ಸಾರಾಂಶ
ದಾಬಸ್‌ಪೇಟೆ: 12ನೇ ಶತಮಾನದ ತತ್ವಜ್ಞಾನಿ, ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ದೇಶಕಂಡ ಬಹುದೊಡ್ಡ ಸಮಾಜ ಸುಧಾಕರ. ವಚನ ಸಾಹಿತ್ಯದ ಮೂಲಕ ಜನರನ್ನು ತಲುಪಿದ ಸಾಹಿತಿ. ಸಮಾನತೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಜ್ಞಾನಿ ಎಂದು ಮುಖಂಡ ಎಡೇಹಳ್ಳಿ ಉದಯ್ ಕುಮಾರ್ ತಿಳಿಸಿದರು.

ಬಸವ ಜಯಂತಿ ಪ್ರಯುಕ್ತ ಎಡೇಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ,ಬಸವಣ್ಣನವರು ಇಷ್ಟಲಿಂಗ ಪೂಜೆಯನ್ನು ಪರಿಚಯಿಸಿದರು. ಎಲ್ಲರು ಇಷ್ಟಲಿಂಗವನ್ನು ಧರಿಸಿ ಪೂಜಿಸಬಹುದು ಎಂದು ಸಮಾಜಕ್ಕೆ ಕರೆ ನೀಡಿದ ಪ್ರಮುಖರು. ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕು ಸಿಗಬೇಕು ಎಂದು ಪ್ರತಿಪಾದಿಸಿ ಪ್ರಪಂಚದ ಮೊದಲ ಸಂಸತ್ತು ಎಂದೇ ಕರೆಯುವ ಅನುಭವ ಮಂಟಪ ಸ್ಥಾಪಿಸಿದವರು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಸೇರಿದಂತೆ ಅನ್ನ ಪ್ರಸಾದವನ್ನು ಹಂಚಿದರು. .ಈ ಸಂದರ್ಭದಲ್ಲಿ ಸೋಂಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್, ಗ್ರಾಮಸ್ಥರಾದ ವೀರಭದ್ರಯ್ಯ, ಮಾಗಡಯ್ಯ, ಕೃಷ್ಣಪ್ಪ, ತಿಮ್ಮೇಗೌಡ, ಸಿದ್ದಲಿಂಗಯ್ಯ, ರೇಣುಕೇಶ್ವರ, ಮರಿಯಪ್ಪಗೌಡ, ರವಿಕುಮಾರ್, ಪ್ರವೀಣ್, ರಾಜಶೇಖರ್, ಮೋಹನ್, ನವೀನ್, ಕುಮಾರ, ಸುರೇಶ್, ಹನುಮಯ್ಯ, ವಿರುಪಾಕ್ಷಯ್ಯ, ಹರ್ಷ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.