ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹದ ನಡುವೆ ಬ್ಯಾರಿ ಭಾಷೆ ಅಚ್ಚಳಿಯದೆ ಉಳಿದಿದೆ :ಖಾದರ್‌

| Published : Oct 04 2024, 01:07 AM IST

ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹದ ನಡುವೆ ಬ್ಯಾರಿ ಭಾಷೆ ಅಚ್ಚಳಿಯದೆ ಉಳಿದಿದೆ :ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಆಧುನಿಕ ತಂತ್ರಜ್ಞಾನ- ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹ ಇದ್ದರೂ ಇಂದು ಬ್ಯಾರಿ ಭಾಷೆ ಅಚ್ಚಳಿಯದೇ ಉಳಿದು ಬಂದಿದೆ. ಏಕೆಂದರೆ ಬ್ಯಾರಿ ಭಾಷೆ ಸಂಸ್ಕೃತಿ, ಪರಂಪರೆ ಅಂತಹ ಮಹತ್ವದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಬ್ಯಾರಿಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಧುನಿಕ ತಂತ್ರಜ್ಞಾನ- ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹ ಇದ್ದರೂ ಇಂದು ಬ್ಯಾರಿ ಭಾಷೆ ಅಚ್ಚಳಿಯದೇ ಉಳಿದು ಬಂದಿದೆ. ಏಕೆಂದರೆ ಬ್ಯಾರಿ ಭಾಷೆ ಸಂಸ್ಕೃತಿ, ಪರಂಪರೆ ಅಂತಹ ಮಹತ್ವದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಬ್ಯಾರಿಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬ್ಯಾರಿ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಬ್ಯಾರಿ ಭಾಷೆಅಂದರೆ ಬರೀ ಭಾಷೆ ಅಲ್ಲ, ಬ್ಯಾರಿ ಸಮುದಾಯದ ಸಂಸ್ಕೃತಿ, ವ್ಯಾಪಾರ, ಉದ್ಯೋಗ, ಆಚಾರ-ವಿಚಾರಎಲ್ಲವೂ ಸೇರಿ ಬ್ಯಾರಿ ಭಾಷೆಯಾಗಿದೆ. ಇದನ್ನು ಬರೀ ಬ್ಯಾರಿ ಭಾಷೆ ಒಕ್ಕೂಟದಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಇಡೀ ಸಮುದಾಯದ ಸಹಕಾರ ಅಗತ್ಯಎಂದು ಹೇಳಿದರು.

ಬ್ಯಾರಿ ಸಮುದಾಯದವರು ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರಿಗೆಇಲ್ಲಿರುವವರು ಬೆಂಬಲಿಸಿ ಪರಸ್ಪರ ಸಹಕಾರ ನೀಡಿದ ಪರಿಣಾಮ ಎಲ್ಲರಂತೆ ಬೆಳೆದಿದ್ದಾರೆ. ಯಾರೇ ಆಗಲಿ ತಮ್ಮ ಧರ್ಮದ ಜೊತೆಗೆ ಇತರ ಧರ್ಮ-ಸಂಸ್ಕೃತಿಯನ್ನು ಗೌರವಿಸಿದರೆ ಆ ಭಾಷೆಗೆ ಶಾಶ್ವತ ನೆಲೆಗಟ್ಟು ಸಿಗುತ್ತದೆ. ಬ್ಯಾರಿ ಭಾಷೆ ಬೆಳವಣಿಗೆಗೆ ಇನ್ನಷ್ಟು ಜಾಗೃತಿ ಅತ್ಯಗತ್ಯಎಂದು ಕರೆ ನೀಡಿದರು.ಒಂದು ಭಾಷೆ ಬೆಳೆಯ ಬೇಕಾದರೆ ಇನ್ನೊಂದು ಭಾಷೆಯನ್ನು ಗೌರವಿಸಬೇಕು. ಇತರ ಭಾಷೆ ಅರ್ಥ ಮಾಡಿಕೊಂಡು ಕಲಿಯಬೇಕು. ಇತರ ಭಾಷೆಗಳ ಬಗ್ಗೆ ತಿಳಿದಾಗ ಬ್ಯಾರಿ ಭಾಷೆ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ. ಈ ಸಮುದಾಯಕ್ಕೆ ಬ್ಯಾರಿ ಸಾಹಿತಿಗಳ ಕೊಡುಗೆ ಬಹಳಷ್ಟಿದೆ. ಅವರ ಸಾಹಿತ್ಯ, ಸಂಪತ್ತನ್ನು ಮುಂದಿನ ಪೀಳಿಗೆಗೆ ಯುವಜನರು ತಿಳಿಸಬೇಕಾದ ಅಗತ್ಯಇದೆ ಎಂದು ಹೇಳಿದರು.

