿದರು.ಇತ್ತೀಚೆಗೆ ನಗರದಲ್ಲಿ ಬ್ಯಾಂಕ್ ಆಫ್ ಬರೋಡದ 119ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಕೇವಲ ಯಶಸ್ಸಿನ ಮೈಲಿಗಲ್ಲಲ್ಲದೆ ನಂಬಿಕೆ, ಸಮಗ್ರತೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಪರಂಪರೆಯ ಆಚರಣೆಯಾಗಿದೆ ಎಂದರು.
ಸರ್ ಸಯಾಜಿ ರಾವ್ ಗಾಯಕ್ವಾಡ್ ಜನರನ್ನು ಸಬಲೀಕರಣಗೊಳಿಸುವ ಮತ್ತು ವಾಣಿಜ್ಯವನ್ನು ಬೆಂಬಲಿಸುವ ದೃಷ್ಟಿಯಿಂದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಬ್ಯಾಂಕನ್ನು ಸ್ಥಾಪಿಸಿದರು. ಒಂದು ಸಾಧಾರಣ ಸಂಸ್ಥೆಯಾಗಿ ಪ್ರಾರಂಭಗೊಂಡು ಇಂದು ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿದೆ, ವ್ಯವಹಾರದ ಮೈಲಿಗಲ್ಲು ಯಶಸ್ವಿಯಾಗಿ ತಲುಪಿದೆ ಎಂದು ಹೇಳಿದರು.ಸಾರ್ವಜನಿಕ ವಲಯದಲ್ಲಿ ಬ್ಯಾಂಕ್ ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಜಾಗತಿಕ ಕಾಲಕ್ಕೆ ತಕ್ಕಂತೆ ನಿರಂತರವಾಗಿ ವಿಕಸನಗೊಂಡಿದ್ದು ಪಾರದರ್ಶಕತೆ, ಯುಪಿಐ, ಎಐ ಆಧಾರಿತ ಸೇವೆಗಳು ಮತ್ತು ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುವ ಮೂಲಕ ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಹಸಿರು ಬ್ಯಾಂಕಿಂಗ್ ಅನ್ನು ಹೆಚ್ಚು ಪ್ರೋತ್ಸಾಹಿಸುತ್ತಿದೆ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಬೆಂಬಲಿಸುತ್ತಿದೆ ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಸಕ್ರಿಯವಾಗಿ ಶಿವಮೊಗ್ಗ ಪ್ರಾದೇಶಿಕ ಕಚೇರಿಗೆ ಮಂಗಳೂರು ವಲಯದಲ್ಲಿ ಅತ್ಯುತ್ತಮವಾಗಿ ಕೊಡುಗೆಯನ್ನು ನೀಡಿದು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ವಹಿವಾಟು 10000,ಕೋಟಿ ಹೊಂದಿದ್ದು ಗ್ರಾಹಕರಿಗೆ ಬೆನ್ನೆಲುಬಾಗಿ ನಿಂತಿದೆ ಬ್ಯಾಂಕ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಬ್ಯಾಂಕ್ ಆಫ್ ಬರೋಡದ ಪ್ರತಿಯೊಬ್ಬ ಸದಸ್ಯರ ಪಾತ್ರ ಹಾಗೂ ನಿವೃತ್ತ ಉದ್ಯೋಗಗಳ ಪಾತ್ರ ಮಹತ್ವವಾಗಿದೆ, ಶಿಸ್ತಿನ ಆಡಳಿತ ಗ್ರಾಹಕರ ನಂಬಿಕೆ ನಿರಂತರವಾಗಿ ಇರುವ ಕಾರಣ ಬ್ಯಾಂಕ್ ಆಫ್ ಬರೋಡ ಬ್ಯಾಂಕಿಂಗ್ ವಲಯದಲ್ಲಿ ಸಾಧನೆಯನ್ನು ಮಾಡಿದೆ ಎಂದರು,
ಅರಣ್ಯೀಕರಣ ಅಭಿಯಾನ:
