ಮಕ್ಕಳೊಂದಿಗೆ ಬಾಣಂತಿಯರು, ಗರ್ಭಿಣಿಯರು, ಪೋಷಕರ ಪ್ರತಿಭಟನೆ

| Published : Feb 08 2024, 01:31 AM IST

ಮಕ್ಕಳೊಂದಿಗೆ ಬಾಣಂತಿಯರು, ಗರ್ಭಿಣಿಯರು, ಪೋಷಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಮಕ್ಕಳಿಗೆ ನವೆಂಬರ್ ತಿಂಗಳಿಂದಲೂ ಮೊಟ್ಟೆ ಕೊಟ್ಟಿಲ್ಲ. ಅಡುಗೆಗೆ ಬಳಕೆ ಮಾಡುವ ತರಕಾರಿಗಳು ಕೊಳೆತ ಸ್ಥಿತಿಯಲ್ಲಿವೆ. ಅಶುದ್ಧ ತರಕಾರಿ ತಂದು ಮಕ್ಕಳಿಗೆ ಅಡುಗೆ ಮಾಡುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದ ಕಾರಣ ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಯಾವುದೇ ಸೌಕರ್ಯಗಳು ಇಲ್ಲ. ಕಾರ್‍ಯಕರ್ತೆಯ ಮೋಕ್ಷ ಅವರ ನಡಳಿಕೆಯ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಈವರೆಗೂ ಯಾವುದೆ ಕ್ರಮಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರಆಹಾರ ಹಾಗೂ ಫುಡ್ ಕಿಟ್‌ಗಳನ್ನು ಮಕ್ಕಳು, ಗರ್ಭಿಣಿಯರು, ಬಾಣಂತಿಯರಿ ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಕೃಷ್ಣಾನಗರದಲ್ಲಿ ಇರುವ ಅಂಗನವಾಡಿ ಕೇಂದ್ರದ ಎಂದು ಬಾಣಂತಿಯರು, ಪೋಷಕರು ಬುಧವಾರ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕೇಂದ್ರದ ಎದುರು ಆಗಮಿಸಿ ಮಕ್ಕಳಿಗೆ ಯಾವುದೇ ಮೂಲ ಸೌಕರ್ಯಗಳ ವ್ಯವಸ್ಥೆ ಇಲ್ಲ. ಮಕ್ಕಳು ಬಳಕೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ಕಸು ತುಂಬಿ ಕಲುಷಿತಗೊಂಡಿದೆ. ಆದರೆ, ಕಾರ್‍ಯಕರ್ತೆ, ಸಹಾಯಕಿ ಸ್ವಚ್ಛಗೊಳಿಸಿಲ್ಲ ಎಂದು ಅಂಗನವಾಡಿ ಕೇಂದ್ರ ಕಾರ್‍ಯಕರ್ತೆ ಮೋಕ್ಷ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿಗೆ ಕಾರ್‍ಯಕರ್ತೆ ಸರಿಯಾಗಿ ಬರುವುದಿಲ್ಲ. ಸರ್ಕಾರದಿಂದ ಬಾಣಂತಿಯರು, ಗರ್ಭಿಣಿಯರಿಗೆ ನೀಡುವ ಫುಡ್‌ನ್ನು ಸರಿಯಾಗಿ ನೀಡುವುದಿಲ್ಲ. ಫುಡ್‌ಗಾಗಿ ಗಂಟೆಗಟ್ಟಲೆ ಕಾದುಕೊಳಿತುಕೊಳ್ಳಬೇಕಿದೆ. ಈ ತಿಂಗಳ ಫುಡ್‌ ಕಿಟ್ ಪಡೆದುಕೊಳ್ಳದಿದ್ದರೆ ಮುಂದಿನ ತಿಂಗಳಿಗೂ ಕೊಡೋದಿಲ್ಲ ಎಂದು ದೂರಿದರು.

ಅಂಗನವಾಡಿ ಮಕ್ಕಳಿಗೆ ನವೆಂಬರ್ ತಿಂಗಳಿಂದಲೂ ಮೊಟ್ಟೆ ಕೊಟ್ಟಿಲ್ಲ. ಅಡುಗೆಗೆ ಬಳಕೆ ಮಾಡುವ ತರಕಾರಿಗಳು ಕೊಳೆತ ಸ್ಥಿತಿಯಲ್ಲಿವೆ. ಅಶುದ್ಧ ತರಕಾರಿಗಳನ್ನು ತಂದು ಮಕ್ಕಳಿಗೆ ಅಡುಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದ ಕಾರಣ ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಯಾವುದೇ ಸೌಕರ್ಯಗಳು ಇಲ್ಲ. ಕಾರ್‍ಯಕರ್ತೆಯ ಮೋಕ್ಷ ಅವರ ನಡಳಿಕೆಯ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಈವರೆಗೂ ಯಾವುದೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಕಾರ್‍ಯಕರ್ತೆಯ ಮೇಲೆ ಕ್ರಮ ಜರುಗಿಸಬೇಕು. ಇಲ್ಲಿನ ಕಾರ್‍ಯಕರ್ತೆಯನ್ನು ಬೇರೆಗೆ ವರ್ಗಾವಣೆ ಮಾಡಬೇಕು. ಇಲ್ಲವಾದರೆ ನಮ್ಮ ಮಕ್ಕಳನ್ನು ನಾವು ಅಂಗನವಾಡಿಗಳಿಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪೋಷಕರಾದ ಮಂಜುಳ, ರಾಣಿ, ಜಯಶ್ರೀ, ಅನಿತಾ, ಆರತಿ, ಸೌಮ್ಯ, ಆಶಾ ಸೇರಿದಂತೆ ಹಲವರು ಹಾಜರಿದ್ದರು.