ಬ್ಯಾಂಕ್‌ಗಳು ಆರ್ಥಿಕ ಚೈತನ್ಯ ನೀಡುವ ಸಂಜೀವಿನಿ

| Published : Oct 31 2025, 03:30 AM IST

ಬ್ಯಾಂಕ್‌ಗಳು ಆರ್ಥಿಕ ಚೈತನ್ಯ ನೀಡುವ ಸಂಜೀವಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯವರ್ಗದ ಜನರಿಗೆ ಬ್ಯಾಂಕ್‌ಗಳು ಆರ್ಥಿಕ ಚೈತನ್ಯ ನೀಡುವ ಸಂಜೀವಿನಿಯಾಗಿವೆ ಎಂದು ಬೆಳಗಾವಿ ಕ್ರೆಡಾಯಿಯ ಅಧ್ಯಕ್ಷರಾದ ಯುವರಾಜ ಹುಲಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಧ್ಯವರ್ಗದ ಜನರಿಗೆ ಬ್ಯಾಂಕ್‌ಗಳು ಆರ್ಥಿಕ ಚೈತನ್ಯ ನೀಡುವ ಸಂಜೀವಿನಿಯಾಗಿವೆ ಎಂದು ಬೆಳಗಾವಿ ಕ್ರೆಡಾಯಿಯ ಅಧ್ಯಕ್ಷರಾದ ಯುವರಾಜ ಹುಲಜಿ ಹೇಳಿದರು.

ನಗರದ ಮಾರುತಿ ಗಲ್ಲಿಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‌ ಆಫ್‌ ಮಹಾರಾಷ್ಟ್ರವು ಗೃಹಸಾಲದ ರೂಪದಲ್ಲಿ ನೀಡುವ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನೀಡುತ್ತಿರುವುದು ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ. ಸ್ವಂತ ಮನೆ ಕನಸು ಕಾಣುವ ಗ್ರಾಹಕರ ಕನಸನ್ನು ನನಸು ಮಾಡುವಲ್ಲಿ ಬ್ಯಾಂಕ್‌ನ ಪಾತ್ರ ಶ್ಲಾಘನೀಯ ಎಂದು ಬ್ಯಾಂಕ್‌ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬೆಳಗಾವಿ ಚೇಂಬರ್‌ ವಾಣಿಜ್ಯ ಮತ್ತು ಕೈಗಾರಿಕೆಗಳ ಮಾಜಿ ಅಧ್ಯಕ್ಷ ರೋಹನ್‌ ಜುವಲಿ, ಬೆಳಗಾವಿಯ ಸಿಎ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಸಿಎ ರಾಹುಲ್‌ ಅಡಕೆ, ಶಾಖಾ ವ್ಯವಸ್ಥಾಪಕ ಆವಿಷಾ ಪ್ರಿಯಾ, ಹುಬ್ಬಳ್ಳಿ ವಲಯ ವ್ಯವಸ್ಥಾಪಕ ಸುಚೇತ್‌ ಡಿಸೋಜ ಸೇರಿದಂತೆ ಗಣ್ಯರು ಇದ್ದರು.ಬ್ಯಾಂಕ್‌ಗಳು ನೀಡುವ ಸಾಲವನ್ನು ತೆಗೆದುಕೊಳ್ಳುವುದಲ್ಲದೇ ಸಕಾಲಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್‌ ಅಭಿವೃದ್ಧಿ ಜೊತೆಗೆ ಇತರ ಗ್ರಾಹಕರಿಗೂ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕಾಗಿದೆ. ಅದಕ್ಕೆ ಎಲ್ಲ ಗ್ರಾಹಕರು ಸಹಕರಿಸಿ ಬ್ಯಾಂಕ್‌ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ.

-ಯುವರಾಜ ಹುಲಜಿ, ಬೆಳಗಾವಿ ಕ್ರೆಡಾಯಿಯ ಅಧ್ಯಕ್ಷರು.