ನಂತರ ಮಾತನಾಡಿದ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಅಜಯ್ಯ ಅವರು ಒಂದು ದೇಶವು ಆರ್ಥಿಕವಾಗಿ ಮುಂದುವರಿಯಬೇಕೆಂದರೆ ಬ್ಯಾಂಕಿಂಗ್ ಸೆಕ್ಟರ್‌ನ ಪಾತ್ರ ಬಹಳ ಮುಖ್ಯ ಬ್ಯಾಂಕ್ ಆಫ್ ಬರೋಡ ತಾಯಿಯ ಹೆಸರಲ್ಲಿ ಒಂದು ವೃಕ್ಷ ಎಂಬ ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಅಭಿಯಾನಕ್ಕೆ ಬೆಂಬಲವಾಗಿ ಬ್ಯಾಂಕ್ ಆಫ್ ಬರೋಡ ವತಿಯಿಂದ Bob forest ಅರಣ್ಯೀಕರಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ತುಂಗಾ ಮೇಲ್ದಂಡೆ ಯೋಜನೆಯ ಒಂದು ಭಾಗದಲ್ಲಿ ಸುಮಾರು ಒಂದು ಹೆಕ್ಟರ್ ಪ್ರದೇಶದಲ್ಲಿ ಅರಣ್ಯೀಕರಣ ಗೊಳಿಸಿ ಸ್ಥಳೀಯ ಜಾತಿಯ ಸಸಿಗಳನ್ನು ನೆಡುವ ಮೂಲಕ ಹಸಿರು ಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಭೂಮಿಯನ್ನು ಇನ್ನಷ್ಟು ಸುಂದರಗೊಳಿಸುತ್ತಿದೆ ಅರಣ್ಯ ಬೆಳೆಸಲು ಸಹಜವಾಗಿ ನಮ್ಮ ಇಲಾಖೆ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು ಈಗ ಬ್ಯಾಂಕ್ ಆಫ್ ಬರೋಡ ಆ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಆರ್ಥಿಕವಾಗಿ ವ್ಯವಹಾರ ನಡೆಸುವ ಬ್ಯಾಂಕಿಂಗ್ ಸೆಕ್ಟರ್ ಪರಿಸರ ಸುಸ್ಥಿರತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿ ಸುತ್ತ ತಮ್ಮ ಉದ್ಯೋಗಿಗಳಿಗೂ ಸಹ ಕನಿಷ್ಠ ಒಂದು ಗಿಡ ನೆಟ್ಟು ತಾಂತ್ರಿಕ ನೆರವಿನೊಂದಿಗೆ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದೆ ವಿಕಸಿತ ಭಾರತಕ್ಕೆ 2047 ಬ್ಯಾಂಕ್ ಆಫ್ ಬರೋಡ ತನ್ನದೇ ಆದಂತಹ ರೀತಿಯಲ್ಲಿ ಸಹಕರಿಸಲಿದೆ ಎಂದರು.ಎಎಸ್ಪಿ ಕಾರ್ಯಪ್ಪ ಅವರು ಸೈಬರ್ ಕ್ರೈಂ ನ ಬಗ್ಗೆ ಮಾಹಿತಿ ನೀಡಿ ಗ್ರಾಹಕರಿಗೆ ಮತ್ತು ಅಧಿಕಾರಿಗಳಿಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ಎನ್. ದೀಪಕ್, ಶಹಕರ್, ಪ್ರಾದೇಶಿಕ ಕಛೇರಿ ವ್ಯಾಪ್ತಿಯ. ವ್ಯವಸ್ಥಾಪಕರು, ಬ್ಯಾಂಕ್‌ನಿವೃತ್ತ ಅಧಿಕಾರಿಗಳು ಬ್ಯಾಂಕ್ ಸಂಘಟನೆಯ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.
-------------------ಪೊಟೋ: 22ಎಸ್‌ಎಂಜಿಕೆಪಿ07
ಶಿವಮೊಗ್ಗದ ಪ್ರಾದೇಶಿಕ ಕಚೇರಿಯಲ್ಲಿ ಬ್ಯಾಂಕ್ ಆಫ್ ಬರೋಡ ದ 119ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.