ಕಾವೇರಿ ತೀರ್ಥೋದ್ಭವಕ್ಕೆ ಶುಭಕೋರುವ ಬ್ಯಾನರ್‌ಗೆ ಹಾನಿ: ಖಂಡನೆ

| Published : Oct 17 2025, 01:03 AM IST

ಕಾವೇರಿ ತೀರ್ಥೋದ್ಭವಕ್ಕೆ ಶುಭಕೋರುವ ಬ್ಯಾನರ್‌ಗೆ ಹಾನಿ: ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಕುಶಾಲನಗರದಿಂದ ತಲಕಾವೇರಿ ತನಕ ಸುಮಾರು 80 ಕಡೆಗಳಲ್ಲಿ ಫಲಕಗಳನ್ನು ಹಾಕಲಾಗಿತ್ತು. ಕಾರುಗುಂದ ಮತ್ತು ಬಕ್ಕ ಸೇರಿದಂತೆ ಕೆಲವು ಕಡೆ ಈ ಫಲಕಗಳನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸ್ವಾಗತ ಮತ್ತು ಶುಭಕೋರುವ ಬ್ಯಾನರ್‌ಗಳನ್ನು ಬುಧವಾರ ರಾತ್ರಿ ದುಷ್ಕರ್ಮಿಗಳು ಹರಿದು ಹಾಕಿದ ಘಟನೆ ನಡೆದಿದೆ.

ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಕುಶಾಲನಗರದಿಂದ ತಲಕಾವೇರಿ ತನಕ ಸುಮಾರು 80 ಕಡೆಗಳಲ್ಲಿ ಫಲಕಗಳನ್ನು ಹಾಕಲಾಗಿತ್ತು. ಕಾರುಗುಂದ ಮತ್ತು ಬಕ್ಕ ಸೇರಿದಂತೆ ಕೆಲವು ಕಡೆ ಈ ಫಲಕಗಳನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆಈ ಕೃತ್ಯವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಪ್ರಮುಖರು ಖಂಡಿಸಿದ್ದು, ದುಷ್ಕರ್ಮಿಗಳ ಮೇಲೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.ಚೇರಂಭಾಣೆ ಗೌಡ ಸಮಾಜ ಖಂಡನೆ:ಕಾವೇರಿ ತುಲಾ ಸಂಕ್ರಮಣಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಶುಭ ಕೋರಿದ್ದ ಬ್ಯಾನರ್ ಹರಿದುದನ್ನು ಚೇರಂಭಾಣೆ ಗೌಡ ಸಮಾಜ ಕಾರಗುಂದ ಖಂಡಿಸಿದೆ.

ಇಂಥ ನೀಚ ಕೆಲಸ ಮಾಡಿರುವವವರ ವಿರುದ್ಧ ಕಾನೂನು ಕ್ರಮ ಕೈಗೋಳ್ಳುವಂತೆ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಆಗ್ರಹಿಸಿದೆ.ನಾಪಂಡ ರಾಲಿ ಮಾದಯ್ಯ ಖಂಡನೆ:ತೀರ್ಥೋದ್ಭವದ ಸ್ವಾಗತ ಬ್ಯಾನರ್‌ ಹರಿದ ಪ್ರಕರಣವನ್ನು ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬೆಟಗೇರಿ ಗ್ರಾಮ ಪಂಚಾಯತಿ ಸದಸ್ಯ ನಾಪಂಡ ರಾಲಿ ಮಾದಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಇದು ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನವಾಗಿದ್ದು, ಜಿಲ್ಲೆಯಲ್ಲಿ ಶಾಂತಿಯುತವಾಗಿ ಸಹೋದರತೆಯಿಂದ ಬದುಕುವ ಜನರಲ್ಲಿ ದ್ವೇಷವನ್ನು ಬಿತ್ತುವ ಕೆಲಸವಾಗಿದೆ. ಈ ಕೃತ್ಯವನ್ನು ಎಸಗಿರುವ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದಾರೆ.