ಬಸವ ವಿಚಾರಧಾರೆಗಳು ಸಂವಿಧಾನದಲ್ಲಿ ಪ್ರಸ್ತಾಪ

| Published : May 01 2025, 12:51 AM IST

ಬಸವ ವಿಚಾರಧಾರೆಗಳು ಸಂವಿಧಾನದಲ್ಲಿ ಪ್ರಸ್ತಾಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರತಿಯೊಬ್ಬರು ದಯಾ ಗುಣ ಬೆಳೆಸಿಕೊಳ್ಳಬೇಕು ಎಂದು ಬುದ್ಧ ಕರುಣೆಯ ಮಹತ್ವವನ್ನು ಬಸವಣ್ಣನವರು ಸಾರಿದವರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬರು ದಯಾ ಗುಣ ಬೆಳೆಸಿಕೊಳ್ಳಬೇಕು ಎಂದು ಬುದ್ಧ ಕರುಣೆಯ ಮಹತ್ವವನ್ನು ಬಸವಣ್ಣನವರು ಸಾರಿದವರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ ಹನುಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಹೊಡೆದೊಡಿಸಲು ಶರಣರು ವಚನಗಳ ಮೂಲಕ ಸಾರಿದ್ದಾರೆ. ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಿ, ಸಮಸಮಾಜ ಕನಸು ಕಂಡ ಬಸವಣ್ಣನವರು, ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂಬ ಕಾಯಕವೇ ಕೈಲಾಸ ಎಂದು ಸಾರಿದರು. ಸಂಸ್ಕೃತಿ, ರೀತಿ ನೀತಿಗಳ ಬಗ್ಗೆಯೂ ಅವರ ವಚನಗಳು ಬೆಳಕು ಚೆಲ್ಲುತ್ವವೆ. ಅವರ ಆದರ್ಶ ವಿಚಾರಗಳು, ವಚನಗಳ ಸಾರ ಅರಿತು ನಾವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಸವಣ್ಣನವರ ವಿಚಾರಧಾರೆಗಳು ಪ್ರಜಾಪ್ರಭುತ್ವದ ಆಶಯಗಳು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಸಾಮಾಜಿಕ ಸಮಾನತೆ, ಜಾತ್ಯಾತೀತತೆ ಹಾಗೂ ಸಹೋದರತ್ವ ವಿಷಯಗಳನ್ನು ಕಾಣಬಹುದಾಗಿವೆ. ಅನುಭವ ಮಂಟದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಎಲ್ಲರನ್ನೂ ಒಗ್ಗೂಡಿಸಿ ಕಾಯಕ ಹಾಗೂ ದಾಸೋಹ ತತ್ವಗಳನ್ನು ಬಿತ್ತರಿಸಿ, ಎಲ್ಲರೂ ಸಮಾನರು ಎಂಬುದನ್ನು ತಿಳಿಸಿದ ಮಹಾನ್ ಮಾನವತಾವಾದಿ ಬ॒ಸವಣ್ಣನವರು, ಜಾತಿ ರಹಿತವಾದ ಕಾಯಕ ತತ್ವವನ್ನು ಸಾರಿದರು. ಬಸವಾದಿ ಶರಣರ ಚಿಂತನೆಗಳಾದ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ತಳಹದಿ ಸಂವಿಧಾನದಲ್ಲಿ ಅಡಕವಾಗಿದೆ ಎಂದು ವಿವರಿಸಿದರು.

ಮಂಜುನಾಥ ಜುನಗೊಂಡ ಮಾತನಾಡಿ, ಸಮ ಸಮಾಜದ ಕನಸು ಕಂಡವರು, ಅಜ್ಞಾನವೆಂಬ ಕತ್ತಲೆ ತೊಲಗಿಸಲು ಅವರ ವಚನಗಳು ದೀವಿಗೆಯಾಗಿವೆ. ಸಮಾಜದ ಅಂಕುಡೊಂಕುಗಳ ಹೋಗಲಾಡಿಸಲು ವಚನಗಳ ಮೂಲಕ ಬೆಳಕು ಚೆಲ್ಲಿದ ಅವರು, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಾರಿದ ಬಸವಣ್ಣನವರು ಸಮಾನತೆ ಹರಿಕಾರ ಬಸವಣ್ಣ ಭಕ್ತಿ ಭಂಡಾರಿಯಾಗಿದ್ದರು ಎಂದು ಸ್ಮರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಆಚಾರ-ವಿಚಾರಗಳ ಕುರಿತು ಮಕ್ಕಳಿಗೆ ತಿಳಿಸಬೇಕು. ಶರಣ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿದೆ. ಕಾಯಕ ಹಾಗೂ ದಾಸೋಹ ತತ್ವಗಳು ಶರಣರ ತತ್ವಗಳನ್ನು ಪರಿಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಿ.ಸಿ.ನಾಗಠಾಣ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಪಾಲಿಕೆ ವಲಯ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.