ದುಶ್ಚಟ ಮತ್ತು ದ್ವೇಷ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ, ಸಹಬಾಳ್ವೆ, ಸಮನ್ವಯತೆ ಅಗತ್ಯ.ಇದಕ್ಕೆ ತಾಳ್ಮೆ ಬಹಳ ಮುಖ್ಯ ಎಂದು ವಿಶ್ಲೇಷಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಕರಾವಳಿ ಭಾಗದಲ್ಲಿ ಬ್ಯಾರಿ ಸಮುದಾಯ ಹೆಚ್ಚು ವಾಸಿಸುತ್ತಿದ್ದು, ಆತ್ಮೀಯತೆಯನ್ನು ಈ ಸಮುದಾಯದಲ್ಲಿ ಕಾಣಬಹುದು. ಶಾಂತಿ, ಸಹಬಾಳ್ವೆ, ವಿಶಿಷ್ಟ ಗುಣವುಳ್ಳ ಬ್ಯಾರಿ ಸಮುದಾಯ ತನ್ನ ಭಾಷೆ ಮೂಲಕ ಸಾಂಪ್ರದಾಯಿಕ ವಿಷಯಗಳನ್ನು ಜಾಗೃತಗೊಳಿಸಿದೆ ಎಂದರು.ಬ್ಯಾರಿ ಭಾಷೆ ಉಳಿಸಿ-ಬೆಳೆಸಲು ಹಲವಾರು ವರ್ಷಗಳಿಂದ ವಿವಿಧ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಬ್ಯಾರಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಮಾಡಲು ಮನವಿ ಸಲ್ಲಿಸಿದ್ದಾರೆ. ಇದನ್ನುಗಂಭೀರವಾಗಿ ಪರಿಗಣಿಸಿ ಸಭಾಧ್ಯಕ್ಷರ ಮೂಲಕ ಮುಖ್ಯ ಮಂತ್ರಿಗಳ ಬಳಿ ವಿಶೇಷ ಒತ್ತಡ ತಂದುಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು.ಬ್ಯಾರಿ ಸಮುದಾಯಕ್ಕೆ ನಿವೇಶನ ನೀಡುವ ಪ್ರಯತ್ನ ನಡೆದಿದ್ದು, ಈ ಸಂಬಂಧ ಸಂಬಂಧಿಸಿದ ದಾಖಲೆಗಳು ಜಿಲ್ಲಾಡಳಿತದಲ್ಲಿದೆ. ಈ ವಿಚಾರ ಸರ್ಕಾರದ ಮುಂದೆ ತಂದು ಮುಂದಿನ ದಿನಗಳಲ್ಲಿ ಒಳ್ಳೆಯ ನಿವೇಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದ ೨೨೪ ಶಾಸಕರಿಗೆ ಜಾತ್ಯಾತೀತ, ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಎಲ್ಲರೂ ಮೆಚ್ಚುವಂತಹ ಗುಣವಂತರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳಿಂದ ನೂತನವಾಗಿ ೭೧ ಶಾಸಕರು ಆಯ್ಕೆಯಾಗಿದ್ದು, ನಾವೆಲ್ಲ ಸೇರಿ ಒಂದು ಅಸೋಸಿಯೇಷನ್ ರಚಿಸಿಕೊಂಡಿದ್ದು, ಚರ್ಚಿಸುವ ಸಂದರ್ಭದಲ್ಲಿ ಮೊದಲನೆಯದಾಗಿ ಯು.ಟಿ. ಖಾದರ್ ಹೆಸರು ಬರುತ್ತದೆ. ೫ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಮೊದಲ ಬಾರಿಗೆ ಶಾಸಕರಾದವರ ಕಷ್ಟ ಅರಿತಿದ್ದಾರೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಟಿ.