ಕನ್ಹೇರಿ ಶ್ರೀ ಹೇಳಿಕೆಗೆ ಬಸವ ಭಕ್ತರ ಕಿಡಿ

| Published : Oct 17 2025, 01:03 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ಅಸಾಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವರ್ತನೆ ಖಂಡಿಸಿ ಗುರುವಾರ ಪಟ್ಟಣದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಯಲ್ಲಾಲಿಂಗಮಠದ ಬಸವರಾಜ ಮಹಾರಾಜರ ನೇತೃತ್ವದಲ್ಲಿ ವಿವಿಧ ಬಸವ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ಅಸಾಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವರ್ತನೆ ಖಂಡಿಸಿ ಗುರುವಾರ ಪಟ್ಟಣದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಯಲ್ಲಾಲಿಂಗಮಠದ ಬಸವರಾಜ ಮಹಾರಾಜರ ನೇತೃತ್ವದಲ್ಲಿ ವಿವಿಧ ಬಸವ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಭಟನಾಕಾರರು, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರ ಸುಟ್ಟು ಕಿಡಿಕಾರಿದರು. ಬಳಿಕ, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಕನ್ಹೇರಿ ಶ್ರೀಗಳು ಅವಹೇಳನಕಾರಿಯಾಗಿ ಮಾತನಾಡಿದ್ದರಿಂದಲೇ ಬಸವ ಭಕ್ತರು ಬೀದಿಗಿಳಿಯಬೇಕಾಗಿದೆ. ಬಸವ ಸಂಸ್ಕೃತಿ ಕುರಿತು ಅರಿಯದೇ ಈ ರೀತಿ ಮಾತನಾಡಿದ್ದು ಸರಿಯಲ್ಲ. ಆ ಶಬ್ದಗಳನ್ನು ಕೇಳಿದರೆ ಅವರಿಗೆ ಸಂಸ್ಕಾರ ಇಲ್ಲ ಎಂಬುದು ಗೊತ್ತಾಗುತ್ತದೆ. ಇವರ ವಿರುದ್ಧ ಉಗ್ರ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಈ ಅಭಿಯಾನದ ಯಶಸ್ಸಿಗೆ ನಾಡಿನ ತುಮಕೂರು, ಗದಗ, ಬಾಲ್ಕಿ, ಇಲಕಲ್ಲ ಶ್ರೀಗಳು ಸೇರಿದಂತೆ ನಾಡಿನ ನೂರಾರು ಶ್ರೀಗಳು ಹಗಲಿರುಳು ಶ್ರಮಿಸಿದ್ದಾರೆ. ಅಭಿಯಾನದಲ್ಲಿ ಯಾವ ವಿಷಯಗಳು ಚರ್ಚೆಯಾಗಿವೆ ಎಂಬುದನ್ನು ಅವರು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಏನಾದರೂ ಗೊಂದಲವಿದ್ದರೆ ಬಹಿರಂಗವಾಗಿ ಅವರು ಚರ್ಚೆಗೆ ಬಂದು ನಿವಾರಿಸಿಕೊಳ್ಳಬಹುದು. ಇದನ್ನು ಬಿಟ್ಟು ಅವರ ಸ್ಥಾನಕ್ಕೆ ಅಗೌರವ ತರುವ ಸಂಗತಿಯಲ್ಲ. ಇವರು ಬಸವನಬಾಗೇವಾಡಿಯಲ್ಲಿ ಮಠ ನಿರ್ಮಿಸುತ್ತಿದ್ದಾರೆ. ಅವರು ಬಸವ ಸಂಸ್ಕೃತಿ ಅಳವಡಿಸಿಕೊಳ್ಳಲಿ. ಅವರೇ ಬಸವ ಭಕ್ತರ ಕ್ಷಮೆ ಕೋರಬೇಕು ಎಂದರು.

ಪಿಕೆಪಿಎಸ್ ಬ್ಯಾಂಕ್‌ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಸಾಹಿತಿ ಲ.ರು.ಗೊಳಸಂಗಿ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಹಾಲುಮತ ಸಮಾಜದ ಸಂಗಮೇಶ ಓಲೇಕಾರ, ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಶ್ರೀಗಳು ರಾಜ್ಯದ ಬಸವ ಭಕ್ತರ ಕ್ಷಮೆ ಕೋರಬೇಕು. ಸಿಎಂ ಸಿದ್ದರಾಮಯ್ಯನವರು ಶ್ರೀಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದು, ಕ್ರಮ ಕೈಗೊಳ್ಳುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ಮುಖಂಡರಾದ ಎಂ.ಜಿ.ಆದಿಗೊಂಡ, ಎಸ್.ಎಸ್.ಝಳಕಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಆರ್.ಜಿ.ಅಳ್ಳಗಿ, ಸಿ.ಎಲ್.ಮುರಾಳ, ಎಸ್.ಎ.ದೇಗಿನಾಳ, ಮಹಾಂತೇಶ ಮಡಿಕೇಶ್ವರ, ಎಚ್.ಎಸ್.ಬಿರಾದಾರ, ಬಸವರಾಜ ಹಾರಿವಾಳ, ಶ್ರೀಕಾಂತ ಕೊಟ್ರಶೆಟ್ಟಿ, ಪ್ರವೀಮ ಪೂಜಾರಿ, ಮಲ್ಲಿಕಾರ್ಜುನ ಹಡಪದ, ಬಸವರಾಜ ಏವೂರ, ಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ, ಎಸ್.ಜಿ.ಮೊಕಾಶಿ, ಮುರುಗೆಪ್ಪ ಚಿಂಚೋಳಿ, ರುದ್ರಗೌಡ ಬಿರಾದಾರ, ಮಹಾಂತೇಶ ಹಂಜಗಿ, ಹಣಮಂತ್ರಾಯ ಬಿರಾದಾರ, ಪ್ರಭಾಕರ ಖೇಡದ, ಶಿವಯೋಗಿ ಒಣರೊಟ್ಟಿ, ಸಂಗಪ್ಪ ಬಶೆಟ್ಟಿ, ಸಂಕನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಡಾ.ಮಲ್ಲಿಕಾರ್ಜುನ ಹಳ್ಳಿ, ಪ್ರಭಾವತಿ ಹಳ್ಳಿ, ಎಚ್.ಎಸ್.ಹತ್ತಿ, ಕಸ್ತೂರಿ ಬಿರಾದಾರ, ಎಸ್.ಕೆ.ಸೋಮನಕಟ್ಟಿ, ಎಂ.ಎಸ್.ತಳವಾರ, ಸಿದ್ದಲಿಂಗಪ್ಪ ಪಾಟೀಲ, ಬಸಮ್ಮ ಪಡಶೆಟ್ಟಿ, ಕಸ್ತೂರಿ ಅಪ್ಪಣ್ಣನವರ, ಶೋಭಾ ರೇವಡಕರ, ಸಾವಿತ್ರಿ ಅರಸನಾಳ, ಕಮಲಾ ಸಜ್ಜನ, ಶಾಂತಾ ಬಸರಕೋಡ, ಯಮನಕ್ಕ ಅಂಬಳೂರ ಸೇರಿ ಹಲವರು ಭಾಗವಹಿಸಿದ್ದರು.