ಮಂಗಳೂರು ಹೊರವಲಯದ ನೀರುಮಾರ್ಗ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರ ವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್‌ ಕುಮಾರ್‌

ಮಂಗಳೂರು: ಮಂಗಳೂರು ಹೊರವಲಯದ ನೀರುಮಾರ್ಗ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರ ವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.ಫೆ.2 ರಂದು ಬೆಳಗ್ಗೆ 8 ಗಂಟೆಗೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ. ಸಂಜೆ 7ರಿಂದ ಸ್ಥಳಿಯ ಪ್ರತಿಭೆಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ. ಫೆ.3ರಂದು ಬೆಳಗ್ಗೆ 8ರಿಂದ ಮಹಾಮೃತ್ಯುಂಜಯ ಯಾಗ, ಸಂಜೆ 5 ರಿಂದ ವೈದಿಕ ಕಾರ್ಯಕ್ರಮ, ಸಂಜೆ 7ರಿಂದ ಕಲ್ಲಡ್ಕ ವಿಠಲ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಮಾಣೂರು ಕ್ಷೇತ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಫೆ. 4ರಂದು ಬೆಳಗ್ಗೆ 8ರಿಂದ ನವಗ್ರಹ ಶಾಂತಿ ಹೋಮ ಬಳಿಕ ನೂತನ ನಾಗಾಲಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ನಾಗದರ್ಶನ. ಸಂಜೆ 5.30ರಿಂದ ಆಶ್ಲೇಷಾಬಲಿ, 5.35ರಿಂದ ನಂದಗೋಕುಲ ಕಲಾ ಕೇಂದ್ರ ಭಟ್ರಕೋಡಿ ನೀರುಮಾರ್ಗ ಇವರಿಂದ ನೃತ್ಯ ವೈಭವ. ಸಂಜೆ 7ರಿಂದ ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಶಿವಾಮೃತ ನಾಟ್ಯಾಲಯ ನೀರುಮಾರ್ಗ ಇವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ನಡೆಯಲಿದೆ ಎಂದರು.