ಎಂ ನಾಸಿರ್ ಮಾತನಾಡಿ, ಕರ್ನಾಟಕ ಬ್ಯಾರಿ ಸಾಹಿತ್ಯಅಕಾಡೆಮಿ ನಿರಂತರವಾಗಿ ನಮ್ಮೊಂದಿಗೆ ಕೈಜೋಡಿಸಿದರೆ ಸಮುದಾಯಕ್ಕೆಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯದ ಸಂಖ್ಯೆ ಹೆಚ್ಚಳವಾಗಿದ್ದು, ಸಮುದಾಯ ಭವನ ನಿರ್ಮಿಸಲು ಸಹಕರಿಸ ಬೇಕೆಂದುಕೋರಿದರು.ಈಗಾಗಲೇ ೫ ಎಕರೆ ನಿವೇಶನ ಕಾಯ್ದಿರಿಸಲಾಗಿದೆ. ಅದು ಇನ್ನೂ ನಮ್ಮ ಒಕ್ಕೂಟದ ಕೈಸೇರಿಲ್ಲ. ಕೂಡಲೇ ಮಂಜೂರು ಮಾಡಿಕೊಡುವಂತೆ ಸಭಾಧ್ಯಕ್ಷರು ಮತ್ತು ಶಾಸಕರಲ್ಲಿ ಮನವಿ ಮಾಡಿದರು.ವಿದೇಶಿ ವಿನಿಮಯಕ್ಕೆ ಬ್ಯಾರಿ ಸಮುದಾಯ ಪ್ರಮುಖಕಾರಣವಾಗಿದ್ದು, ಇದರಿಂದ ಕೇಂದ್ರ, ರಾಜ್ಯ ಸರ್ಕಾರದ ಖಜಾನೆಗೆ ಹೆಚ್ಚು ಆದಾಯ ಬರುತ್ತಿದೆ. ಈ ನಿಟ್ಟಿನಲ್ಲಿ ಬ್ಯಾರಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆಯಾಗಿದ್ದು ಈ ಬಾರಿ ಇದನ್ನುಈಡೇರಿಸುವಂತೆ ಒತ್ತಾಯಿಸಿದರು. ಬಹುಮಾನ ವಿತರಣೆಯನ್ನುಕರ್ನಾಟಕ ಬ್ಯಾರಿ ಸಾಹಿತ್ಯಅಕಾಡೆಮಿಯ ಉಮರ್ ವಿತರಿಸಿದರು. ಹಿರಿಯ ಸಾಹಿತಿ ಶಂಷುದ್ದೀನ್‌, ಕೆ. ಮಹಮದ್, ಬಿ.ಎಸ್ . ಮಹಮದ್, ಸಿ.ಎಸ್ ಖಲಂದರ್, ಫಾರೂಕ್, ಅಕ್ರಂಹಾಜಿ ಅಬ್ಬಾಸ್‌ ಕಿರುಗುಂದ. ಬದ್ರಿಯಾ ಮಹಮ್ಮದ್, ಬಿ.ಎಚ್.ನೂರ್ ಮಹಮ್ಮದ್, ಸಿ.ಕೆ. ಇಬ್ರಾಹಿಂ, ಶೇಖಬ್ಬ ಎನ್.ಆರ್.ಪುರ, ಅಬ್ದುಲ್‌ರಝಾಕ್ ಉಪ್ಪಳ್ಳಿ, ಪುತ್ತುಮೋನು, ನಗರಸಭಾ ಸದಸ್ಯರಾದ ಖಲಂದರ್ ಉಪ್ಪಳ್ಳಿ, ಮುನೀರ್ ಶಾಂತಿನಗರ, ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಎ.ಯು.ಹಿಬ್ರಾಹಿಂ, ಬಿ.ಎಚ್.ಮಹಮ್ಮದ್, ಮುಹಮ್ಮದ್‌ ರಫೀಕ್, ಶಾಫೀ, ಶಂಷುದ್ದೀನ್, ಬಿ.ಮಹಮ್ಮದ್ , ಅಬಕರ್ ಸಿದ್ದಿಕ್ ಉಪಸ್ಥಿತರಿದ್ದರು. 3 ಕೆಸಿಕೆಎಂ2ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ನಡೆದ ಬ್ಯಾರಿ ಭಾಷಾ ದಿನಾಚರಣೆಯನ್ನು ಯು.ಟಿ. ಖಾದರ್‌ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ ಹಾಗೂ ಮುಖಂಡರು ಇದ್ದರು.