ಎಐಒಬಿಇಯು ಸಂಘಟನೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದ್ದು ಅದರ ಭಾಗವಾಗಿ ನೌಕರರ ಸಂಘದ ಎಜಿಎಸ್‌ ವಿನೋದ್ ಕುಮಾರ್ ಮತ್ತು ಆರ್‌ಸಿಎಂ ಜನಾರ್ದನ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿ ಬಳಿ ಪ್ರತಿಭಟನೆ

ಮಂಗಳೂರು: ಎಐಒಬಿಇಯು ಸಂಘಟನೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದ್ದು ಅದರ ಭಾಗವಾಗಿ ನೌಕರರ ಸಂಘದ ಎಜಿಎಸ್‌ ವಿನೋದ್ ಕುಮಾರ್ ಮತ್ತು ಆರ್‌ಸಿಎಂ ಜನಾರ್ದನ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಸಂಘಟನೆ ದೇಶಾದ್ಯಂತ ಫೆಬ್ರವರಿ 2 ಮತ್ತು 3ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದು ಅದಕ್ಕೆ ಆಡಳಿತ ವಲಯದಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಸಂಘಟನೆಯು ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಕ್ಲರ್ಕ್ ಜಾಗಗಳನ್ನು ತುರ್ತಾಗಿ ಭರ್ತಿ ಮಾಡುವುದು, ಅನುಕಂಪ ಆಧಾರಿತ ನೂರಕ್ಕೂ ಹೆಚ್ಚು ವರ್ಗಾವಣೆಗಳನ್ನು ಕೂಡಲೇ ಮಾಡುವ ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರತಿ ವರ್ಷ 385ಕ್ಕೂ ಹೆಚ್ಚು ಮಂದಿ ಕ್ಲರ್ಕ್‌ಗಳು ಬಡ್ತಿಯಾಗುತ್ತಿದ್ದು ಸಂಸ್ಥೆ ಕೇವಲ 300 ಜನರನ್ನು ಮಾತ್ರ ಭರ್ತಿ ಮಾಡುವುದಾಗಿ ಹೇಳುತ್ತಿದೆ. ಇದಲ್ಲದೇ ನಿವೃತ್ತಿ ಆಗುವವರ ಲೆಕ್ಕವನ್ನೂ ಹಿಡಿದರೆ ಕ್ಲರ್ಕ್ ಸಂಖ್ಯೆಯಲ್ಲಿ ತೀವ್ರವಾದ ಕೊರತೆ ಕಂಡುಬರುತ್ತದೆ.

ಸಂಸ್ಥೆಯ ಎಲ್ಲ ದರ್ಜೆಯ ಕೆಲಸಗಾರರೂ ಒಟ್ಟಾಗಿ ದುಡಿದು ಸಂಸ್ಥೆಯನ್ನು ಕಟ್ಟುವ ಸಂಪ್ರದಾಯದಿಂದ ಆಡಳಿತಾಧಿಕಾರಿಗಳು ಇದನ್ನು ವೈಯಕ್ತಿಕ ಮಟ್ಟದ ಮೌಲ್ಯಮಾಪನಕ್ಕೆ ಇಳಿದಿರುವ ಖೇದಕರ ಸಂಗತಿ. ಗ್ರಾಹಕರ ಕೈಗೆ ಕ್ಯೂಆರ್‌ ಕೋಡ್‌ ನೀಡಿ ಕ್ಲರ್ಕ್‌ಗಳ ಶ್ರಮವನ್ನು ತೂಗುವಂತೆ ಮಾಡುತ್ತಿರುವುದು ದುಃಖಕರ ಸಂಗತಿ. ಭದ್ರತಾ ವಿಚಾರವಾಗಿಯೂ ಸಂಸ್ಥೆಯ ತೀವ್ರ ನಿರ್ಲಕ್ಷದಿಂದ ವರ್ತಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸಂಘಟನೆ ದೇಶಾದ್ಯಂತ ಫೆಬ್ರವರಿ 2 ಮತ್ತು 3ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದು ಅದಕ್ಕೆ ಆಡಳಿತ ವಲಯದಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಸಂಘಟನೆಯು ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಕ್ಲರ್ಕ್ ಜಾಗಗಳನ್ನು ತುರ್ತಾಗಿ ಭರ್ತಿ ಮಾಡುವುದು, ಅನುಕಂಪ ಆಧಾರಿತ ನೂರಕ್ಕೂ ಹೆಚ್ಚು ವರ್ಗಾವಣೆಗಳನ್ನು ಕೂಡಲೇ ಮಾಡುವ ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರತಿ ವರ್ಷ 385ಕ್ಕೂ ಹೆಚ್ಚು ಮಂದಿ ಕ್ಲರ್ಕ್‌ಗಳು ಬಡ್ತಿಯಾಗುತ್ತಿದ್ದು ಸಂಸ್ಥೆ ಕೇವಲ 300 ಜನರನ್ನು ಮಾತ್ರ ಭರ್ತಿ ಮಾಡುವುದಾಗಿ ಹೇಳುತ್ತಿದೆ. ಇದಲ್ಲದೇ ನಿವೃತ್ತಿ ಆಗುವವರ ಲೆಕ್ಕವನ್ನೂ ಹಿಡಿದರೆ ಕ್ಲರ್ಕ್ ಸಂಖ್ಯೆಯಲ್ಲಿ ತೀವ್ರವಾದ ಕೊರತೆ ಕಂಡುಬರುತ್ತದೆ.

ಸಂಸ್ಥೆಯ ಎಲ್ಲ ದರ್ಜೆಯ ಕೆಲಸಗಾರರೂ ಒಟ್ಟಾಗಿ ದುಡಿದು ಸಂಸ್ಥೆಯನ್ನು ಕಟ್ಟುವ ಸಂಪ್ರದಾಯದಿಂದ ಆಡಳಿತಾಧಿಕಾರಿಗಳು ಇದನ್ನು ವೈಯಕ್ತಿಕ ಮಟ್ಟದ ಮೌಲ್ಯಮಾಪನಕ್ಕೆ ಇಳಿದಿರುವ ಖೇದಕರ ಸಂಗತಿ. ಗ್ರಾಹಕರ ಕೈಗೆ ಕ್ಯೂಆರ್‌ ಕೋಡ್‌ ನೀಡಿ ಕ್ಲರ್ಕ್‌ಗಳ ಶ್ರಮವನ್ನು ತೂಗುವಂತೆ ಮಾಡುತ್ತಿರುವುದು ದುಃಖಕರ ಸಂಗತಿ. ಭದ್ರತಾ ವಿಚಾರವಾಗಿಯೂ ಸಂಸ್ಥೆಯ ತೀವ್ರ ನಿರ್ಲಕ್ಷದಿಂದ ವರ್ತಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.