ಸುಬ್ರಾಯ ದೇವರ ಪ್ರತಿಷ್ಠೆ:ಫೆ.5ರಂದು ಬೆಳಗ್ಗೆ 8.07 ಗಂಟೆಗೆ ಮಾಣೂರು ಸುಬ್ರಾಯ ದೇವರ ಪ್ರತಿಷ್ಠೆ, ಸಂಜೆ 5.30ರಿಂದ ವೈದಿಕ ಕಾರ್ಯಕ್ರಮ, ಸಂಜೆ 5.35ರಿಂದ ನೃತ್ಯ ಕಲಾ ಭಾರತಿ ಭಟ್ರಕೋಡಿ ಇವರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ. ಸಂಜೆ 7ರಿಂದ ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಉರ್ವ ಯಕ್ಷಾರಾಧನಾ ಕಲಾ ಕೇಂದ್ರದಿಂದ ಯಕ್ಷಗಾನ ಕುಮಾರ ವಿಜಯ ನಡೆಯಲಿದೆ ಎಂದರು.ಫೆ. 6ರಂದು ಬೆಳಗ್ಗೆ 8ರಿಂದ ಶ್ರೀ ಗಣಪತಿ ದೇವರು, ಪಾರ್ವತಿ ದೇವಿ ಪ್ರತಿಷ್ಠೆ, ಚಂಡಿಕಾಹೋಮ, ಸಂಜೆ 5.30ರಿಂದ ಬಲಿಶಿಲಾ ಪ್ರತಿಷ್ಠೆ, ಧ್ವಜಕಲಶಾಭಿಷೇಕ. 5.35ರಿಂದ ಹಳೆಯಂಗಡಿ ಕಲಾರಾಧನಾ ನೃತ್ಯ ಸಂಸ್ಥೆಯಿಂದ ನೃತ್ಯ ವೈಭವ. ಸಂಜೆ 7ರಿಂದ ಸಭಾ ಕಾರ್ಯಕ್ರಮ. ಬಳಿಕ ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯದ ನಾಟಕ ಪುದರ್‌ ದೀತಿಜಿ. ಫೆ.7ರಂದು ಬೆಳಗ್ಗೆ 8ರಿಂದ ಗಣಪತಿ, ಪಾರ್ವತಿ, ದೇವರ ಕಲಶಾಭಿಷೇಕ, ಮಧ್ಯಾಹ್ನ 2ರಿಂದ ಮಂಗಳೂರಿನ ಶ್ರೀನಿಕಾ ಕಲಾತಂಡದಿಂದ ಷಣ್ಮುಖ ವಿಜಯ ತಾಳಮದ್ದಳೆ, ಸಂಜೆ 5.30ರಿಂದ ಬ್ರಹ್ಮಕಲಶಾಧಿವಾಸ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ನೃತ್ಯ ಪ್ರದರ್ಶನ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯಗಾಥೆ. ಸಂಜೆ 7ರಿಂದ ಸಭಾ ಕಾರ್ಯಕ್ರಮ, ರಾತ್ರಿ 9ರಿಂದ ಪುತ್ತೂರು ಜಗದೀಶ್‌ ಆಚಾರ್ಯ ಬಳಗದಿಂದ ಭಕ್ತಿಗಾನ ಸಂಭ್ರಮ ನಡೆಯಲಿದೆ ಎಂದರು.ಫೆ. 9 ರಂದು ಮಾಣೂರು ರಥೋತ್ಸವ: ಫೆ.9ರಂದು ಮಧ್ಯಾಹ್ನ 12 ಗಂಟೆಗೆ ಮಾಣೂರು ರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಸಂಜೆ 5.30ರಿಂದ ಶ್ರೀ ದೇವರಿಗೆ ಹೂವಿನ ಪೂಜೆ, ದೊಡ್ಡ ರಂಗಪೂಜೆ, ಬಲಿ ಉತ್ಸವಾದಿಗಳು, ಗಜ ವಾಹನ ಸೇವೆ, ಪ್ರಥಮ ತೆಪ್ಪೋತ್ಸವ ಕೆರೆದೀಪೋತ್ಸವ, ಶಯನೋತ್ಸವ ನಡೆಯಲಿದೆ.ಫೆ.10ರಂದು ಬೆಳಗ್ಗೆ 9 ರಿಂದ ಕವಾಟೋದ್ಘಾಟನೆ, ಅನ್ನಸಂತರ್ಪಣೆ. ಸಂಜೆ 5.30ರಿಂದ ಹೂವಿನ ಪೂಜೆ, ಸರ್ಪ ವಾಹನ ಸೇವೆ, ರಾತ್ರಿ ರಥೋತ್ಸವ, ಅವಭೃತ ಸ್ನಾನ, ದೈವ ದೇವರ ಭೇಟಿ, ಧ್ವಜಾವರೋಹಣ, ಮಂತ್ರಾಕ್ಷತೆ, ಶ್ರೀ ಮೈಸಂದಾಯ, ರಕ್ತೇಶ್ವರಿ ನೇಮ. ಫೆ.11ರಂದು ಬೆಳಗ್ಗೆ ಸಂಪ್ರೋಕ್ಷಣೆ ಕಲಶ ನಡೆಯಲಿದೆ ಎಂದರು.ಫೆ. 1 ರಂದು ಹೊರೆಕಾಣಿಕೆ: ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್‌ ಮಾತನಾಡಿ, ಫೆ.1ರಂದು ಸಂಜೆ 3ರಿಂದ ಸೀಮೆಗೆ ಸಂಬಂಧಪಟ್ಟ7 ಗ್ರಾಮಗಳು ಹಾಗೂ ವಿವಿಧೆಡೆಯಿಂದ ಆಗಮಿಸಿದ ಹಸಿರು ಹೊರೆಕಾಣಿಕೆ ಮೆರವಣಿಗೆ ನೀರುಮಾರ್ಗ ಜಂಕ್ಷನ್‌ನಿಂದ ಮಾಣೂರು ಕ್ಷೇತ್ರಕ್ಕೆ ಹೊರಡಲಿದೆ. ಈ ಮೆರವಣಿಗೆಯಲ್ಲಿ ಕಲಾ ತಂಡಗಳು, ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಭಾಸ್ಕರ್‌ ಕೆ., ಆನಂದ್‌ ಸರಿಪಲ್ಲ, ಪ್ರಧಾನ ಅರ್ಚಕ ರಾಜೇಶ್‌ ಭಟ್‌, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್‌ ಕೋಟ್ಯಾನ್‌ ಪಡು, ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಎನ್‌ವಿಕೆ ಭಟ್ರಕೋಡಿ ಇದ್ದರು.ಫೆ. 8ರಂದು ಬ್ರಹ್ಮಕಲಶಾಭಿಷೇಕಶ್ರೀಕ್ಷೇತ್ರದ ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್‌ ಭಟ್‌ ಬೊಳ್ಮಾರಗುತ್ತು ಮಾತನಾಡಿ, ಫೆ.8ರಂದು ಬೆಳಗ್ಗೆ 9.35ಕ್ಕೆ ಶ್ರೀ ಸುಬ್ರಾಯ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ನಂತರ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ ನೂತನ ಧ್ವಜಾರೋಹಣ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಮಧ್ಯಾಹ್ನ 1ರಿಂದ ಸಂದೇಶ್‌ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿಗಾನಾಮೃತ, 3.30ರಿಂದ ನೃತ್ಯಕಲಾಭಾರತಿ ತಂಡ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ ಕೀರ್ತನಾಮೃತ, ಸಂಜೆ 5ರಿಂದ ಸಭಾ ಕಾರ್ಯಕ್ರಮ, 7ರಿಂದ ಹೂವಿನ ಪೂಜೆ, ಸಣ್ಣರಂಗ ಪೂಜೆ, ಪಲ್ಲಕ್ಕಿ ಸೇವೆ. ರಾತ್ರಿ 8 ರಿಂದ ವಿಧಾತ್ರಿ ಕಲಾವಿದೆರ್‌ ಕುಡ್ಲ ಅಭಿನಯದ ನಾಟಕ ಜೈ ಹನುಮಾನ್‌ ಪ್ರದರ್ಶನವಾಗಲಿದೆ ಎಂದರು.

ಬಾಲಾಲಯದಲ್ಲಿ ಶ್ರೀದೇವರ ಪ್ರತಿಷ್ಠೆಗೊಂಡ ಎರಡೇ ತಿಂಗಳಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆಯುತ್ತಿರುವುದು ಗಮನಾರ್ಹ. ಸುಮಾರು 2 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ. ಬ್ರಹ್ಮಕಲಶೋತ್ಸವದ ದಿನಗಳಂದು ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.

-ನಳಿನ್‌ ಕುಮಾರ್‌ ಕಟೀಲ್‌, ಕಾರ್ಯಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